ರಾಷ್ಟ್ರೀಯ ಸೇವಾ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಬೆಳೆಯಲು ಸಹಕಾರಿ:ಮಾಧವ್ ಅಭಿಮತ
ಚಳ್ಳಕೆರೆ: ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ಶಿಬಿರ ಹಮ್ಮಿಕೊಳ್ಳುವ ಮೂಲ ಉದ್ದೇಶ ಎಂದರೆ ಅವರಲ್ಲಿ ರಾಷ್ಟ್ರೀಯ ಸೇವಾ ಮನೋಭಾವ ಬೆಳೆದು ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ರಾಷ್ಟ್ರೀಯ ಸೇವಾ ಮನೋಭಾವ ಬೆಳೆದು ರಾಷ್ಟ್ರಕ್ಕೆ ಉತ್ತಮ ಕೊಡುಗೆ ನೀಡಲಿ ಎಂಬುದಾಗಿದೆ ಎಂದು ಹೆಗ್ಗೆರೆ ತಾಯಮ್ಮ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಾಧವ್ ತಿಳಿಸಿದರು.
ನಗರದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಶಾಲೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಶಾಲೆಯ ವತಿಯಿಂದ ಎನ್ ಎಸ್ ಎಸ್ ನಿಂದ ಶಿಬಿರ ಹಮ್ಮಿಕೊಂಡಿರಲಿಲ್ಲ ಆ ಸುಯೋಗ ಇಂದು ಒದಗಿ ಬಂದಿದೆ ಪ್ರಧಾನಿ ಮೋದಿಯವರು ಸಮುದ್ರದ ದಡವನ್ನು ಸ್ವಚ್ಛಗೊಳಿಸುವ ಮೂಲಕ ನಮಗೆಲ್ಲ ಮಾದರಿಯಾಗಿದ್ದಾರೆ ಇಂತಹವರ ಕಾರ್ಯದಿಂದ ಉತ್ತೇಜನಗೊಂಡು ವಿದ್ಯಾರ್ಥಿಗಳು ಪರಿಸರ ಸ್ವಚ್ಛತೆಯನ್ನು ಮಾಡಬೇಕು ವಿದ್ಯಾರ್ಥಿಗಳು ಬೆಳೆಯುವ ಮರವಿದ್ದಂತೆ ಇಂದು ಒಂದು ಸಸಿಯನ್ನು ನೆಟ್ಟು ಪೋಷಿಸಿದಾಗ ಮುಂದೆ ಮರವಾಗಿ ನೆರಳು ನೀಡುತ್ತದೆ ಹಾಗೆಯೇ ರಾಷ್ಟ್ರೀಯ ಸ್ವಯಂಸೇವೆಯಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳುವುದರಿಂದ ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುವಾಗ ಅದರಲ್ಲಿ ಸಿಗುವ ಸಂತೋಷವೇ ಬೇರೆ ಆಗಿರುತ್ತದೆ ಗಿಡಮರಗಳನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.
ಶಿಕ್ಷಕಿ ಗಂಗಾಬಾಯಿ ಮಾತನಾಡಿ ಸಾಲುಮರದ ತಿಮ್ಮಕ್ಕ ಉದ್ಯಾನವನ ಆಯ್ಕೆ ಮಾಡಿಕೊಳ್ಳಲು ಮುಖ್ಯ ಕಾರಣ ವಿದ್ಯಾರ್ಥಿಗಳಲ್ಲಿ ಗಿಡ ಮರಗಳ ಪರಿಚಯಿಸುವುದು ಹಾಗೂ ಇಲ್ಲಿ ಸ್ವಚ್ಛಗೊಳಿಸುವುದು ಮುಖ್ಯ ಉದ್ದೇಶ ಬೇಸಿಗೆ ಇರುವುದರಿಂದ ಗಿಡಮರಗಳು ಒಣಗದಂತೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನನಿತ್ಯ ತಮ್ಮ ಕೈಲಾದಷ್ಟು ಮಟ್ಟಿಗೆ ನೀರನ್ನು ಹಾಕಿದರೆ ಗಿಡಗಳು ಮರವಾಗಿ ಬೆಳೆದು ಮುಂದೊಂದು ದಿನ ನಮಗೆ ವಿಶ್ರಾಂತಿ ಪಡೆಯಲು ನೆರಳಾಗಿ ನಿಲ್ಲುತ್ತವೆ ವಿದ್ಯಾರ್ಥಿಗಳು ಯಾವುದೇ ಆಮಿಷಗಳಿಗೆ ಒಳಗಾಗದೆ ಸಮಾಜ ಸೇವೆಯನ್ನು ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿನಿ ಅಂಕಿತ ಮಾತನಾಡಿ ಪರಿಸರ ನಮ್ಮದು ಎಂಬ ಭಾವನೆ ಬೆಳೆಸಿಕೊಂಡು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎನ್ಎಸ್ಎಸ್ ಶಿಬಿರದಿಂದ ಶ್ರಮದಾನದ ಬಗ್ಗೆ ಮತ್ತು ಗಿಡ ಮರ ಬೆಳೆಸುವ ಹಾಗೂ ಔಷಧಿ ಸಸ್ಯಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಗಿದೆ ಶಾಲೆಯಲ್ಲಿ ಓದು ಬರಹದ ಜೊತೆಗೆ ಇಂತಹ ಕಾರ್ಯಕ್ರಮಗಳನ್ನು ನಮ್ಮ ಶಾಲೆಯಲ್ಲಿ ಹಮ್ಮಿಕೊಂಡಿದ್ದರಿಂದ ನಮಗೆ ಪ್ರಕೃತಿ ಸೌಂದರ್ಯ ಸವಿಯಲು ಹಾಗೂ ಪರಿಸರದ ಬಗ್ಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರಾದ ಗಂಗಬಾಯಿ,ಪ್ರಾಣೇಶ ಪ್ರದೀಪ್ ಜಮೀನಾ ರಾಜಮ್ಮ, ವನಜಾಕ್ಷಿ, ಜ್ಯೋತಿ ನಾಗರತ್ನ ,ರಾಜಕುಮಾರ್ ಪ್ರಕಾಶ,ನಾಗರಾಜ್ ಪೂರ್ಣಿ ಮಾ ,ಸುಜಾತ ,ಗೀತ, ಸುಜಾತ ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.