Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೈಕೊಟ್ಟ ಮುಂಗಾರು ಮಳೆ : ಮೋಡ ಬಿತ್ತನೆ ಯೋಚನೆ ಸದ್ಯಕ್ಕಿಲ್ಲ ಎಂದ ಸಚಿವರು..!

12:49 PM Jun 19, 2023 IST | suddionenews
Advertisement

 

Advertisement

 

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆ ಎದ್ದು ಕಾಣುತ್ತಿದೆ. ಇಷ್ಟೊತ್ತಿಗಾಗಲೇ ಭೂಮಿಯ ಉಳುಮೆ ಮಾಡಬೇಕೆನ್ನುವಷ್ಟರ ಮಟ್ಟಿಗೆ ಮಳೆ ಬರಬೇಕಾಗಿತ್ತು. ಆದರೆ ಆರಂಭದಲ್ಲಿ ಭೂಮಿ ತಂಪು ಮಾಡಿದ ಮಳೆರಾಯ ಮತ್ತೆ ಸುಳಿಯಲೇ ಇಲ್ಲ. ರೈತರೆಲ್ಲ ಬೇಸರದಲ್ಲಿಯೇ ಮೋಡದತ್ತ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದಾರೆ.

Advertisement

ಇನ್ನು ಮಳೆಗಾಗಿ ಮೋಡ ಬಿತ್ತನೆ ಮಾಡಬಹುದಾ ಎಂಬ ಕುತೂಹಲವೂ ಇತ್ತು. ಅದಕ್ಕೆ ಸಚಿವ ಕೃಷ್ಣ ಭೈರೇಗೌಡ ಉತ್ತರವನ್ನು ನೀಡಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿದೆ. ಆದರೆ ಸದ್ಯಕ್ಕೆ‌ ಮೋಡ ಬಿತ್ತನೆ ಮಾಡುವ ಯಾವುದೇ ಆಲೋಚನೆ ಇಲ್ಲ ಎಂದಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜೂನ್ ತಿಂಗಳಲ್ಲಿ ಮಳೆಯ ಸಮಸ್ಯೆ ಎದುರಾಗಿದೆ. ಮುಂಗಾರು ಮಳೆ ತಡವಾಗಿ ಆರಂಭವಾಗಿದೆ. ಚಂಎಮಾರುತದ ಪ್ರಭಾವ, ತೇವಾಂಶದ ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ‌. ಹವಮಾನ ಇಲಾಖೆಯ ತಜ್ಞರು ನೀಡಿರುವ ಮಾಹಿತಿ ಪ್ರಕಾರ, ಮುಂಗಾರು ಮತ್ತೆ ಚುರುಕಾಗುತ್ತದೆ. ಉಡುಪಿ, ಕಾರವಾರದಲ್ಲಿ ನಿರೀಕ್ಷೆಯಂತೆ ಮಳೆಯಾಗಲಿದೆ. ನಾಳೆಯಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಚುರುಕುಗೊಳ್ಳಲಿದೆ ಎಂದಿದ್ದಾರೆ.

Advertisement
Tags :
cloudideaministerMonsoonrainsseedingಮುಂಗಾರು ಮಳೆಮೋಡ ಬಿತ್ತನೆಯೋಚನೆಸಚಿವರುಸುದ್ದಿಒನ್
Advertisement
Next Article