ನಮಗೂ ಪರ್ಯಾಯವಾಗಿ ಭೂಮಿ ಕೊಡಬೇಕು ಅಲ್ವಾ : ರಾಜಮಾತೆ ಪ್ರಮೋದಾದೇವಿ ಹಿಂಗ್ಯಾಕ್ ಅಂದ್ರು..?
ಮೈಸೂರು: ಕೆಲವರು ಭೂಮಿ ಕಳೆದುಕೊಂಡರೆ ಅದು ಭೂಮಿ. ನಾವೂ ಕಳೆದುಕೊಂಡದ್ದು ಭೂಮಿ ಅಲ್ವಾ. ನಮಗೂ ಭೂಮಿಗೆ ಪರ್ಯಾಯವಾಗಿ ಭೂಮಿ ಕೊಡಬೇಕು ಅಲ್ವಾ ಎಂದು ರಾಜಮಾತೆ ಪ್ರಮೋದಾ ದೇವಿ ಆಕ್ರೋಶ ಹೊರ ಹಾಕಿದ್ದಾರೆ.
ಬೇರೆಯವರು ಕೇಳಿದಾಗ ಕೊಡುವವರು ನಾವೂ ಕೇಳಿದಾಗ ಯಾಕೆ ಕೊಡುವುದಿಲ್ಲ. ಸರ್ವೇ ನಂಬರ್ 4. ಕುರುಬರಹಳ್ಳಿ ಸಿದ್ದಾರ್ಥ್ ಲೇ ಔಟ್, ವಿಜಯಶ್ರೀಪುರ ಬಡಾವಣೆಗಳೆಲ್ಲವೂ ನಮ್ಮದೇ ಭೂಮಿ. ನಮ್ಮ ಹೆಸರಿನಲ್ಲಿರುವ ಅದರಷ್ಟೋ ಭೂಮಿಯನ್ನು ಮೂಡಾ ವಶಪಡಿಸಿಕೊಂಡಿದೆ. ಅದು 1 ಎಕರೆ, 100 ಎಕರೆ, ಸಾವಿರಾರು ಎಕರೆಯೇ ಆಗಿರಬಹುದು. ನಮಗೂ ಸರ್ಕಾರ ಪರಿಹಾರ ಕೊಡಬೇಕು ಅಲ್ಲವೆ. ರಾಜ್ಯ ಸರ್ಕಾರ ನಮ್ಮನ್ನು ಶತ್ರುವಿನಂತೆ ನೋಡುತ್ತಿದೆ ಎಂದು ಬೇಸರ ಹೊರ ಹಾಕಿದ್ದಾರೆ.
ನನ್ನ ಮಗ ರಾಜಕಾರಣಿಯಾದರೂ ಆಸ್ತಿ ವಿಚಾರದಲ್ಲಿ ಪ್ರಭಾವ ಬೀರುವುದಿಲ್ಲ. ನಮ್ಮ ಯಜಮಾನರು ನಾಲ್ಕು ಬಾರಿ ಎಂಪಿ ಆಗಿದ್ದರು. ಆದರೆ ಒಮ್ಮೆಯೂ ಅಧಿಕಾರಿಗಳನ್ನು ಕರೆದು ನಮ್ಮ ಜಾಗ ನಮಗೆ ಕೊಡಿ ಎಂದು ಕೇಳಿಲ್ಲ. ನಾನು ಕೂಡ ಅವರನ್ನು ಈ ಬಗ್ಗೆ ಕೇಳಲ್ಲ. ನಾವು ಕಾನೂನು ರೀತಿಯಲ್ಲಿಯೇ ಹೋರಾಟ ಮಾಡುತ್ತೆವೆ ನಮ್ಮ ಆಸ್ತಿ ವಿವಾದವನ್ನು ನಾವು ಕಾನೂನು ಮೂಲಕವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಹೇಳಿದ ಪ್ರಮೋದಾ ದೇವಿಯವರು. ಆ ಸರ್ಕಾರ ಈ ಸರ್ಕಾರ ಅಂತ ಏನಿಲ್ಲಾ ನಮಗೆ ಎಲ್ಲಾ ಸರ್ಕಾರಗಳು ತೊಂದರೆ ಕೊಟ್ಟಿವೆ. ಈಗಲೂ ಕೊಡುತ್ತಲೇ ಇವೆ ಎಂದು ಮೈಸೂರಿನಲ್ಲಿ ಪ್ರಮೋದಾ ದೇವಿ ಬೇಸರ ವ್ಯಕ್ತಪಡಿಸಿದ್ರು. ಚಾಮುಂಡಿ ಬೆಟ್ಟಕ್ಕೆ ಸಂಬಂಧಿಸಿದಂತೆ ಪ್ರಮೋದಾ ದೇವಿ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.