For the best experience, open
https://m.suddione.com
on your mobile browser.
Advertisement

ತಾಕತ್ತಿನ ಬಗ್ಗೆ ಮಾತನಾಡಿದ ಶಿವಲಿಂಗೇಗೌಡರಿಗೆ ನಿಮ್ಗೆ ಧಮ್ ಇದ್ಯಾ ಎಂದ ಕುಮಾರಸ್ವಾಮಿ..?

03:59 PM Jul 04, 2023 IST | suddionenews
ತಾಕತ್ತಿನ ಬಗ್ಗೆ ಮಾತನಾಡಿದ ಶಿವಲಿಂಗೇಗೌಡರಿಗೆ ನಿಮ್ಗೆ ಧಮ್ ಇದ್ಯಾ ಎಂದ ಕುಮಾರಸ್ವಾಮಿ
Advertisement

Advertisement
Advertisement

ಬೆಂಗಳೂರು: ಕಲಾಪ ಆರಂಭವಾಗಿದೆ. ಇದಕ್ಕೂ ಮುನ್ನ ಶಾಸಕ ಶಿವಲಿಂಗೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಮಾತಿನ ಚಕಮಕಿ ನಡೆದಿದೆ. ಶಾಸಕ ಶಿವಲಿಂಗೇಗೌಡ ವಿಧಾನಸೌಧದಲ್ಲಿ ಮಾತನಾಡಿ, ಸಿಎಂ ಗೃಹಕಚೇರಿಯಲ್ಲಿ ಲಂಚ ಸ್ವೀಕರಿಸುವ ಆರೋಪದಲ್ಲಿ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡಬಾರದು. ಯಾವುದಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಬಾಯಿಗೆ ಬಂದಂತೆ ಮಾತನಾಡಬಾರದು. ತಾಕತ್ ಇದ್ದರೆ ಅಕ್ರಮದ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಈ ಮಾತಿಗೆ ವಿಧಾನಸೌಧದಲ್ಲಿಯೇ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ನನ್ನ ತಾಕತ್ ಇರ್ಲಿ, ನಿಮ್ಗೆ ಧಮ್ ಇದ್ಯಾ. ಒಂದೇ ತಿಂಗಳಲ್ಲಿ ಕಾಂಗ್ರೆಸ್ ನವರು ಹಗಲು ದರೋಡೆ ಮಾಡೋದಕ್ಕೆ ಹೊರಟಿದ್ದೀರಿ. ಬೀದಿಯಲ್ಲೇ ಜನ ಮಾತನಾಡುತ್ತಿದ್ದಾರೆ. ನಿಮ್ಮ ಕೈಯಲ್ಲಿ ದಾಖಲೆ ಕೊಡೋದಕ್ಕೆ ತಾಕತ್ತಿಲ್ಲ. ಆದರೆ ಕುಮಾರಸ್ವಾಮಿ, ಜನತಾದಳಕ್ಕೆ ಇನ್ನೂ ತಾಕತ್ತಿದೆ. ದಾಖಲೆ ಬಿಡುಗಡೆ ಮಾಡೋದಕ್ಕೆ ಟೈಮ್ ಬರುತ್ತೆ. ಆಗ ದಾಖಲೆ ಬಿಡುಗಡೆ ಮಾಡಿ ಅನ್ನೋರ ಆಸೆ ನೆರವೇರಿಸಿ ಕೊಡುತ್ತೇನೆ.

Advertisement

ದಾಖಲೆ ಕೊಟ್ಟಾಗ ಯಾವ ಇಲಾಖೆಯಲ್ಲಿ ಯಾವ ಮಂತ್ರಿಯ ಸುಪರ್ದಿಯಲ್ಲಿ ನಡೆದಿದೆ ಅನ್ನೋದನ್ನ ಹೇಳ್ತೀನಿ. ಆ ಮಂತ್ರಿ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ನಿಮಗೆ ಇದ್ಯಾ ಎಂದು ಪ್ರಶ್ನಿಸುವ ಮೂಲಕ ಸವಾಲು ಹಾಕಿದ್ದಾರೆ.

Advertisement

Tags :
Advertisement