Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮುಂದೆ ಬಿಜೆಪಿ ಗಲ್ಲಿ ಗಲ್ಲಿಯಲ್ಲಿ ಇಬ್ಭಾಗವಾಗುತ್ತೆ : ಈಶ್ವರಪ್ಪ ಎಚ್ಚರಿಕೆ

10:10 PM Aug 12, 2024 IST | suddionenews
Advertisement

 

Advertisement

ಶಿವಮೊಗ್ಗ: ಬಿಜೆಪಿ ನಾಯಕರು ಬೆಳಗಾವಿಯಲ್ಲಿ ಸಭೆ ನಡೆಸಿದ್ದಾರೆ. ಈ ಸಂಬಂಧ ಕೆ.ಎಸ್.ಈಶ್ವರಪ್ಪ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

 

Advertisement

ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದು ಆತಂಕ ತಂದಿದೆ. ಅವರು ಪಕ್ಷದಲ್ಲಿ ಏನೇನು ನಡೆದಿದೆ ಎಂಬುದನ್ನು ಹೇಳಿಕೊಂಡಿಲ್ಲ. ಪಾದಯಾತ್ರೆ ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಒಂದು ವೇಳೆ ಇದು ನಡೆದಿದ್ದೇ ನಿಜವಾದರೆ ಬಿಜೆಪಿ ಗಲ್ಲಿ ಗಲ್ಲಿಯಲ್ಲಿ, ತಾಲೂಕು ಮಟ್ಟದಲ್ಲಿ ಇಬ್ಭಾಗವಾಗಲಿದೆ. ಸಭೆ ಸೇರಿದ ನಾಯಕರಲ್ಲಿ ಹಲವರು ಆರ್ ಎಸ್ ಎಸ್ ನಲ್ಲಿ ಇದ್ದವರು. ಬಿಜೆಪಿಯನ್ನು ಕಟ್ಟಿದವರು. ಪಕ್ಷದಲ್ಲಿ ತಮಗೆ ಆದ ನೋವನ್ನು ಅವರು ಹೇಳಿಕೊಂಡಿಲ್ಲ.

ಪಕ್ಷದ ಸಿದ್ಧಾಂತದ ಅಡಿ ಕೆಲಸ‌ಮಾಡಿದರು ಸಹ ಅವರು ನೋವು ತಿಂದಿದ್ದಾರೆ. ಗಣೇಶ ಚತುರ್ಥಿ ಬಳಿಕ ಪಾದಯಾತ್ರೆ ಮಾಡುವುದಾಗಿ ಹೇಳಿದ್ದಾರೆ. ಕೇಂದ್ರ ನಾಯಕರು ಸಭೆ ನಡೆಸಿದ ನಾಯಕರನ್ನು ಕಡೆಗಣಿಸಬಾರದು. ಹನ್ನೆರಡು ಜನ ಮಾತ್ರ ಸಭೆ ನಡೆಸಿದ್ದಾರೆ. ಕೇಂದ್ರದ ನಾಯಕರು ತಾತ್ಸಾರ ಮಾಡಬಾರದು. ಪಾದಯಾತ್ರೆ ನಡೆಸಿದ್ದೇ ಆದಲ್ಲಿ ಗಲ್ಲಿ ಗಲ್ಲಿಯಲ್ಲೂ ಪಕ್ಷ ಎರಡು ಹೋಳಾಗುತ್ತದೆ.

ಯಡಿಯೂರಪ್ಪ ಪುತ್ರ ವುಜಯೇಂದ್ರ ಅವರನ್ನು ರಾಜ್ಯಾಧ್ಯಜ್ಷರನ್ನಾಗಿ‌ಮಾಡಿದ್ದೇ ಎಲ್ಲರಿಗೂ ಆಶ್ಚರ್ಯವಾಗಿತ್ತು. ಯಡಿಯೂರಪ್ಪ ಕುಟುಂಬಕ್ಕೆ ಅಧಿಕಾರ ನೀಡಿದ್ದೆ ಲೋಕಸಭೆಯಲ್ಲಿ ಬಿಜೆಪಿ 25ರಿಂದ 17 ಸ್ಥಾನಕ್ಕೆ ಇಳಿದಿದ್ದು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಪಕ್ಷ ಬಲ ಹೊಂದಿತ್ತು.ಚಾಗ ಹೆಚ್ಚು ಸ್ಥಾನ ಗಳಿಸಿತ್ತು. ಆದರೆ ಅದು ಈಗ ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಅವರ ಕುಟುಂಬದ ಕೈಯಲ್ಲಿ ಪಾರ್ಟಿ ಕೊಡಲು ಕೃಂದ್ರದ ನಾಯಕರಿಗೆ ಯಾಕಿಷ್ಟು ಮೋಹ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

Advertisement
Tags :
bengaluruchitradurgasuddionesuddione newsಚಿತ್ರದುರ್ಗಬಿಜೆಪಿಬೆಂಗಳೂರುಮಾಜಿ ಸಚಿವ ಕೆ.ಎಸ್.ಈಶ್ವರಪ್ಪಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article