For the best experience, open
https://m.suddione.com
on your mobile browser.
Advertisement

ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿಯಾಗಿ ಕೆ.ಸಿ.ವೀರೇಂದ್ರ ಪಪ್ಪಿ ನೇಮಕ

05:37 PM Jun 13, 2023 IST | suddionenews
ಎಸ್ ಜೆ ಎಂ  ವಿದ್ಯಾಪೀಠದ ಕಾರ್ಯದರ್ಶಿಯಾಗಿ ಕೆ ಸಿ ವೀರೇಂದ್ರ ಪಪ್ಪಿ ನೇಮಕ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ,(ಜೂ. 13) :  ಎಸ್.ಜೆ.ಎಂ. ವಿದ್ಯಾಪೀಠದ ನೂತನ ಕಾರ್ಯದರ್ಶಿಯಾಗಿ ಶಾಸಕರಾದ ಕೆ.ಸಿ. ವೀರೇಂದ್ರ (ಪಪ್ಪಿ) ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ನಂತರ ಮಾತನಾಡಿದ ಅವರು, ಇದೊಂದು ನನಗೆ ಬಯಸದೆ ಬಂದ ಭಾಗ್ಯ. ನನ್ನ ಮೇಲೆ ನಂಬಿಕೆಯಿಟ್ಟು ಈ ಹುದ್ದೆ ನೀಡಿರುವುದಕ್ಕೆ ನನಗೆ ಅತೀವ ಸಂತೋಷವಾಗಿದೆ. ಶ್ರೀಮಠದ ಎಲ್ಲ ದಾಖಲೆಗಳನ್ನು ಈಗಿರುವ ಆಡಳಿತಾಧಿಕಾರಿಗಳು ಹಸ್ತಾಂತರಿಸಬೇಕು.

Advertisement
Advertisement

ಶ್ರೀಮಠದಲ್ಲಿ ಹಿಂದೆ ಕಾರ್ಯಕಲಾಪಗಳು ಹೇಗೆ ನಡೆಯುತ್ತಿದ್ದವೋ ಹಾಗೆಯೇ ಇನ್ನುಮುಂದೆ ನಡೆಯುತ್ತವೆ ಎಂದರು.

ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಎಸ್.ಜೆ.ಎಂ ವಿದ್ಯಾಪೀಠದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಅಭಿನಂದನೆಗಳು. ಈ ಮೊದಲು ಶ್ರೀಮಠದಲ್ಲಿ ಕಾರ್ಯಕಲಾಪಗಳು ಹೇಗೆ ನಡೆಯುತ್ತಿದ್ದವೋ ಹಾಗೆಯೇ ಸಮಿತಿಯ ಎಲ್ಲರೂ ಸೇರಿ ಮುಂದುವರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಎಚ್.ಆನಂದಪ್ಪ, ಡಿ.ಎಸ್. ಮಲ್ಲಿಕಾರ್ಜುನ್, ಶ್ರೀಮತಿ ದೇವಿಕುಮಾರಿ, ಶ್ರೀರಾಮ್, ಫಾತ್ಯರಾಜನ್, ನಾಗರಾಜ್, ಟಿ.ಎ.ಟಿ. ಸುರೇಶ್‍ಬಾಬು, ಎಂ.ಕೆ. ತಾಜ್‍ಪೀರ್, ವೀರೇಂದ್ರಕುಮಾರ್, ಜಯಕುಮಾರ್, ಎಸ್.ಪರಮೇಶ್, ಮಾರುತಿ, ಎಚ್.ಎಂ. ಮಂಜುನಾಥ, ಕಾರ್ತಿಕ್, ಪೊಲೀಸ್ ಮಲ್ಲಿಕಾರ್ಜುನ್, ಅನೀಸ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು. ಪ್ರತಾಪ್ ಜೋಗಿ ಸ್ವಾಗತಿಸಿ, ವಂದಿಸಿದರು.

Advertisement
Tags :
Advertisement