Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅನ್ನಭಾಗ್ಯ ಬಿಟ್ಟು ಉಳಿದ ನಾಲ್ಕು ಯೋಜನೆಗಳಿಗೆ ಮಾರ್ಗಸೂಚಿ : ಇಲ್ಲಿದೆ ಡಿಟೈಲ್

05:02 PM Jun 07, 2023 IST | suddionenews
Advertisement

 

Advertisement

 

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭರವಸೆ ನೀಡಿದ್ದ ಐದು ಗ್ಯಾರಂಟಿಗಳು ಜಾರಿಗೆ ತಂದಿದೆ. ಆದರೆ ಅನ್ನಭಾಗ್ಯ ಯೋಜನೆಯೊಂದನ್ನು ಬಿಟ್ಟು ಇನ್ನುಳಿದ ನಾಲ್ಕು ಯೋಜನೆಗಳಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

Advertisement

ಮೊದಲನೇಯದಾಗಿ ವಿದ್ಯುತ್ ಯಾರಿಗೆಲ್ಲಾ ಫ್ರೀ ಸಿಗುತ್ತೆ ಎಂಬುದನ್ನು ನೋಡುವುದಾದರೆ, ಬಾಡಿಗೆದಾರರಿಗೂ ವಿದ್ಯುತ್ ಉಚಿತ ಸಿಗಲಿದೆ. ಆದರೆ ಒಂದೇ ಆರ್ ಆರ್ ನಂಬರ್ ಇರಬೇಕಾಗುತ್ತದೆ. ಬಾಡಿಗೆದಾರರೂ ಕರಾರು ಪತ್ರ, ವೋಟರ್ ಐಡಿಯ‌ನ್ನು ಅಪ್ಲೋಡ್ ಮಾಡಬಹುದು. ಸೇವಾ ಸಿಂಧುವಿನಲ್ಲಿ ಅರ್ಜಿ ಹಾಕಬೇಕಾಗಿದೆ.

ಇನ್ನು ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ಹಣ ಪಡೆಯಬೇಕಾದರೆ ಎಪಿಎಲ್, ಬಿಪಿಎಲ್ ಕಾರ್ಡ್ ಇರಲೇಬೇಕು. ಅದರಲ್ಲಿ ಮನೆಯ ಯಜಮಾನಿ ಯಾರೆಂದು ನಮೂದಾಗಿರುತ್ತೋ ಅವರಿಗೆ ಸಿಗುತ್ತದೆ. ಜೂನ್ 15 ರಿಂದ ಜುಲೈ 15ರ ತನಕ ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಜಿಎಸ್ಟಿ ರಿಟರ್ನ್ ಸಲ್ಲಿಸುವವರಿಗೆ ಈ ಯೋಜನೆ ಸಿಗುವುದಿಲ್ಲ.

ಇನ್ನು ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಯೋಜನೆಯಡಿ ನೀಡಲಾಗಿದೆ. ಲಿಂಗತ್ವ ಬದಲಾವಣೆಯಾದ ಅಲ್ಪಸಂಖ್ಯಾತರಿಗೂ ಇದು ಲಭ್ಯವಿರುವ ಯೋಜನೆಯಾಗಿದೆ. ಜೂನ್ 11 ರಿಂದ ರಾಜ್ಯದೊಳಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ.

ಇನ್ನು ಪದವಿದರರಿಗೆ 3 ಸಾವಿರ, ಡಿಪ್ಲೊಮಾ ಮಾಡಿರುವವರಿಗೆ 1,500 ಸಾವಿರ ನೀಡಲಾಗುತ್ತದೆ. ಶಿಕ್ಷಣ ಪೂರೈಸಿ 6 ತಿಂಗಳ ತನಕ ಕೆಲಸ ಇಲ್ಲದೆ ಇದ್ದರೆ ಭತ್ಯೆ ನೀಡಲಾಗುತ್ತದೆ. ಕನ್ನಡಿಗರು ಮಾತ್ರ ಈ ಯುವನಿಧಿ ಯೋಜನೆಗೆ ಅರ್ಹರಾಗಿರುತ್ತಾರೆ. ಇದಕ್ಕೂ ಕೂಡ ಸೇವಾ ಸಿಂಧು ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ.

Advertisement
Tags :
Annabhagyadetailexceptfour schemesguidelinesremainingಅನ್ನಭಾಗ್ಯಡಿಟೈಲ್ನಾಲ್ಕುಮಾರ್ಗಸೂಚಿಯೋಜನೆ
Advertisement
Next Article