ಚಿತ್ರದುರ್ಗ ನಗರಸಭೆಯಿಂದ ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕಾಗಿ ಅಭಿಯಾನ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,(ಜು.13) : ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಜು.1 ರಿಂದ 28 ರವರೆಗೆ ನಗರದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಸಂತ ಜೋಸೆಫ್ ಕಾನ್ವೆಂಟ್ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಭಿಯಾನ ಉದ್ದೇಶಿಸಿ ಮಾತನಾಡಿದ ಪರಿಸರ ತಜ್ಞ ಎಚ್.ಎಸ್.ಕೆ.ಸ್ವಾಮಿ ಪ್ಲಾಸ್ಟಿಕ್ ಬಳಸಿ ಎಲ್ಲೆಂದರಲ್ಲಿ ಎಸೆಯುವುದರಿಂದ ಪರಿಸರ ಹಾಳಾಗುತ್ತದೆ.
ಎಷ್ಟು ವರ್ಷಗಳಾದರೂ ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆಯುವುದಿಲ್ಲ. ಹಾಗಾಗಿ ಪ್ಲಾಸ್ಟಿಕ್‍ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಸಾಮಾಗ್ರಿಗಳನ್ನು ಬಳಸುವುದನ್ನು ಮಕ್ಕಳು ಚಿಕ್ಕಂದಿನಿಂದಲೇ ರೂಢಿಸಿಕೊಳ್ಳಬೇಕು. ವಿದೇಶಗಳಲ್ಲಿ ಮಕ್ಕಳು ಚಾಕೊಲೇಟ್ ತಿಂದು ಕವರನ್ನು ರಸ್ತೆಗೆ ಎಸೆಯುವುದಿಲ್ಲ. ಜೇಬಿನಲ್ಲಿಟ್ಟುಕೊಂಡು ಡಸ್ಟ್‍ಬಿನ್‍ಗೆ ಹಾಕುತ್ತಾರೆ. ನಮ್ಮಲ್ಲಿಯೂ ಅಂತಹ ಜಾಗೃತಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಲ್ಲಿ ಮನವಿ ಮಾಡಿದರು.
ಪ್ರತಿಯೊಬ್ಬರು ಬಳಸಿದ ಪ್ಲಾಸ್ಟಿಕ್‍ನ್ನು ಬೀದಿಯಲ್ಲಿ ಎಸೆಯುವುದರಿಂದ ಓಜೋನ್ ಪದರ ಹಾಳಾಗಿದೆ. ಹಸಿ ಕಸ, ಒಣ ಕಸವನ್ನು ಮನೆಯಲ್ಲಿಯೇ ಬೇರ್ಪಡಿಸಿ ಪ್ರತಿನಿತ್ಯ ಬೆಳಿಗ್ಗೆ ಮನೆ ಬಾಗಿಲಿಗೆ ಬರುವ ನಗರಸಭೆಯ ಕಸದ ವಾಹನಕ್ಕೆ ಹಾಕಿ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬಹುದು ಎಂದು ಹೇಳಿದರು.
ನಗರಸಭೆ ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಸರಳ, ಭಾರತಿ, ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ಶಾಖೆಯ ಸಹಾಯಕಿ ತಬ್ಸಂಭಾನು, ಪೌರ ಕಾರ್ಮಿಕರು ಅಭಿಯಾನದಲ್ಲಿದ್ದರು.