ದೆಹಲಿಗೆ ಕರೆದು ಸಿಗದ ಅಮಿತ್ ಶಾ : ಬ್ರಹ್ಮ ಬಂದು ಹೇಳಿದರು ಹಿಂದೆ ಸರಿಯಲ್ಲ ಎಂದ ಈಶ್ವರಪ್ಪ..!
ನವದೆಹಲಿ: ಮಗನಿಗೆ ಟಿಕೆಟ್ ಸಿಗದೆ ಬಂಡಾಯವೆದ್ದಿದ್ದ ಈಶ್ವರಪ್ಪ, ಸ್ವತಂತ್ರ್ಯವಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದರು. ಆದರೆ ಈ ಸಂಬಂಧ ಬಂಡಾಯ ಶಮನ ಮಾಡುವುದಕ್ಕೆಂದೆ ಅಮಿತ್ ಶಾ ಕರೆ ಮಾಡಿದ್ದರು. ದೆಹಲಿಗೆ ಬರುವಂತೆ ಸೂಚನೆ ನೀಡಿದ್ದರು. ಅವರ ಕರೆಗೆ ಹೂಗೊಟ್ಟು ಇಂದು ಈಶ್ವರಪ್ಪ ಇಂದು ದೆಹಲಿಗೆ ಹೋಗಿದ್ದಾರೆ. ಆದರೆ ಅಲ್ಲಿಯೂ ಅಮಿತ್ ಶಾ ಸಿಕ್ಕಿಲ್ಲ.
ಈ ಸಂಬಂಧ ಮಾತನಾಡಿರುವ ಈಶ್ವರಪ್ಪ, ಕೇಂದ್ರ ಗೃಹ ಸಚುವರು ಭೇಟಿಗೆ ಸಿಕ್ಕಿಲ್ಲ. ಗೃಹ ಸಚಿವರು ನನಗೆ ಕರೆ ಮಾಡಿ ಮಾತನಾಡಿದ್ದರು. ಬುಧವಾರ ದೆಹಲಿಗೆ ಬನ್ನಿ ಎಂದಿದ್ದರು. ಅದಕ್ಕಾಗಿ ನಾನು ದೆಹಲಿಗೆ ಬಂದೆ. ಆದರೆ ದೆಹಲಿಗೆ ಬಂದ ಬಳಿಕ ಅಮಿತ್ ಶಾ ಕಚೇರಿಯಿಂದ ಫೋನ್ ಬಂತು. ಅಮಿತ್ ಶಾ ಅವರು ಸದ್ಯಕ್ಕೆ ಸಿಗುವುದಿಲ್ಲ ಎಂದರು. ಇದರ ಅರ್ಥ ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದಾಗಿದೆ. ಬಿವೈ ರಾಘವೇಂದ್ರ ಸೋಲಬೇಕು ಎಂಬುದೇ ಇದರ ಅರ್ಥವಾಗಿದೆ.
ನರೇಂದ್ರ ಮೋದಿ, ಅಮಿತ್ ಶಾ ಅಲ್ಲ ಬ್ರಹ್ಮ ಬಂದು ಹೇಳಿದರು ನಾನು ಹಿಂದೆ ಬರುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಅವರು ನನ್ನನ್ನು ಭೇಟಿಯಾವಿದ್ದರು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೆ. ಬಿಜೆಪಿಯ ನಿಯಮಗಳಿಗೆ ಅನುಗುಣವಾಗಿ ನಡೆದುಕೊಂಡು ಬಂದಿದ್ದೇನೆ. ನಾನು ಶಾಸಕನಾಗಿ ನನ್ನ ಮಗನಿಗೆ ಟಿಕೆಟ್ ಕೇಳಿಲ್ಲ. ಯಡಿಯೂರಪ್ಪ ಅವರ ಕುಟುಂಬಕ್ಕೆ ಒಂದು ನೀತಿ, ನಮ್ಮ ಕುಟುಂಬಕ್ಕೆ ಮತ್ತೊಂದು ನೀತಿಯ..? ಅವರ ಮನೆಯಲ್ಲಿ ಒಬ್ಬ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ಕೂಡ ಆಗಿದ್ದಾರೆ ಎಂದು ಈಶ್ವರಪ್ಪ, ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.