ಎಮರ್ಜೆನ್ಸಿ ಮೆಸೇಜ್ ನಿಮ್ಮ ಮೊಬೈಲ್ ಗೂ ಬಂತಾ..!
ಇವತ್ತು ಮಧ್ಯಾಹ್ನದ ಸಮಯದಲ್ಲಿ ಎಲ್ಲರ ಮೊಬೈಲ್ ಗೂ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬಂದಿದೆ. ಇದನ್ನು ನೋಡಿದ ಕೆಲವರು ಒಂದು ಕ್ಷಣ ಗಾಬರಿಯಾಗಿದ್ದಾರೆ. ಇನ್ನು ಕೆಲವರಿಗೆ ಈ ಮೆಸೇಜ್ ಬಂದಿಲ್ಲ. ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೆ ತರಲು ಉದ್ದೇಶಿಸಿರುವ ಎಮರ್ಜೆನ್ಸಿ ಸಿಸ್ಟಮ್ ಭಾಗವಾಗಿ ಸೆಲ್ ಬ್ರಾಡ್ ಕಾಸ್ಟ್ ಸಿಸ್ಟಂ ಅನ್ನು ರೂಪಿಸಲಾಗಿದೆ. ಈ ಸಿಸ್ಟಂ ಜಾರಿಗೆ ತರುವ ಮುನ್ನ ದೇಶಾದ್ಯಂತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದರ ಭಾಗವಾಗಿಯೇ ಇಂದು ಎಲ್ಲರ ಮೊಬೈಲ್ ಗೂ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬಂದಿದೆ.
'ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆ ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲು. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಜನರಿಗೆ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ' ಎಂಬ ಸಂದೇಶ ಎಲ್ಲರ ಮೊಬೈಲ್ ಗೂ ಬಂದಿದೆ.
ಆದರೆ ಇದಕ್ಕರ ಯಾರೂ ಗಾಬರಿ ಪಡಬೇಕಾದ ಅಗತ್ಯವಿಲ್ಲ. ಯಾಕಂದ್ರೆ ವಿಪತ್ತುಗಳ ಸಮಯದಲ್ಲಿ ಎಚ್ಚರಿಸಲು ಇದೊಂದು ಪ್ರಯೋಗವಾಗಿದೆ. ಈ ವಿಚಾರವನ್ನು ಇತ್ತಿಚೆಗಷ್ಟೇ ಕೇಂದ್ರ ಸರ್ಕಾರ ಎಲ್ಲರ ಗಮನಕ್ಕೂ ತಂದಿತ್ತು. ಇದೀಗ ಇಂದು ಮಧ್ಯಾಹ್ನದ ವೇಳೆಗೆ ಎಲ್ಲರ ಮೊಬೈಲ್ ಗೂ ಅಲರ್ಟ್ ಬಂದಿದೆ.