Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಿಕ್ಷಣವೆಂದರೆ ಶಿಕ್ಷಕರು, ಎಸ್.ಡಿ.ಎಂ.ಸಿ. ಹಾಗೂ ಪೋಷಕರುಗಳ ಸಾಮಾಜಿಕ ಜವಾಬ್ದಾರಿ : ನಿರಂಜನಾರಾಧ್ಯ

05:15 PM Jan 31, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಶಿಕ್ಷಕರು, ಶಾಲಾಭಿವೃದ್ದಿ ಸಮಿತಿ ಹಾಗೂ ಪೋಷಕರು ಜೊತೆಗೂಡಿ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಅಂತಹ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಶಿಕ್ಷಣ ತಜ್ಞರು ಹಾಗೂ ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ. ಮಹಾ ಪೋಷಕ ನಿರಂಜನಾರಾಧ್ಯ ಅಭಿಪ್ರಾಯಪಟ್ಟರು.

ದಂಡಿನಕುರುಬರಹಟ್ಟಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿಗಳ ಸಮಿತಿ ಅಧ್ಯಕ್ಷರು-ಉಪಾಧ್ಯಕ್ಷರುಗಳಿಗೆ ತಾಲ್ಲೂಕಿನ ಎಲ್ಲಾ ಸಿ.ಆರ್.ಪಿ. ಬಿ.ಆರ್.ಪಿ.ಗಳಿಗೆ ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತು ಇತ್ತೀಚೆಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಗಾಟಿಸಿ ಮಾತನಾಡಿದರು.

Advertisement

ಹೊಸದಾಗಿ ಶಿಕ್ಷಣ ಹಕ್ಕು ಕಾಯಿದೆಯನ್ನು ಸರ್ಕಾರ ಜಾರಿಗೆ ತಂದಿದೆ. ಮಕ್ಕಳ ಶಿಕ್ಷಣ ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿ ಸೇರಿದೆ ಎನ್ನುವುದನ್ನು ಶಾಲಾಭಿವೃದ್ದಿ ಸಮಿತಿಯವರು ತಿಳಿದುಕೊಂಡಿರಬೇಕು. ಮಕ್ಕಳ ಶಿಕ್ಷಣ ಒಬ್ಬರ ಕರ್ತವ್ಯವಲ್ಲ. ಶಿಕ್ಷಕರು, ಎಸ್.ಡಿ.ಎಂ.ಸಿ. ಹಾಗೂ ಪೋಷಕರುಗಳ ಸಾಮಾಜಿಕ ಜವಾಬ್ದಾರಿ. ಸಾಮಾಜಿಕ ಒಳಿತಿಗಾಗಿ ಶಿಕ್ಷಣ ಬೇಕು. ಸಾಕ್ಷರತೆಯೇ ಮಾನದಂಡವಾಗಬಾರದು ಎಂದು ತಿಳಿಸಿದರು.

ಸರ್ಕಾರಿ ಶಾಲೆ ಗ್ರಾಮದಲ್ಲಿದ್ದರೆ ಅದು ಕೇವಲ ಮಕ್ಕಳಿಗೆ ಪಾಠ ಹೇಳಿಕೊಡುವ ಶಾಲೆಯಲ್ಲ. ಒಂದು ಸಂಸ್ಥೆಯಿದ್ದಂತೆ. ಶಿಕ್ಷಣದ ಜೊತೆ ಮಕ್ಕಳಿಗೆ ಅನೇಕ ಮೌಲ್ಯಗಳನ್ನು ಕಟ್ಟಿಕೊಡುತ್ತದೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯಂತಹ ಮಹತ್ವದ ದಿನಗಳಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹಿರಿಯರ ಇತಿಹಾಸಗಳನ್ನು ತಿಳಿಸುತ್ತದೆ. ಶಿಕ್ಷಣವೆನ್ನುವುದು ಅಂಕಗಳಿಗೆ ಮಾತ್ರ ಸೀಮಿತವಾಗಬಾರದು. ಎಲ್ಲಾ ಅಂಶಗಳನ್ನೊಳಗೊಂಡಾಗ ಪರಿಪೂರ್ಣವಾಗುತ್ತದೆ. ಸಮಾಜಕ್ಕೆ ಒಳ್ಳೆಯವರಾಗಿ ಸುತ್ತಮುತ್ತಲು ಏನು ನಡೆಯುತ್ತದೆ ಎನ್ನುವುದನ್ನು ಗಮನಿಸಿ ಅನ್ಯಾಯವನ್ನು ಖಂಡಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು. ಅದುವೆ ನಿಜವಾದ ಶಿಕ್ಷಣ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಮಾತನಾಡಿ ಸರ್ಕಾರಿ ಶಾಲೆಗಳ ಬಲವರ್ಧನೆಯಲ್ಲಿ ಎಸ್.ಡಿ.ಎಂ.ಸಿ. ಪಾತ್ರ ಮುಖ್ಯ. ಕೇವಲ ಸರ್ಕಾರ, ಶಿಕ್ಷಕರು, ಪೋಷಕರುಗಳ ಜವಾಬ್ದಾರಿ ಎಂದು ಭಾವಿಸುವುದು ಸರಿಯಲ್ಲ. ಎಸ್.ಡಿ.ಎಂ.ಸಿ.ಗೆ ಹಲವು ರೀತಿಯ ಅಧಿಕಾರವಿದೆ. ಶಿಕ್ಷಕರು ಹಾಗೂ ಪೋಷಕರುಗಳ ಜೊತೆ ಕೈಜೋಡಿಸಿದರೆ. ಅಂತಹ ಶಾಲೆಗಳು ಅಭಿವೃದ್ದಿಯ ಕಡೆಗೆ ಸಾಗುತ್ತದೆ. ಅದಕ್ಕಾಗಿ ಹೆಚ್ಚು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ಕರೆ ನೀಡಿದರು.

ಸಮ ಸಮಾಜಕ್ಕಾಗಿ ಗೆಳೆಯರ ಬಳಗದ ಅಧ್ಯಕ್ಷ ಟಿ.ಪಿ.ಗಂಗಾಧರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎ.ಐ.ಪಿ.ಎಫ್.ನ ಕಾರ್ಯಾಧ್ಯಕ್ಷ ಬಸವರಾಜ ಗುಡಿಕಾರ್, ಬಿ.ಆರ್.ಸಿ. ಸಂಪತ್‍ಕುಮಾರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಮೂರ್ತಿ, ಉಪಾಧ್ಯಕ್ಷ ಕಾಟಿಶ್, ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಸ್ನೇಹ ಬಳಗದ ಸದಸ್ಯರು, ಮುಖ್ಯ ಶಿಕ್ಷಕಿ ಬಿ.ಟಿ.ಲೋಲಾಕ್ಷಮ್ಮ ವೇದಿಕೆಯಲ್ಲಿದ್ದರು.

ಶಿಕ್ಷಕ ವೃಂದದವರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement
Tags :
chitradurgaeducationNiranjanaradhyaparentsS.D.M.Csocial responsibilitysuddionesuddione newsteachersಎಸ್.ಡಿ.ಎಂ.ಸಿಚಿತ್ರದುರ್ಗನಿರಂಜನಾರಾಧ್ಯಪೋಷಕರುಗಳುಶಿಕ್ಷಕರುಶಿಕ್ಷಣಸಾಮಾಜಿಕ ಜವಾಬ್ದಾರಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article