For the best experience, open
https://m.suddione.com
on your mobile browser.
Advertisement

ಬಾಳೆ ಹೂವಿನಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ಗೊತ್ತಾ..? ಹಲವು ಕಾಯಿಲೆಗಳಿಗೆ ರಾಮಬಾಣ..!

05:52 AM Mar 05, 2024 IST | suddionenews
ಬಾಳೆ ಹೂವಿನಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ಗೊತ್ತಾ    ಹಲವು ಕಾಯಿಲೆಗಳಿಗೆ ರಾಮಬಾಣ
Advertisement

Advertisement

ನಾವೂ ಸಹಜವಾಗಿ ಬಾಳೆ ಹಣ್ಣನ್ನು ತಿನ್ನುತ್ತೇವೆ. ಎಲೆಯನ್ನು ಊಟಕ್ಕೆ ಬಳಸುತ್ತೇವೆ. ಆದರೆ ಬಾಳೆ ಹೂವನ್ನು ತಿಪ್ಪೆಗೆ ಗೊಬ್ಬರವಾಗಲೆಂದು ಬಿಸಾಡುತ್ತೇವೆ. ಕೆಲವರು ಮಾತ್ರ ಬಾಳೆ ಹೂವಿನಿಂದಾನೂ ಆಹಾರ ಪದಾರ್ಥ ಮಾಡಿ ಸವಿಯುತ್ತಾರೆ. ಈ ಬಾಳೆ ಹೂವಿನಲ್ಲಿ ಎಷ್ಟೊಂದು ಪೋಷಕಾಂಶಗಳಿವೆ, ಅದರಿಂದ ಏನೆಲ್ಲಾ ಲಾಭ ಇದೆ ಗೊತ್ತಾ..?

ಬಾಳೆ ಹೂವಿನಲ್ಲಿ ಕಾರ್ಬೋಹೈಡ್ರೇಟ್‌ಗಳು, ಕ್ಯಾಲೋರಿಗಳು
ಪ್ರೋಟೀನ್, ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸತು ಮತ್ತು ತಾಮ್ರದ ಪ್ರಮಾಣ ಇದೆ ಇದರಿಂದ ದೇಹದಲ್ಲಿನ ಕೊಬ್ಬಿನಾಂಶವನ್ನು ಸುಲಭವಾಗಿ ಕರಗಿಸುವುದಲ್ಲದೆ, ಇನ್ನು ಅನೇಕ ಆರೋಗ್ಯಕರ ಸಮಸಗಯೆಗಳನ್ನು ದೂರ ಮಾಡಬಹುದು.

Advertisement

* ಕೆಟ್ಟ ಕೊಲೆಸ್ಟ್ರಾಲ್ ಮನುಷ್ಯನ ದೇಹಕ್ಕೆ ಬಹಳ ಡೇಂಜರ್. ಇದರಿಂದ ಹೃದಯಾಘಾತಗಳು ಹೆಚ್ಚಾಗುತ್ತವೆ. ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಕೆಟ್ಟ ಕೊಲೆಸ್ಟ್ರಾಲ್ ದೂರ ಮಾಡಬೇಕು. ಅದಿ ಬಾಳೆ ಹೂವಿನಲ್ಲಿ ಅಡಗಿದೆ.

* ಬಾಳೆ ಹೂವಿನ ಪಲ್ಯ ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಏರುವುದನ್ನು ಮತ್ತು ಕಡಿಮೆಯಾಗುವುದನ್ನು ತಡೆಯುತ್ತದೆ. ಇದರಿಂದಾಗಿ ನೀವು ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಸಾಧ್ಯವಾಗುತ್ತದೆ.

* ಬಾಳೆ ಹೂವು ಕರಗದ ಮತ್ತು ಕರಗುವ ಪ್ರಯೋಜನಗಳನ್ನು ನೀಡುತ್ತದೆ. ಇವು ಕರುಳಿನ ಸ್ನೇಹಿ ಮತ್ತು ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತವೆ. ಈ ಆರೋಗ್ಯಕರ ಬ್ಯಾಕ್ಟೀರಿಯಾಗಳು ಕ್ಯಾನ್ಸರ್ ಮತ್ತು ಬೊಜ್ಜು ಅಪಾಯವನ್ನು ಕಡಿಮೆ ಮಾಡುತ್ತದೆ.

* ಬಾಳೆಹೂವನ್ನು ಮೂಳೆ ರೋಗಗಳಿಗೂ ಬಳಸುತ್ತಾರೆ. ಇದು ಮೂಳೆಗಳ ನಷ್ಟವನ್ನು ತಡೆಯುತ್ತದೆ ಮತ್ತು ಕೀಲು ನೋವಿನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೀಗಾಗಿ ಬಾಳೆ ಹಣ್ಣಿನ ಜೊತೆಗೆ ಹೂವನ್ನು ತಂದು ಪಲ್ಯ ಮಾಡಿ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Tags :
Advertisement