ಸಿಎಂ ಜನತಾ ದರ್ಶನದಲ್ಲಿ ಜನಸ್ತೋಮ : ತಾಳ್ಮೆಯಿಂದ ಜನರ ಕಷ್ಟ ಆಲಿಸಿದ ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಹುಮತ ಪಡೆದು ಅಧಿಕಾರಕ್ಕೆ ಬಂದ ಮೇಲೆ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಆಗಾಗ ಜನತಾ ದರ್ಶನ ಮಾಡುವ ಮೂಲಕ ಜನರ ಕಷ್ಟಗಳನ್ನು ಅರಿಯುವ ಕೆಲಸ ಮಾಡುತ್ತಿದ್ದಾರೆ. ಅದಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿಯೂ ಕಷ್ಟ ಎಂದು ಜನ ಹೇಳಿದರೂ, ಆ ಎಲ್ಲಾ ಸಮಸ್ಯೆಯನ್ನು ಈಗಾಗಲೇ ಬಗೆಹರಿಸಿದ್ದಾರೆ. ಯಾವುದೋ ಊರಲ್ಲಿ ಕರೆಂಟ್ ಇಲ್ಲ ಎಂದು ಟ್ವೀಟ್ ಮಾಡಿದರೆ, ಬಾಲಕನಿಗೆ ಶಾಲೆಗೆ ಹೋಗಬೇಕೆಂಬ ಆಸೆ ಇದ್ದರು, ಕುರಿಕಾಯುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದರೂ ಸಿದ್ದರಾಮಯ್ಯ ಸರ್ಕಾರ ಆ ಸಮಸ್ಯೆಗಳನ್ನು ಬಗೆಹರಿಸಿದೆ.
ಇದೀಗ ಇಂದು ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರು, ಜನತಾ ದರ್ಶನ ನಡೆಸುತ್ತಿದ್ದಾರೆ. ಈ ಮೂಲಕ ಜನರ ಸಮಸ್ಯೆಗಳನ್ನು ಕೇಳುತ್ತಿದ್ದಾರೆ. ಜನತಾ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದಾನೂ ಜನ ಬಂದಿದ್ದಾರೆ. ವಯಸ್ಸಾದವರು, ಕೆಲಸಕ್ಕಾಗಿ ಹಂಬಲಿಸುತ್ತಿದ್ದವರು, ಜಮೀನಿನ ಸಮಸ್ಯೆ ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಹೊತ್ತು, ಜ ಸಿದ್ದರಾಮಯ್ಯ ಅವರ ಬಳಿಗೆ ಬಂದಿದ್ದಾರೆ.
ಸಿದ್ದರಾಮಯ್ಯ ಅವರು ಇಡೀ ದಿನ ಜನರಿಗಾಗಿ ಸಮಯ ಮೀಸಲಿಟ್ಟಿದ್ದಾರೆ. ಅಧಿಕಾರಿಗಳ ಜೊತೆಗೆ ತಾವೂ ಮುಂದೆ ನಿಂತು ಜನರ ಸಂಕಷ್ಟ ಕೇಳಿದ್ದಾರೆ. ಊಟದ ಸಮಯವಾದಾಗಲೂ ಊಟಕ್ಕೂ ಹೋಗದೆ ಸಮಸ್ಯೆ ಆಲಿಸಿದ್ದಾರೆ. ಅಷ್ಟೇ ಅಲ್ಲ, ಕೂತಲ್ಲಿಯೇ ಪರಿಹಾರ ಸಿಗುವ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ನೀಡಿದ್ದಾರೆ. ಇಂದಿನ ಜನತಾ ದರ್ಶನಕ್ಕೆ 20 ಕೌಂಟರ್ ಗಳನ್ನು ತೆರೆದು, ಸಾವಿರಕ್ಕೂ ಹೆಚ್ಚು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಿಶೇಷ ಚೇತನರು ಕೂಡ ಭಾಗಿಯಾಗಿದ್ದು, ದ್ವಿಚಕ್ರ ವಾಹನಕ್ಕೆ ಬೇಡಿಕೆ ಇಟ್ಟಿದ್ದಾರೆ.