For the best experience, open
https://m.suddione.com
on your mobile browser.
Advertisement

ಚಾಮರಾಜನಗರಕ್ಕೆ ಸಿಎಂ ಭೇಟಿ : ಮಾದಪ್ಪನ ಬೆಟ್ಟದ ಸಮಸ್ಯೆಗಳಿಗೆ ಸಿಗುತ್ತಾ ಪರಹಾರ..?

12:34 PM Sep 27, 2023 IST | suddionenews
ಚಾಮರಾಜನಗರಕ್ಕೆ ಸಿಎಂ ಭೇಟಿ   ಮಾದಪ್ಪನ ಬೆಟ್ಟದ ಸಮಸ್ಯೆಗಳಿಗೆ ಸಿಗುತ್ತಾ ಪರಹಾರ
Advertisement

Advertisement
Advertisement

ಚಾಮರಾಜನಗರ: ಸಿಎಂ ಸಿದ್ದರಾಮಯ್ಯ ಅವರು ಇಂದು ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಧಾರ್ಮಿಕ ಕ್ಷೇತ್ರದ ಅಭಿವೃದ್ದಿಗಾಗಿ ಹೊರಟಿರುವ ಸಿದ್ದರಾಮಯ್ಯ ಸರ್ಕಾರ, ಇಂದು ಮಲೆ‌ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಜೊತೆ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಸಹ ಸಮಸ್ಯೆಗಳ ವಿಚಾರವನ್ನು ಸಿಎಂ ಮುಂದಿಡಲಿದ್ದಾರೆ.

Advertisement

* ಮಾದಪ್ಪನಿಗೆ ಸೇರಿರಯವ 122 ಎಕರೆ ಜಮೀನಿನಲ್ಲಿ ಕೆಲವರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅದನ್ನು ಮಾದಪ್ಪನ ಪ್ರಾಧಿಕಾರಕ್ಕೆ ಸಂಪೂರ್ಣ ಹಿಡಿತ ನೀಡಬೇಕು ಎಂದು ಮನವಿ ಮಾಡಲಿದ್ದಾರೆ.

Advertisement

* ದೇವಲಾಯದ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಕೂಡ ಹೆಚ್ಚಾಗಿದೆ. ಇದರಿಂದ ಭಕ್ತರಿಗೂ ಕಿರಿಕಿರಿ. ಅದನ್ನು ಕೂಡ ತಪ್ಪಿಸುವಂತೆ ಮನವಿ ಮಾಡಲಿದ್ದಾರೆ.

* ಇನ್ನು ಕಾವೇರಿ ಕೊಳ್ಳದಲ್ಲಿ ನೀರು ಬತ್ತುತ್ತಾ ಹೋಗುತ್ತಿದೆ. ಹೀಗಾಗಿ ನೀರಿನ ಸರಬರಾಜು ಕಡಿಮೆಯಾಗಿದೆ. ಅದಕ್ಕೂ ಪರ್ಯಾಯ ಮಾರ್ಗ ಕಲ್ಪಿಸಿಕೊಡುವುದರ ವಿಚಾರವಾಗಿ ಮನವಿ ಮಾಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಭೇಟಿ ನೀಡಿ, ಮಲೆ‌ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ ಪಡೆದು, ಬಳಿಕ ಅಧಿಕಾರ ಜೊತೆಗೆ ಸಭೆ ನಡೆಸಲಿದ್ದಾರೆ.

Advertisement
Tags :
Advertisement