For the best experience, open
https://m.suddione.com
on your mobile browser.
Advertisement

ಆ ಒಂದು ಕೇಸ್ ನಿಂದ ಸಿಎಂ ಸಿದ್ದರಾಮಯ್ಯಗೆ ಸಿಕ್ತು ಬಿಗ್ ರಿಲೀಫ್

06:58 PM Jun 13, 2023 IST | suddionenews
ಆ ಒಂದು ಕೇಸ್ ನಿಂದ ಸಿಎಂ ಸಿದ್ದರಾಮಯ್ಯಗೆ ಸಿಕ್ತು ಬಿಗ್ ರಿಲೀಫ್
Advertisement

Advertisement
Advertisement

Advertisement

ಸದ್ಯ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಘೋಷಿಸಿದ್ದ ಗ್ಯಾರಂಟಿಗಳನ್ನು ಜನರಿಗೆ ನೀಡಿ, ಕೊಟ್ಟ ಮಾತುಗಳನ್ನು ಆರಂಭದಲ್ಲಿಯೇ ಉಳಿಸಿಕೊಂಡಿದೆ. ಇದರ ಮಧ್ಯೆ ಸಿದ್ದರಾಮಯ್ಯ ಅವರಿಗೆ ಕೋರ್ಟ್ ಕೂಡ ಬಿಗ್ ರಿಲೀಫ್ ನೀಡಿದೆ.

Advertisement
Advertisement

ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದರು. ಈ ವೇಳೆ ಮಾತನಾಡುವಾಗ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದಿದ್ದರು. ಈ ಒಂದು ಹೇಳಿಕೆ ಸಾಕಷ್ಟು ವಿರೋಧಕ್ಕೂ ಕಾತಣವಾಗಿತ್ತು. ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಿತ್ತು. ಇದೀಗ ಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಸಿದ್ದರಾಮಯ್ಯ ಅವರ ಅಂದಿನ ಹೇಳಿಕೆಯನ್ನಿಟ್ಟುಕೊಂಡು ಶಂಕರ್ ಶೇಟ್, ಮಲ್ಲಯ್ಯ ಹೀರೇಮಠ್ ಎಂಬುವವರು ಕೋರ್ಟ್ ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಲಯ ಇಂದು ಮಹತ್ವದ ಆದೇಶ ಹೊರಡಿಸಿದೆ.

ಈ ಹೇಳಿಕೆ ಸಂಬಂಧ ಅಂದು ಸಿದ್ದರಾಮಯ್ಯ ಅವರು ಕೂಡ ಸ್ಪಷ್ಟನೆ ನೀಡಿದ್ದರು. ನನಗೆ ಲಿಂಗಾಯತರ ಮೇಲೆ ಅಪಾರವಾದ ಗೌರವವಿದೆ. ಆ ರೀತಿ ಹೇಳಿರೋದಲ್ಲ ಎಂದಿದ್ದರು.

Advertisement
Tags :
Advertisement