Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ : ಭೀಕರ ರಸ್ತೆ ಅಪಘಾತ, ಮಗು ಮೃತ, ಆರು ಮಂದಿಗೆ ಗಾಯ

07:53 PM Jun 13, 2023 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, (ಜೂ.13) : ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಹೆಣ್ಣು ಮಗು ಮೃತಪಟ್ಟು ಮೂವರಿಗೆ ಗಂಭೀರ ಗಾಯಗಳಾಗಿವೆ.

ಹಿರಿಯೂರಿನ ರಾಷ್ಟ್ರೀಯ ಹೆದ್ದಾರಿ 48 ರ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗದಲ್ಲಿ ಇಂದು (ಜೂನ್.13) ಸಂಜೆ ಆರು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

Advertisement

ಚಿತ್ರದುರ್ಗದಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆರು ವರ್ಷದ ಹೆಣ್ಣು ಮಗು ಇಮಾನ್ ಸೂನ್ (6) ಎಂದು ಗುರುತಿಸಲಾಗಿದೆ.

 

 

ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದ್ದು, ಮಾನರಾಂ, ಕಿರಣ್, ದಿವ್ಯ, ದೀಕ್ಷಿತಾ, ಚಂಚಲ್ ಗಾಯಗೊಂಡವರು ಅವರನ್ನು ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ.

ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Advertisement
Tags :
childchitradurgadeadfeaturedhiriyuruinjuredsixsuddioneTerrible road accidentಆರುಗಾಯಚಿತ್ರದುರ್ಗಭೀಕರ ರಸ್ತೆ ಅಪಘಾತಮಗುಮಂದಿಮೃತಸುದ್ದಿಒನ್ಹಿರಿಯೂರು
Advertisement
Next Article