ಅಯೋಧ್ಯೆಯಲ್ಲಿ ಬಾಲ ರಾಮನಿಗೆ ಪ್ರಾಣ ಪ್ರತಿಷ್ಠಾಪನೆ : ದಗ್ಗೆ ಗ್ರಾಮದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಹೊಳಲ್ಕೆರೆ : ಐದುನೂರು ವರ್ಷದ ತಿಕ್ಕಾಟ, ಕೋರ್ಟ್ ವ್ಯಾಜ್ಯದ ನಂತರ ಅಯೋಧ್ಯೆಯಲ್ಲಿ ದೇಶದ ಪ್ರಧಾನಿ ನರೇಂದ್ರಮೋದಿರವರು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಉದ್ಘಾಟಿಸಿರುವುದಕ್ಕೆ ಹೊಳಲ್ಕೆರೆ ತಾಲ್ಲೂಕು ಬ್ರಹ್ಮಪುರ(ದಗ್ಗೆ)ಯಲ್ಲಿ ಮನೆ ಮನೆಯಲ್ಲಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಲಾಯಿತು.
ರಾಮನಿಗೆ ಸಂಜೆ ವಿಶೇಷ ಪೂಜೆ ಸಲ್ಲಿಸಿ ಶ್ರೀರಾಮ ಭಾವಚಿತ್ರದೊಂದಿಗೆ ಗ್ರಾಮದಲ್ಲಿ ಪ್ರತಿಯೊಂದು ಕೇರಿಗೂ ಸಂಚರಿಸಿ ಭಜನೆ ಮಾಡುವ ಮೂಲಕ ಶ್ರದ್ದಾ ಭಕ್ತಿ ಸಮರ್ಪಿಸಲಾಯಿತು.
ಬಿಜೆಪಿ. ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಮಾತನಾಡಿ ದೇಶದ ಪ್ರಧಾನಿ ನರೇಂದ್ರಮೋದಿರವರು ಕಡಿಮೆ ಅವಧಿಯಲ್ಲಿಯೇ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಉದ್ಘಾಟಿಸಿ ಪ್ರತಿಯೊಬ್ಬ ಭಾರತೀಯನ ಕನಸನ್ನು ಸಾಕಾರಗೊಳಿಸಿದ್ದಾರೆ. ದಗ್ಗೆ ಪುಟ್ಟ ಗ್ರಾಮವಾಗಿದ್ದರೂ ಎಲ್ಲರಲ್ಲೂ ರಾಮನ ಮೇಲೆ ಅಪಾರವಾದ ಭಕ್ತಿಯಿದೆ. ಶ್ರೀರಾಮ ಮಂದಿರ ಸಮಸ್ತ ಹಿಂದೂವನ್ನು ಒಗ್ಗೂಡಿಸಿದೆ. ಶ್ರೀರಾಮನಲ್ಲಿದ್ದ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ರಾಜರಾಜ್ಯವಾಗುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ದೇವರಾಜ್, ಮಿಲ್ಟ್ರಿ ನಾಗರಾಜಪ್ಪ, ಎಂ.ಎಸ್.ಲೋಕೇಶ್ವರಪ್ಪ, ಪಿ.ಮಧು, ಅಗೆದಳ್ಳಿ ಮಂಜಪ್ಪ, ಸಿದ್ದಲಿಂಗಪ್ಪ, ಕುಮಾರಪ್ಪ, ಪೂಜಾರ್ ಜಯಣ್ಣ, ಮಹಂತೇಶ್ವರಪ್ಪ, ಸುನೀಲ್‍ಕುಮಾರ್, ಆರ್.ಶಶಿಧರ, ಬಿ.ನಾಗರಾಜ, ರಘು, ಕುಮಾರ್, ಭೈರೇಶ, ಎಸ್.ಮಧನ್‍ಕುಮಾರ್, ಸಿ.ನಾಗರಾಜಪ್ಪ, ಚಂದ್ರಣ್ಣ, ರಾಜಣ್ಣ, ಬಸವರಾಜಪ್ಪ, ತಿಪ್ಪೇಶ್, ಮಹೇಶ, ಪಾರ್ವತಮ್ಮ, ರಾಜಮ್ಮ, ಗೌರಮ್ಮ, ಗೀತಮ್ಮ, ವಿಜಯಮ್ಮ, ಸುಮವ್ವ ಸೇರಿದಂತೆ ಇನ್ನಿತರರು ರಾಮನ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.