Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಹಾಯಕ ಇಂಜಿನಿಯರ್ ಮೇಲೆ ಹಲ್ಲೆ : ಕಠಿಣ ಕ್ರಮಕ್ಕೆ ಸರ್ಕಾರಿ ನೌಕರರ ಸಂಘ ಮತ್ತು ಗುತ್ತಿಗೆದಾರರ ಸಂಘ ಒತ್ತಾಯ

08:42 PM Jul 13, 2023 IST | suddionenews
Advertisement

Advertisement

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ,(ಜು.13) : ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿರುವವರನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡುವಂತೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘ ಮತ್ತು ಗುತ್ತಿಗೆದಾರರ ಸಂಘದ ಇಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಗೆ ಮನವಿ ಸಲ್ಲಿಸಿತು.

ಪಿ.ಎಂ.ಜಿ.ಎಸ್.ವೈ. ಸಬ್-ಡಿವಿಷನ್‌ನ ಸಹಾಯಕ ಇಂಜಿನಿಯರ್ ಜಿ.ಎಂ. ನಾಗರಾಜುರವರು ಕಸವನಹಳ್ಳಿ ರಸ್ತೆ ಕಾಮಗಾರಿ ವೀಕ್ಷಣೆಯ ನಿಮಿತ್ತ ಕರ್ತವ್ಯ ನಿರತರಾಗಿದ್ದ ಸಂಧರ್ಭದಲ್ಲಿ ಸರಿ ಸುಮಾರು 10 ಗಂಟೆಗೆ ಕಸವನಹಳ್ಳಿ ಗ್ರಾಮದ ವೀರಕರಿಯಪ್ಪ ಮತ್ತು ಇವರ 7 ಜನ ಸಹಚರರು ಏಕಾಎಕಿ ನಾಗರಾಜು ಇಂಜಿನಿಯವರ ಹತ್ತಿರ ಬಂದು ಕಾಮಗಾರಿಗೆ ಸಂಬಂಧಿಸಿದಂತೆ ವಿಚಾರಿಸಿ, ನಾಗರಾಜುರವರ ಪ್ರತಿಕ್ರಿಯನ್ನೂ ಸಹ ಸಮಾಧಾನದಿಂದ ಕೇಳಿಸಿಕೊಳ್ಳದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವೀರಕರಿಯಪ್ಪ ಮತ್ತು ಇವರ 7 ಜನ ಸಹಚರರು ನಾಗರಾಜುರವರ ತಲೆಗೆ ಕಲ್ಲುನಿಂದ ಬಲವಾಗಿ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ಇದರಿಂದ ತುಂಬಾ ರಕ್ತಸ್ರಾವವಾಗಿ ನಿತ್ರಾಣಗೊಂಡ ನಾಗರಾಜುರವರನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸದರಿ ಹಲ್ಲೆಯನ್ನು ತೀರ್ವವಾಗಿ ಖಂಡಿಸಿ ಈ ಕೂಡಲೇ ಸಂಬಂಧಿಸಿದವರನ್ನು ಬಂಧಿಸಲು ಮನವಿ ಮಾಡಲಾಗಿತ್ತು.

ಪೊಲೀಸ್ ವರಿಷ್ಠಾಧಿಕಾರಿಗಳು ಸಂಘದ ಮನವಿಗೆ ಸ್ಪಂದಿಸಿ ಪ್ರಕರಣವನ್ನು ದಾಖಲಿಸಿ ಆರೋಪಿಯನ್ನು ಬಂಧಿಸಲು ಸಂಬಂಧಿಸಿದ ಠಾಣೆಯ ಅಧಿಕಾರಿಗಳಿಗೆ ತಿಳಿಸಿದ್ದು ಸಂಘವು ಅಭಿನಂದಿಸುತ್ತದೆ. ಅದೇ ದಿನ ಎಫ್‌ಐಆರ್ ದಾಖಲಾಗಿದ್ದು ಆರೋಪಿಗಳನ್ನು ಇದುವರೆವಿಗೂ ಬಂಧಿಸಿರುವುದಿಲ್ಲ.

ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆಗೆ ಜಿಲ್ಲಾಧಿಕಾರಿಗಳು ಮತ್ತು ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ ನೌಕರರು ತಪ್ಪು ಮಾಡಿದ್ದಾಗ ಮೇಲಾಧಿಕಾರಿಗಳಿಗೆ ದೂರು ನೀಡುವುದು ಅಥವಾ ಲೋಕಯುಕ್ತರಿಗೆ ಮನವಿ ಸಲ್ಲಿಸುವುದು ಮಾಡಲಿ. ಅದನ್ನು ಬಿಟ್ಟು ಏಕಾಏಕಿ ದೈಹಿಕವಾಗಿ ದಂಡನೆ ಮಾಡುವುದು ಕಾನೂನಿನ ಚೌಕಟ್ಟಿನಲ್ಲಿ ಇರುವುದಿಲ್ಲ ಇದು ಅಕ್ಷಮ್ಯ ಅಪರಾಧ ನೌಕರರಿಗೂ ಮಾನವೀಯತೆ ಇರುತ್ತದೆ ನಮ್ಮನ್ನೆ ನಂಬಿಕೊಂದಿರುವ ಕುಟುಂಬ ಇರುವುದನ್ನು ಸಾರ್ವಜನಿಕರು ಮರೆಯಬಾರದು ಸರ್ಕಾರಿ ಸೇವೆಗೆ ಅಡಿಪಡಿಸಿದಂತಹ ಕಿಡಿಗೇಡಿಗಳಿಗೆ ಇದರ ಮೂಲಕ ತಕ್ಕ ಶಾಸ್ತಿಯಾಗಬೇಕು. ಸರ್ಕಾರ ಕಠಿಣ ಕ್ರಮ ಕೈಗೊಂಡು ಕಾನೂನುಗಳನ್ನು ರೂಪಿಸಿ ನೌಕರರನ್ನು ರಕ್ಷಣೆಮಾಡಬೇಕು ಎಂದು ಅಧಿಕಾರಿಗಳ ಗಮನಕ್ಕೆ ತಂದು ಈ ಕೂಡಲೇ ಆರೋಪಿಗಳನ್ನು ಬಂಧಿಸಿ ನೌಕರರಿಗೆ ನ್ಯಾಯ ನೀಡಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತಿಮ್ಮಾರೆಡ್ಡಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿಲ್ಲಾ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಮಲ್ಲೇಶಪ್ಪ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಎಸ್,ಕೆ. ಪಿ.ಎಂ.ಜಿ.ಎಸ್.ವೈ.ನ ಶ್ರೀಧರ್, ಹಿರಿಯ ಉಪಾಧ್ಯಕ್ಷ ಶ್ರೀಮತಿ ಸುಧಾ, ಚಕ್ರವರ್ತಿ, ಶ್ರೀನಿವಾಸ್, ಪಾತಪ್ಪ, ಶಂಕುತಲ ಭಾಯಿ , ಪುಷ್ಪವತಿ ಸೇರಿದಂತೆ ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳು ನೌಕರರು ಭಾಗವಹಿಸಿದ್ದರು.

Advertisement
Tags :
assaultAssistant EngineerchitradurgaContractors associationdemandfeaturedgovernment employees associationstrict actionsuddioneಒತ್ತಾಯಕಠಿಣ ಕ್ರಮಗುತ್ತಿಗೆದಾರರ ಸಂಘಚಿತ್ರದುರ್ಗಸರ್ಕಾರಿ ನೌಕರರ ಸಂಘಸಹಾಯಕ ಇಂಜಿನಿಯರ್ಸುದ್ದಿಒನ್ಹಲ್ಲೆ
Advertisement
Next Article