Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಖುಷ್ಬೂಗಿಂತ ತನ್ನ ಹೆಂಡತಿಯೇ ಸುಂದರ ಎಂದಿದ್ದ ಡಿಎಂಕೆ ನಾಯಕನ ಬಂಧನ..!

11:06 AM Jun 19, 2023 IST | suddionenews
Advertisement

 

Advertisement

 

ಚೆನ್ನೈ: ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿಯನ್ನು ಭಾನುವಾರ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಪಕ್ಷದಿಂದಾನೂ ಶಿವಾಜಿಯನ್ನು ಉಚ್ಚಾಟನೆ ಮಾಡಿದ್ದಾರೆ. ನಟಿ ಖುಷ್ಬೂ ಬಗ್ಗೆ ಶಿವಾಜಿ ಅವರು ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಅವರ ಹೇಳಿಕೆ ತಮಿಳುನಾಡಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಹೀಗಾಗಿ ಅವರನ್ನು ಅರೆಸ್ಟ್ ಮಾಡಲಾಗಿದೆ.

Advertisement

ಡಿಎಂಕೆ ನಾಯಕ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋವನ್ನು ನಟಿ ಖುಷ್ಬೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಆತನ ವಿರುದ್ಧ ವಾಗ್ದಾಳಿ ನಡೆಸಿದರು. ಡಿಎಂಕೆ ಪಕದ ವಿರುದ್ಧವೂ ಕಿಡಿಕಾರಿದರು. ಮಹಿಳೆಯನ್ನು ಕೀಳಾಗಿ ಕಾಣುವ ವ್ಯಕ್ತಿಗಳಿಗೆ ಡಿಎಂಕೆ ಆಶ್ರಯ ನೀಡಿದೆ ಎಂದು ಆಕ್ರೋಶ ಹೊರ ಹಾಕಿದರು. ಇದು ಕೇವಲ ಇಬ್ಬರ ಮಹಿಳೆಯ ಮೇಲಿನ ದಾಳಿಯಲ್ಲ. ಎಲ್ಲಾ ಮಹಿಳೆಯರ ಮೇಲೆ ನಡೆದ ದಾಳಿಯಾಗಿದೆ ಎಂದು ನಟಿ ಖುಷ್ಬೂ ಸುದ್ದಿಗೋಷ್ಟಿಯಲ್ಲಿ ಬೇಸರ ಹೊರ ಹಾಕಿದ್ದರು.

ಡಿಎಂಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಅವರು ಶಿವಾಜಿ ಮೇಲೆ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಪಕ್ಷದ ಶಿಸ್ತಿನ ಉಲ್ಲಂಘನೆ ಮತ್ತು ಪಕ್ಷಕ್ಕೆ ಅಪಖ್ಯಾತಿ ತಂದಿರುವ ಕಾರಣ ನೀಡಿ ಕೃಷ್ಣಮೂರ್ತಿ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದ್ದಾರೆ.

Advertisement
Tags :
arrestdmkfeaturedKhushbooleadersuddionewifeಖುಷ್ಬೂಡಿಎಂಕೆನಾಯಕಬಂಧನಸುಂದರಸುದ್ದಿಒನ್ಹೆಂಡತಿ
Advertisement
Next Article