ರಾಜ್ಯಮಟ್ಟದ ಗಂಗಾಮತ ಸಮಾಜದ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
ಸುದ್ದಿಒನ್, ಚಿತ್ರದುರ್ಗ, (ಜು.04) : ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘವು 2022-23ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿ, ಉತ್ತೀರ್ಣರಾದ ಗಂಗಾಮತ ಮತ್ತಿತರೇ ಪರ್ಯಾಯ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿನ ಗಂಗಾಮತ ಮತ್ತೀತರೆ ಪರ್ಯಾಯ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು 2023ರ ಜುಲೈ 20ರೊಳಗೆ ತಮ್ಮ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಹಾಗೂ ಜಾತಿ ಸರ್ಟಿಫಿಕೇಟ್ ಜೆರಾಕ್ಸ್ ಪ್ರತಿಗಳನ್ನು ಸ್ವವಿಳಾಸ ಮತ್ತು ಮೊಬೈಲ್, ದೂರವಾಣಿ ಸಂಖ್ಯೆಗಳೊಂದಿಗೆ ಖುದ್ದಾಗಿ ಅಥವಾ ವಾಟ್ಸಪ್ ಮೂಲಕ ಚಿತ್ರದುರ್ಗ ನಗರದ ಮದಕರಿ ವೃತ್ತದ ಗಾಂಗೇಯ ಕಾಂಪ್ಲೇಕ್ಸ್‍ನಲ್ಲಿರುವ ಜಿಲ್ಲಾ ಗಂಗಾಮತ ಸಂಘ ಹಾಗೂ ಗಂಗಾಮತನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಅಥವಾ ಬೆಂಗಳೂರಿನ ನಗರ್‍ತರ್ ಪೇಟೆಯ ರಾಜ್ಯ ಗಂಗಾಮತ ಸಂಘದ ಕಚೇರಿ ವಿಳಾಸಕ್ಕೆ ಕಳುಹಿಸಬಹುದು.
ಜಿಲ್ಲಾ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಬಿ.ಹನುಮಂತಪ್ಪ ಅವರ ಮೊಬೈಲ್ ಸಂಖ್ಯೆ 7259726367 ಹಾಗೂ ಜಿಲ್ಲಾ ಘಟಕದ ಕಾರ್ಯದರ್ಶಿ, ರಾಜ್ಯ ನಿರ್ದೇಶಕ ಪಿ.ಅಂಜನಮೂರ್ತಿ ಅವರ ಮೊಬೈಲ್ ಸಂಖ್ಯೆ 9481688300 ವಾಟ್ಸಪ್ ಸಂಖ್ಯೆಗಳಿಗೂ 2022-23ನೇ ಸಾಲಿನ ಅರ್ಜಿಗಳನ್ನು ಕಳುಹಿಸಬಹುದು ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಹನುಮಂತಪ್ಪ ತಿಳಿಸಿದ್ದಾರೆ.