For the best experience, open
https://m.suddione.com
on your mobile browser.
Advertisement

ಹೆಚ್ ವಿಶ್ವನಾಥ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ : ಶಾಮನೂರು ಶಿವಶಂಕರಪ್ಪ

05:58 PM Oct 02, 2023 IST | suddionenews
ಹೆಚ್ ವಿಶ್ವನಾಥ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ   ಶಾಮನೂರು ಶಿವಶಂಕರಪ್ಪ
Advertisement

ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ಸದ್ಯ ಲಿಂಗಾಯತರಿಗೆ ಅನ್ಯಾಯವಾಗುತ್ತಿದೆ ಎಂಬ ಚರ್ಚೆ ಜೋರಾಗಿದೆ. ಶಾಸಕ ಶಾಮನೂರು ಶಿವಶಂಕರಪ್ಪ ಅವರು ಈ ವಿಚಾರವಾಗಿ ಧ್ವನಿ ಎತ್ತಿದ್ದರು. ಕೆಲವರು ಇದಕ್ಕೆ ಪರವಾಗಿ ಮಾತನಾಡಿದರೆ, ಇನ್ನು ಕೆಲವು ಅದೇ ಸಮುದಾಯದವರು ರಿಯಾಲಿಟಿ ಅರ್ಥ ಮಾಡಿಸುತ್ತಿದ್ದಾರೆ.

Advertisement
Advertisement

ಇನ್ನು ಈ ಬಗ್ಗೆ ಮಾತನಾಡಿದ್ದ ಹೆಚ್ ವಿಶ್ವನಾಥ್ ಬಗ್ಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ನಾನು ಸತ್ಯ ಹೇಳಿದ್ದೇನೆ. ಅದಕ್ಕೆ ಈ ವಿಚಾರ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಹೆಚ್ ವಿಶ್ವನಾಥ್ ಗೆ ಹುಚ್ಚಾಸ್ಪತ್ರೆಗೆ ಸೇರಿಸಬೇಕು. ವಿಶ್ವನಾಥ್ ಥರ ನಾನು ಯಾರಿಗೋ ಬೆಣ್ಣೆ ಹಚ್ಚಿ ಎಂಎಲ್ಸಿ ಆಗಿಲ್ಲ. ನಾನು ಜನರಿಂದ ಏಳು ಸಲ ಎಂಎಲ್ಎ ಆಗಿರುವೆ. ಲಿಂಗಾಯತರಿಗೆ ಅನ್ಯಾಯವಾಗಿರೋದು ಸತ್ಯ. ಎಲ್ಲಿ ಯಾರಿಗೆ ಅನ್ಯಾಯವಾಗಿದೆ ಎಂಬುದನ್ನು ನಾನು ಸ್ಪಷ್ಟಪಡಿಸುತ್ತೇನೆ. ನಮ್ಮ ಲಿಂಗಾಯತ ಸಮುದಾಯದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ಬಗ್ಗೆ ಹೇಳುತ್ತಿರುವೆ ಎಂದಿದ್ದಾರೆ.

Advertisement

ಶಾಮನೂರು ಶಿವಶಂಕರಪ್ಪ ಅವರ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ಮಾತಿಗೆ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದಲ್ಲಿ ಏಳು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಹಾಗಾದರೆ ಇನ್ನು ಎಷ್ಟು ಸ್ಥಾನ ಕೊಡಬೇಕು. ನಮ್ಮಲ್ಲಿ ಜಾತಿ ಆಧರಿಸಿ ಯಾರಿಗೂ ಹುದ್ದೆ ಕೊಡುವುದಿಲ್ಲ. ಜಾತಿ ಆಧಾರದ ಮೇಲೆ ಯಾರಿಗೆ ಎಲ್ಲೆಲ್ಲಿ ಕೊಡಬೇಕೋ ಅಲ್ಲೆಲ್ಲಾ ಕೊಟ್ಟಿದ್ದೇವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ವಿಶ್ವನಾಥ್ ಹೇಳಿಕೆಗೆ ಶಾಮನೂರು ವಾಗ್ದಾಳಿ ನಡೆಸಿದ್ದಾರೆ.

Advertisement
Advertisement

Advertisement
Tags :
Advertisement