For the best experience, open
https://m.suddione.com
on your mobile browser.
Advertisement

ಆಸ್ಕರ್ ಅವಾರ್ಡ್ ಗೆದ್ದ RRR : ಸಂತಸದಲ್ಲಿ ಭಾರತೀಯ ಮಂದಿ

03:52 PM Mar 13, 2023 IST | suddionenews
ಆಸ್ಕರ್ ಅವಾರ್ಡ್ ಗೆದ್ದ rrr   ಸಂತಸದಲ್ಲಿ ಭಾರತೀಯ ಮಂದಿ
Advertisement

Advertisement
Advertisement

ಎಸ್ ಎಸ್ ರಾಜಮೌಳಿ ನಿರ್ದೇಶನದ RRR ಸಿನಿಮಾದ ಹಾಡಿಗೆ ಆಸ್ಕರ್ ಅವಾರ್ಡ್ ಬಂದಿದೆ. ಇದು ಭಾರತೀಯರಿಗಗೆ ಹೆಮ್ಮೆಯ ವಿಚಾರವಾಗಿದ್ದು, ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಿದೆ. ಈಗಾಗಲೇ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Advertisement

ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಪ್ರಶಸ್ತಿ ಲಭಿಸಿದೆ. ಲಾಸ್ ಏಂಜಲೀಸ್ ನಡೆಯುತ್ತಿರುವ 59ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಟಾಲಿವುಡ್ ಸಿನಿಮಾ ಆರ್ ಆರ್ ಆರ್ ಅತ್ಯುತ್ತಮ ಮೂಲಗೀತೆಯ ವಿಭಾಗದಲ್ಲಿ ನಾಟು ನಾಟು ಸಾಂಗ್ ಆಯ್ಕೆಯಾಗಿದೆ.

Advertisement
Advertisement

ಈ ಸಿನಿಮಾಗೆ ಎಂ ಎಂ ಕೀರವಾಣಿ ಸಂಗೀತ ನೀಡಿದ್ದು, ಚಂದ್ರಬೋಸ್ ಗೀತ ರಚನೆ ಮಾಡಿದ್ದಾರೆ. ಡಿವಿವಿ ದಾನಯ್ಯ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದರು. RRR ಸಿನಿಮಾ ಮಾರ್ಚ್24, 2022ರಂದು ದೇಶಾದ್ಯಂತ ತೆರೆಕಂಡಿತ್ತು. ಇಂದು ಆಸ್ಕರ್ ಅವಾರ್ಡ್ ತೆಗೆದುಕೊಂಡಿರುವುದು ಎಲ್ಲರ ಹೆಮ್ಮೆಗೆ ಕಾರಣವಾಗಿದೆ.

Advertisement
Advertisement