For the best experience, open
https://m.suddione.com
on your mobile browser.
Advertisement

ತುಂಗಾಭದ್ರಾ ಗೇಟ್ : 2 ದಿನದಿಂದ ಎಷ್ಟು ಲಕ್ಷ ಕ್ಯೂಸೆಕ್ ನೀರು ಪೋಲಾಗಿದೆ ಗೊತ್ತಾ..?

12:19 PM Aug 12, 2024 IST | suddionenews
ತುಂಗಾಭದ್ರಾ ಗೇಟ್   2 ದಿನದಿಂದ ಎಷ್ಟು ಲಕ್ಷ ಕ್ಯೂಸೆಕ್ ನೀರು ಪೋಲಾಗಿದೆ ಗೊತ್ತಾ
Advertisement

Advertisement
Advertisement

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ತುಂಗಾಭದ್ರಾ ಜಲಾಶಯ ಕೂಡ ಒಂದು. ಆದರೆ ಕಳೆದ ಎರಡು ದಿನದಿಂದ ಡ್ಯಾಂನಿಂದ ಸಿಕ್ಕಾಪಟ್ಟೆ ನೀರು ಪೋಲಾಗುತ್ತಿದೆ. ಗೇಟ್ ನಂಬರ್19 ಲಾಕ್ ಕಟ್ ಆಗಿದ್ದು, ಇದಕ್ಕೆ ಪ್ರಮುಖ ಕಾರಣವಾಗಿದೆ. ನಿರಂತರವಾಗಿ ನೀರು ಹೊರಗೆ ಹೋಗುತ್ತಿದ್ದು, ಈಗಾಗಲೇ 1,50,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.

ರೈತರಿಗೆ ಬಳಕೆಯಾಗಬೇಕಾದ ನೀರು ಹೀಗೆ ಪೋಲಾಗುತ್ತಿರುವುದು ಅಲ್ಲಿನ ರೈತರಿಗೆ ಬೇಸರವನ್ನುಂಟು ಮಾಡಿದೆ. ಹಾಗೇ ಗ್ರಾಮಸ್ಥರು ಕೂಡ ಆತಂಕದಲ್ಲಿದ್ದಾರೆ. ನೀರು ಹೊರಗೆ ಹೆಚ್ಚಾಗಿ ಹೋದರೆ, ಪ್ರವಾಹವೇನಾದರೂ ಉಂಟಾದರೆ ಹೇಗೆ ಎಂಬ ಭಯ ಅವರಲ್ಲಿದೆ. ಈಗಾಗಲೇ ಜಲಾಶಯದ ಅಕ್ಕಪಕ್ಕದ, ನದಿ ಪಾತ್ರದ ಜನರಿಗೆ ಸೂಕ್ತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿಕೊಳ್ಳಲಾಗಿದೆ. ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿಯನ್ನು ನೀಡಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲೂ KSNDMC ಮಾಹಿತಿಯನ್ನು ನೀಡಿದೆ.

Advertisement

ಇಂದು ಬೆಳಗ್ಗೆಯಿಂದಾನೇ 1,5,000 ಕ್ಯೂಸೆಕ್ ಒಳಹರಿವು ಹೆಚ್ಚಾಗುತ್ತಿದೆ‌. ನದಿ ಪಾತ್ರದ ಜನರಿಗೆ ಎಚ್ಚರದಿಂದ ಇರಲು ಸೂಚಿಸಲಾಗಿದೆ. ಇನ್ನು ಈಗಾಗಲೇ ಡ್ಯಾಂನ ಪರಿಸ್ಥಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲನೆ ಮಾಡಿ ಹೋಗಿದ್ದಾರೆ. ದುರಸ್ಥಿ ಮಾಡಲು ತಜ್ಞರೊಂದಿಗೆ ಚರ್ಚೆ ನಡೆಸಲಾಗಿದೆ. ತಜ್ಞರ ಜೊತೆಗೆ ಈ ಸಂಬಂಧ ಚರ್ಚೆಯನ್ನು ನಡೆಸಲಾಗಿದೆ. ಆದರೆ ದುರಸ್ಥಿ ಕಾರ್ಯ ಇನ್ನು ಆರಂಭವಾಗಿಲ್ಲ‌ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ಆನೆಗೊಂದಿಯ ಕೃಷ್ಣದೇವರಾಯ ಸಮಾಧಿಯ ಕಲ್ಲಿನ ಮಂಟಪವೂ ಮುಳುಗುವ ಸ್ಥಿತಿ ನಿರ್ಮಾಣವಾಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

Advertisement

Tags :
Advertisement