For the best experience, open
https://m.suddione.com
on your mobile browser.
Advertisement

ಮುಖದ ಹೊಳಪಿಗೆ ಫೇಶಿಯಲ್ ಅಷ್ಟೇ ಅಲ್ಲ ಯೋಗ ಕೂಡ ಮುಖ್ಯ...!

06:49 AM Aug 29, 2023 IST | suddionenews
ಮುಖದ ಹೊಳಪಿಗೆ ಫೇಶಿಯಲ್ ಅಷ್ಟೇ ಅಲ್ಲ ಯೋಗ ಕೂಡ ಮುಖ್ಯ
Advertisement

ಸುದ್ದಿಒನ್ : ದೇಹ ಫಿಟ್ನೆಸ್ ನಿಂದ ಇರಬೇಕು ಅಂದ್ರೆ ದೇಹಕ್ಕೆ‌ ಒಂದಿಷ್ಟು ವರ್ಕೌಟ್ ಬೇಕಾಗುತ್ತದೆ. ಜಿಮ್ ಅದು ಇದು ಅಂತ ಹೋದ್ರೆ ಬಹಳ ಬೇಗನೇ ನಮಗೆ ಬೇಕಾದ ಆಕಾರಕ್ಕೆ ದೇಹವನ್ನು ತಿರುಗಿಸಿಕೊಳ್ಳಬಹುದು. ಆದರೆ ಯೋಗ ಅನ್ನೋದು ದೇಹದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ವಿಚಾರವನ್ನು ನೀವೂ ಕೂಡ ಈಗಾಗಲೇ ಕೇಳಿರ್ತೀರಾ. ಯೋಗಾಭ್ಯಾಸದಿಂದ ರಿಸಲ್ಟ್ ನಿಧಾನವಾದರೂ, ಜೀವನದುದ್ದಕ್ಕೂ ಲಾಭ ಸಿಗುತ್ತೆ ಅನ್ನೋದನ್ನ. ಅದರಂತೆ ಯೋಗಭ್ಯಾಸ ಮಾಡಿಕೊಂಡವರು ಆರೋಗ್ಯದಿಂದಾನೂ ಇದ್ದಾರೆ.

Advertisement

ದೇಹ ಸೌಂದರ್ಯಕ್ಕಾಗಿ ವರ್ಕೌಟ್ ಮೊರೆ ಹೋಗ್ತೇವೆ.. ಮುಖದ ಸೌಂದರ್ಯಕ್ಕಾಗಿ ಎಷ್ಟೋ ಕಾಸ್ಮೆಟಿಕ್ ಮೊರೆ ಹೋಗ್ತೇವೆ. ಯೋಗಭ್ಯಾಸ ಮಾಡೋದ್ರಿಂದ ಎರಡೂ ಸಿಗುತ್ತೆ ಅನ್ನೋದಾದ್ರೆ ಖುಷಿ ಅಲ್ಲವೆ. ಯೋಗಾಭ್ಯಾಸ ಮಾಡುವುದರಿಂದ ಮುಖ ಮತ್ತು ದೇಹದ ಸೌಂದರ್ಯ ಹೆಚ್ಚಾಗುತ್ತೆ ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ಶಿಲ್ಪಾ ಶೆಟ್ಟಿನೆ ಇಲ್ವೆ. ಸದಾ ಯೋಗ ಮಾಡುವ ವಿಡಿಯೋಗಳನ್ನು ಅವರ ಸೋಷಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ. ಅವರು ಕೂಡ ಸ್ಪೂರ್ತಿಯಾಗುವಂತ ವಿಡಿಯೋಗಳನ್ನೇ ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ ನಾವೇಳೋದಕ್ಕೆ ಹೊರಟಿರುವ ಯೋಗಾಭ್ಯಾಸಗಳನ್ನು ತಿಳಿಸ್ತೀವಿ ನೋಡಿ.

ದಿನನಿತ್ಯ ಯೋಗ ಅಭ್ಯಾಸ ಮಾಡುವವರ ವಯಸ್ಸು 50 ದಾಟಿದರೂ 30 ಹರೆಯದವರಂತೆ ಕಾಣುತ್ತಾರೆ, ಅದುವೇ ಯೋಗದ ಸ್ಪೆಷಾಲಿಟಿ. ಧನುರಾಸನದಲ್ಲಿ ಮುಖದ ಕಾಂತಿ ಹೆಚ್ಚಾಗುವುದು. ಈ ಭಂಗಿಯನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ತ್ವಚೆ ಕಾಂತಿ ತುಂಬಾನೇ ಹೆಚ್ಚಾಗುವುದು. ಇದು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುತ್ತದೆ ಅಂದರೆ ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಪ್ರತಿದಿನ ಒಂದು ನಿಮಿಷಗಳ ಕಾಲ ಈ ಯೋಗ ಮಾಡಿದರೂ ಸಾಕು.

Advertisement

ಪಶ್ಚಿಮೋತ್ತಾಸನ ಈ ಭಂಗಿ ಕೂಡ ತ್ವಚೆ ಕಾಂತಿ ಹೆಚ್ಚಿಸುವಲ್ಲಿ ತುಂಬಾನೇ ಪರಿಣಾಮಕಾರಿ. ಇದು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಮಾನಸಿಕ ಒತ್ತಡವಿದ್ದಾಗ ಮೊಡವೆ, ಮುಖದಲ್ಲಿ ನೆರಿಗೆ ಬೀಳುವುದು ಈ ಬಗೆಯ ಸಮಸ್ಯೆ ಉಂಟಾಗುವುದು. ಈ ಪಶ್ಚಿಮೋತ್ತಾಸನ ಅಭ್ಯಾಸ ಮಾಡಿದಾಗ ಮನಸ್ಸು ಶಾಂತವಾಗುವುದು. ಇದು ಮಾನಸಿಕ ಒತ್ತಡ ಕಡಿಮೆ ಮಾಡುವುದು ಮಾತ್ರವಲ್ಲ ಇದು ರಕ್ತವನ್ನು ಶುದ್ಧೀಕರಿಸಲು ಸಹಕಾರಿಯಾಗುತ್ತದೆ. ಆಗ ಮುಖದ ಕಾಂತಿ ತಾನಾಗಿಯೇ ಹೆಚ್ಚುತ್ತದೆ. ಕಲೆಗಳು ಕಡಿಮೆಯಾಗುತ್ತದೆ.

ಅಧೋಮುಖ ಶ್ವಾಸಶಾನ, ಮತ್ಸ್ಯಾಸನ, ಸಂರ್ವಾಂಗಸಾನ, ಶವಸಾನವನ್ನು ಮಾಡಿ. ಎಲ್ಲಾ‌ ಮುಗಿದ‌ ನಂತರ 10-15 ನಿಮಿಷ ಪ್ರಾಣಯಾಮ, ಧ್ಯಾನ ಮಾಡಿ. ಈ ಉಸಿರಾಟದ ವ್ಯಾಯಾಮ ನಿಮ್ಮೆಲ್ಲಾ ಒತ್ತಡವನ್ನು ಹೊರಹಾಕುವುದರಿಂದ ತ್ವಚೆ ಕಾಂತಿಗೆ ತುಂಬಾನೇ ಒಳ್ಳೆಯದು. ನಂತರ ನಿಮ್ಮ ಚರ್ಮದ ಆರೋಗ್ಯ ಯಾವ ರೀತಿ ಸುಧಾರಿಸುತ್ತೆ ಎಂಬುದನ್ನು ನೋಡಿ.

Tags :
Advertisement