ದೇಹಕ್ಕೆ ಸುಸ್ತು ಎನಿಸಿದಾಗ ದ್ರಾಕ್ಷಿ ತಿನ್ನಿ ಬೇಗ ಸುಧಾರಿಸಿಕೊಳ್ಳುತ್ತೀರಿ
ಮನುಷ್ಯ ತನ್ನ ದೇಹಕ್ಕೆ ಸಾಕಾಗುವಷ್ಟು ನೀರನ್ನ ಕುಡಿಯದೇ ಹೋದಾಗ ದೇಹ ನಿರ್ಜಲೀಕರಣವಾಗುತ್ತದೆ. ಸುಸ್ತಾಗುವುದಕ್ಕೆ ಶುರುವಾಗುತ್ತದೆ. ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗುತ್ತದೆ. ಇನ್ನು ಹಲವು ರೀತಿಯ ಸಮಸ್ಯೆಗಳು ಕಾಡುವುದಕ್ಕೆ ಶುರುವಾಗುತ್ತವೆ. ಆಗ ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಬೇಕಾಗುತ್ತದೆ. ಅಂತ ಸಮಯದಲ್ಲಿ ದ್ರಾಕ್ಷಿ ತಿನ್ನುವುದು ಬಹಳ ಒಳ್ಳೆಯದು ಎಂದೇ ಹೇಳುತ್ತಾರೆ.
ಯಾಕಂದ್ರೆ ದ್ರಾಕ್ಷಿಯಲ್ಲಿ ನೀರಿನ ಅಂಶವೇ ಹೆಚ್ಚಾಗಿರುತ್ತದೆ. ಕಪ್ಪು ದ್ರಾಕ್ಷಿ ಹಾಗೂ ಹಸಿರು ಎರಡು ದ್ರಾಕ್ಷಿಗಳಲ್ಲೂ ಖನಿಜಾಂಶವೂ ಇದೆ. ದೇಹಕ್ಕೆ ಬೇಕಾದಂತಾಂಶಗಳು ಇದರಲ್ಲಿವೆ. ಹೀಗಾಗಿ ದೇಹ ಡಿಹೈಡ್ರೇಟ್ ಆದಾಗ ದ್ರಾಕ್ಷಿ ಬೆಸ್ಟ್ ಮೆಡಿಸನ್.
ಇನ್ನು ಈ ಎರಡು ಥರದ ದ್ರಾಕ್ಷಿಯನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಪ್ರತಿದಿನ ಬಳಕೆ ಮಾಡುವುದರಿಂದ ದೇಹಕ್ಕೆ ಇನ್ನಷ್ಟು ಲಾಭವಾಗಲಿದೆ. ಇದನ್ನ ಹೇಗಾದರೂ ಬಳಕೆ ಮಾಡಬಹುದು. ಜ್ಯೂಸ್ ಮಾಡಿ ಆದರೂ ಕುಡಿಯಬಹುದು. ಹಾಗೇ ತಿನ್ನಲುಬಹುದು. ಒಟ್ಟಾರೆ ಪ್ರತಿದಿನ ದ್ರಾಕ್ಷಿರಸ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೇನೆ ಲಾಭ ಸಿಗಲಿದೆ.
ಆಯುರ್ವೇದದಲ್ಲಿ ದ್ರಾಕ್ಷಿಗೆ ಮಹತ್ತರ ಸ್ಥಾನವೇ ಇದೆ. ದ್ರಾಕ್ಷೋತ್ತಮ ಅಂದರೆ ಉತ್ತಮ ಫಲಗಳಲ್ಲಿ ದ್ರಾಕ್ಷಿಗೆ ಮೊದಲ ಸ್ಥಾನವಿದೆ. ಹಲವು ಖಾಯಿಲೆಗಳಿಗೆ ದ್ರಾಕ್ಷಿಯಿಂದ ಪರಿಹಾರವಿದೆ. ಹೀಗಾಗಿ ದ್ರಾಕ್ಷಿ ಸೇವನೆ ಮಾಡುವುದು ಉತ್ತಮ. ರೋಗನಿರೋಧಕ ಶಕ್ತಿ ಹೆಚ್ಚಾಗಬೇಕೆಂದರೆ ಅತಿ ಹೆಚ್ಚು ವಿಟಮಿನ್ ಸಿ ಅಂಶವನ್ನು ಒಳಗೊಂಡ ಹಣ್ಣುಗಳು, ಹಾಗೂ ಆಹಾರಗಳನ್ನು ಸೇವನೆ ಮಾಡಬೇಕು. ಅದರಲ್ಲೂ ಈ ದ್ರಾಕ್ಷಿ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ಈ ದ್ರಾಕ್ಷಿ ಹಣ್ಣನ್ನು ನಿಯಮಿತವಾಗಿ ಸೇವಿಸದರೆ ಒಳ್ಳೆಯದು. ಈ ಹಣ್ಣಿನ ವಿಶೇಷತೆ ಏನೆಂದರೆ, ತನ್ನಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಹಾಗೂ ಖನಿಜಾಂಶ ಗಳನ್ನು ಒದಗಿಸುವ ಸಾಮರ್ಥ್ಯ ಇದೆ.