For the best experience, open
https://m.suddione.com
on your mobile browser.
Advertisement

ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ..?

05:56 AM Apr 28, 2024 IST | suddionenews
ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ
Advertisement

ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ ಕಡಲೆಕಾಯಿ ಬೀಜವನ್ನು ಹಾಗೇ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶ ಅತ್ಯಧಿಕವಾಗಿಯೇ ಸಿಗಲಿದೆ.

Advertisement

ಇನ್ನು ಅಡುಗೆ ಮನೆಯಲ್ಲಂತು ಕಡಲೇ ಬೀಜದ ಡಬ್ಬವೇ ಇದ್ದೇ ಇರುತ್ತದೆ. ರಾತ್ರಿ ನೆನೆಸಿ, ಬೆಳಗ್ಗೆ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು‌ ಅನುಕೂಲವಾಗಲಿದೆ.

* ಸಣ್ಣ ಇರುವವರು ತೂಕ ಹೆಚ್ಚು ಮಾಡಿಕೊಳ್ಳಬೇಕೆಂದು ಜಿಮ್ ಗೆ ಹೋಗುವುದೇ ಹೆಚ್ಚು. ಆರೋಗ್ಯಕರವಾಗಿ ತೂಕ ಹೆಚ್ಚಾಗಬೇಕು ಎಂದರೆ ರಾತ್ರಿ ನೆನೆಸಿಟ್ಟ ಕಡಲೇಕಾಯಿ ಬೀಜವನ್ನು ಬೆಳಗ್ಗೆ ತಿನ್ನಬೇಕಾಗುತ್ತದೆ.

Advertisement

* ಕೂದಲು ಉದುರುವುದು ಎಷ್ಟೋ ಜನರಿಗೆ ತಲೆ ನೋವಾಗಿದೆ. ನೀರಿನ ಸಮಸ್ಯೆ, ಶಾಂಪೂ ಬದಲಾವಣೆಯಿಂದ ಕೂದಲ ಉದುರುವಿಕೆ ಕಂಡು ಬರುತ್ತದೆ. ಆ ಸಮಸ್ಯೆಗೆ ಪರಿಹಾರ ನೆನೆಸಿಟ್ಟ ಕಡಲೇಕಾಯಿ ಬೀಜ

* ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಅನೇಕ ಕಾಸ್ಮೆಟಿಕ್ ಮೊರೆ ಹೋಗುತ್ತೇವೆ‌. ಆದರೆ ಇದು ಅಡುಗೆ ಮನೆಯ ಡಬ್ಬದಲ್ಲಿಯೇ ಸಿಗಲಿದೆ. ರಾತ್ರಿ ಕಡಲೆ ಕಾಯಿ ಬೀಜ ನೆನೆಸಿಟ್ಟು ಬೆಳಗ್ಗೆ ತಿನ್ನುವುದರಿಂದ ತ್ವಜೆ ಹೊಳೆಯುತ್ತದೆ.

Tags :
Advertisement