Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮೂತ್ರ ಸಮಸ್ಯೆ ಇರುವವರಿಗೆ ಕಲ್ಲಂಗಡಿ ಬೀಜ ಉತ್ತಮ ಔಷಧ..!

06:56 AM Sep 17, 2024 IST | suddionenews
Advertisement

 

Advertisement

ಮೂತ್ರ ವಿಸರ್ಜನೆ ಒಂದು ನೈಸರ್ಗಿಕ ಕ್ರಿಯೆ. ಮೂತ್ರ ಮಾಡಿದಾಗ ದೇಹದಲ್ಲಿನ ಕಲ್ಮಶ, ವಿಷಕಾರಿ ಅಂಶಗಳಿದ್ದರೆ ಅವುಗಳು ಹೊರಗೆ ಆ ಮೂಲಕ ಹೋಗುತ್ತವೆ. ಮೂತ್ರದಿಂದಾನೇ ನಮ್ಮ ದೇಹದ ಹಲವು ಆರೋಗ್ಯದ ಸಮಸ್ಯೆಗಳನ್ನು ತಿಳಿದುಕೊಳ್ಳಬಹುದು. ಮೂತ್ರವೇನಾದರೂ ಬೇರೆ ಬಣ್ಣದಲ್ಲಿ ಹೋಗುತ್ತಿದ್ದರೆ ದೇಹದಲ್ಲೇನೋ ವ್ಯತ್ಯಾಸವಾಗಿದೆ ಎಂದೇ ಅರ್ಥ. ಆರೋಗ್ಯದ ಕಡೆಗೆ ಗಮನ ಕೊಡಬೇಕು ಎಂದೇ ಅಲ್ಲಿಗೆ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ದೇಹಕ್ಕೆ ನೀರು ಬಹಳ ಮುಖ್ಯ. ಹೆಚ್ಚು ನೀರು ಕುಡಿದರೆ ಹಲವು ಬಾರಿ ಮೂತ್ರ ವಿಸರ್ಜನೆಯನ್ನು ಮಾಡುತ್ತಾರೆ. ಆದರೆ ಅದೆಷ್ಟೋ ಜನ ನೀರು ಕುಡಿಯುವುದೇ ಬಹಳ ಕಡಿಮೆ. ಆಗ ದೇಹವೂ ನಿರ್ಜಲೀಕರಣಕ್ಕೆ ತಿರುಗುತ್ತದೆ. ಮೂತ್ರವೂ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದ ಕಾರಣ ಆದಷ್ಟು ಹೆಚ್ಚು ನೀರನ್ನು ಕುಡಿಯುವುದು ಉತ್ತಮ. ಇನ್ನು ಮೂತ್ರ ಮಾಡುವಾಗ ಹಲವರಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬೇಡಿ. ಮೂತ್ರಕೋಶದ ಅಕ್ಕಪಕ್ಕದ ಅಂಗಾಂಗಗಳಿಗೆ ಏನೋ ತೊಂದರೆಯಾಗಿರುವ ಕಾರಣಕ್ಕೇನೆ ಆ ರೀತಿಯ ನೋವು ಬರುವುದಕ್ಕೆ ಕಾರಣವಾಗುತ್ತದೆ.

Advertisement

ಮೂತ್ರಕೋಶದ ಹಲವು ನೋವುಗಳಿಗೆ ಕಲ್ಲಂಗಡಿ ಹಣ್ಣಿನ ಬೀಜ ಬೆಸ್ಟ್ ಮದ್ದು. ನಾವೆಲ್ಲಾ ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣನ್ನು ತಿಂದು ಅದರ ಬೀಜವನ್ನು ಬಿಸಾಡುತ್ತೇವೆ. ಆದರೆ ಅದರಿಂದಾಗುವ ಉಪಯೋಗ ತಿಳಿದುಕೊಂಡರೆ ಖಂಡಿತ ನೀವೂ ಬಿಸಾಡುವುದಿಲ್ಲ. ಹಾಗಾದ್ರೆ ಅದು ಎಷ್ಟು ಉಪಯೋಗ..? ಹೇಗೆ ಬಳಕೆ ಮಾಡಬೇಕೆಂಬ ಮಾಹಿತಿ ಇಲ್ಲಿದೆ.

ಮೂತ್ರದ ಜಾಗದಲ್ಲಿ ಕಲ್ಲು ಇದ್ದಲ್ಲಿ, ಉರಿ‌ಮೂತ್ರ, ನೋವು ಇದ್ದವರು ಕಲ್ಲಂಗಡಿ ಹಣ್ಣಿನ ಬೀಜ ಬಳಸವಹುದು. ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಸಾಕಷ್ಟು ಪ್ರಮಾಣದಲ್ಲಿ ಇದೆ. ಹೀಗಾಗಿ ಅದರ ಬೀಜವನ್ನು ಮೇಲಿನ ಸಿಪ್ಪೆ ಬಿಡಿಸಿ, ಒಣಗಿಸಿ ಸೇವಿಸಬಹುದು. ಇದರಿಂದ ಮೂತ್ರದ ಸಮಸ್ಯೆಗೆ ಪರಿಹಾರ ಸಿಗುತ್ತದೆ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Advertisement
Tags :
bengaluruchitradurgahealthproblemssuddionesuddione newsurinaryWatermelonಆರೋಗ್ಯಔಷಧಕಲ್ಲಂಗಡಿ ಬೀಜಚಿತ್ರದುರ್ಗಬೆಂಗಳೂರುಮೂತ್ರಸಮಸ್ಯೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article