Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಾಲ್ಯಾವಸ್ಥೆ ಹಾಗೂ ಅಸಮರ್ಪಕ ಹಲ್ಲುಗಳ ಚಿಕಿತ್ಸೆ : ಇಲ್ಲಿದೆ ಉಪಯುಕ್ತ ಮಾಹಿತಿ...!

06:05 AM Aug 09, 2024 IST | suddionenews
Advertisement

Advertisement

ವಿಶೇಷ ಲೇಖನ : ಡಾ. ಕೆ. ವಿ. ಸಂತೋಷ್, ಚಿತ್ರದುರ್ಗ           ಮೊಬೈಲ್ ಸಂಖ್ಯೆ : 93424 66936

ಸುದ್ದಿಒನ್, ಚಿತ್ರದುರ್ಗ : ಮುತ್ತು ಪೊಣಿಸಿದಂತೆ ಬಾಲ್ಯದಲ್ಲಿ ಮುದ್ದಾಗಿದ್ದ ಮಗುವಿನ ಹಲ್ಲುಗಳು ಮಗು ಬೆಳೆದು ದೊಡ್ಡದಾದಂತೆ ಹಲ್ಲುಗಳ ಬೆಳವಣಿಗೆಯಲ್ಲಿ ವಕ್ರತೆ ಬರುವುದು, ವಕ್ರದಂತ ಸಮಸ್ಯೆ ಕಂಡು ಬರುವುದು, ದವಡೆ ಮುಂದೆ ಚಾಚಿಕೊಳ್ಳುವುದು... ಆಗುತ್ತಿದ್ದು ಮಗುವಿನ ಮುಖ,ಹಲ್ಲುಗಳು ಅಂದಗೆಡುತ್ತಿದ್ದರೆ ಖಂಡಿತ ಇಂತಹ ಮಕ್ಕಳಿಗೆ ಮುಖ ಹಾಗೂ ದಂತ ಚಿಕಿತ್ಸೆ ಬೇಕಾಗುತ್ತದೆ.

Advertisement

ಕೆಲ ಪೋಷಕರು ತಮ್ಮ ಮಕ್ಕಳ ಹಲ್ಲುಗಳು ಪೂರ್ಣ ಪ್ರಮಾಣದಲ್ಲಿ ಬೆಳೆದಂತೆ ಇವು ಸರಿಯಾಗುತ್ತದೆ ಎಂದು ತಪ್ಪು ತಿಳಿದಿರುತ್ತಾರೆ ಹಾಗೂ ಚಿಕಿತ್ಸೆ ಪಡೆಯದೆ ಸುಮ್ಮನಿರುತ್ತಾರೆ. ಏಳರಿಂದ ಹತ್ತನೇ ವಯಸ್ಸಿನ ಮಕ್ಕಳಲ್ಲಿ ಅಸಮರ್ಪಕ ಹಲ್ಲುಗಳು ಬೆಳವಣಿಗೆ ಯಾಗುತ್ತಿದ್ದರೆ ಅಥವಾ ಇಂತಹ ಮಕ್ಕಳ ದವಡೆ ಮೂಳೆ ಮುಂದೆ ಚಾಚಿಕೊಂಡಿದ್ದರೆ ಇಂತಹ ಮಕ್ಕಳಿಗೆ ಮೊದಲಿಗೆ ದಂತ ವೈದ್ಯರಿಂದ ಸೂಕ್ತ ಸಲಹೆ ಪಡೆದುಕೊಳ್ಳಬೇಕು.

 

ಚಿಕಿತ್ಸೆಗೆ ಅತ್ಯಂತ ಸೂಕ್ತವಾದ ವಯಸ್ಸು ಇದಾಗಿದ್ದು ಇದರ ನಂತರ ಯಾವುದೇ ಕಾರಣಕ್ಕೂ ಮೂಳೆಗಳ ಬೆಳವಣಿಗೆಯನ್ನು ನಾವು ಬದಲಿಸಲು ಸಾಧ್ಯವಾಗುವುದಿಲ್ಲ.
ಕೇವಲ ಹಲ್ಲುಗಳ ಜೋಡಣೆ ಹಾಗೂ ಅದರ ಜಾಗದಲ್ಲಿ ಮಾತ್ರ ಬದಲಾವಣೆ ಹಾಗೂ ವಕ್ರದಂತ ಚಿಕಿತ್ಸೆ ಮಾಡಲು ಸಾಧ್ಯ ಅಷ್ಟೇ.
ಒಮ್ಮೆ ದವಡೆ ಮೂಳೆಗಳು ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆಯಾದರೆ ಅದರ ಸರಿಪಡಿಸುವಿಕೆ ಬಹಳಷ್ಟು ಕಷ್ಟ ಸಾಧ್ಯ.
ಹಲ್ಲುಗಳಿಗೆ ಕ್ಲಿಪ್ ಹಾಕಿಸಿ ಸಾಕಷ್ಟು ಒಳಗಡೆ ಹಲ್ಲುಗಳನ್ನು ಜರೂಗಿಸಿದರೂ ಕೂಡ ಬಾಯಿಯ ಮುಂಭಾಗದ ಬಾಚಿ ಮೂಳೆಗಳೇ ಬಾಯಿಂದ ಹೊರ ಬರುವಷ್ಟು ಮುಂದೆ ಚಾಚಿಕೊಂಡಿರುವ ಕಾರಣಕ್ಕೆ ಉಬ್ಬು ಹಲ್ಲು ಗೋಚರವಾಗುತ್ತದೆ.

*ಕಾರಣಗಳು*
* ಅಸಮರ್ಪಕ ಮೂಳೆಗಳ ರಚನೆ ಹಾಗೂ ಅವುಗಳ ವಕ್ರ ಜೋಡಣೆ.
* ಬಾಯಿಯ ಮೂಳೆಯಲ್ಲಿ ಜಾಗದ ಕೊರತೆ.
* ಅನುವಂಶೀಯತೆ ಸಮಸ್ಯೆ.
* ವಯೋ ಸಹಜವಾಗಿ ಹಲ್ಲುಗಳು ಮೂಡದಿರುವುದು,ಹಾಲು ಹಲ್ಲುಗಳು ಉದುರದೆ ದೀರ್ಘಕಾಲ ಉಳಿದುಕೊಳ್ಳುವುದು.
* ಮಕ್ಕಳಲ್ಲಿ ಬೆರಳು ಚೀಪುವ ಚಟ.
* ಹಲ್ಲುಗಳ ರಚನೆಯಲ್ಲಿ ವ್ಯತ್ಯಾಸ ಇರುವುದು.
* ಹಲ್ಲುಗಳ ನಡುವೆ ಸಂದುಗಳು ಕಂಡುಬರುವುದು.
* ಬಾಯಿಯಲ್ಲಿ ಮೂಡಬಹುದಾದ ಹೆಚ್ಚುವರಿ ಹಲ್ಲುಗಳು.
* ಹಲ್ಲುಗಳ ಆಕಾರದಲ್ಲಿ ವ್ಯತ್ಯಾಸ. ತೀರಾ ದೊಡ್ಡದು ಅಥವಾ ತೀರಾ ಚಿಕ್ಕದು ಮೂಡಿರುವುದು.
* ದವಡೆಯ ಗಾತ್ರ ಹಾಗೂ ಹಲ್ಲಿನ ನಡುವೆ ಸಮನ್ವಯತೆ ಕೊರತೆ.

*ಪರಿಹಾರವೇನು?*
ಮಕ್ಕಳ ಎಲ್ಲಾ ಹಲ್ಲುಗಳ ಅಸಮರ್ಪಕತೆಗೂ ಅಥವಾ ವಕ್ರದಂತಕ್ಕೆ ಕ್ಲಿಪ್ ಚಿಕಿತ್ಸೆ ಒಂದೇ ಪರಿಹಾರವಲ್ಲ.
ಅದಕ್ಕೆ ಪರ್ಯಾಯವಾಗಿ ಮೂಳೆಗಳ,ದವಡೆಗಳ ಸರಿಪಡಿಸುವಿಕೆಯ ಚಿಕಿತ್ಸೆ ಕೂಡ ಫಲಕಾರಿಯಾಗಿರುತ್ತದೆ. ಇದಕ್ಕೆ ದವಡೆ ಪ್ಲೇಟ್ / ಅಪ್ಲೈಯನ್ಸ್ ಮೂಲಕ ಸರಿಪಡಿಸಲಾಗುತ್ತದೆ. ಇದಕ್ಕೆ 13 ವಯಸ್ಸು ಆಗುವ ಅವಶ್ಯಕತೆ ಇಲ್ಲ. ಎಲ್ಲಾ ಹಲ್ಲುಗಳು ಮೂಡಿದ ನಂತರ ಈ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ.
*ದವಡೆ ಮೂಳೆಗಳ ಬೆಳವಣಿಗೆ ಸರಿಯಾದ ದಿಕ್ಕಿನಲ್ಲಿ ಸರಿಯಾದ ವಯೋಮಾನಕ್ಕೆ ತಕ್ಕಂತೆ ಮಾಡಲಾಗುವ ಚಿಕಿತ್ಸಾ ವಿಧಾನವಿದು.
*ಮುಂದೆ ಆಗುವ ಸಮಸ್ಯೆಯನ್ನು ಶುರುವಿನಲ್ಲಿಯೇ ಸರಿಪಡಿಸುವ ಸರಳ ವಿಧಾನವಿದು.

*ತೊಂದರೆ ಆದ ನಂತರ ಸರಿಪಡಿಸುವ ಬದಲು ಶುರುವಿನಲ್ಲಿ ಅದನ್ನು ಆಗದಂತೆ ತಡೆಗಟ್ಟುವ ವಿಧಾನ ಇದಾಗಿದೆ.
*ದವಡೆಗಳ ಅಸಮರ್ಪಕ ಬೆಳವಣಿಗೆ ಹಾಗೂ ಅಡ್ಡಾದಿಡ್ಡಿ ಬೆಳವಣಿಗೆ ಗಳಿಗೆ ಇದರಿಂದ ತಡೆ ಬೀಳುತ್ತದೆ.
*ದವಡೆಗಳ ಗಾತ್ರಕ್ಕೆ ತಕ್ಕಂತೆ ಹಲ್ಲುಗಳ ಜೋಡಣೆ ಹಾಗೂ ಬೆಳವಣಿಗೆ ಇದರಲ್ಲಿ ಚಿಕಿತ್ಸೆಯ ಮೂಲಕ ಉತ್ತೇಜಿಸಲಾಗುತ್ತದೆ.
*ದವಡೆಯ ಬೆಳವಣಿಗೆ, ದವಡೆಯ ಅಗಲ ಮಾಡುವಿಕೆ, ದವಡೆಯ ಅನಗತ್ಯ ಮುಂಚಾಚುವಿಕೆಗೆ ತಡೆ, ಮುಂದೆ ಉಬ್ಬು ಹಲ್ಲು ಬಾರದಂತೆ ತಡೆ, ಕೆಳ ಮತ್ತು ಮೇಲು ದವಡೆಯ ಸಮರ್ಪಕ ಜೋಡಣೆ, ಅಸಹಜ ಮೂಳೆಗಳ ಬೆಳವಣಿಗೆ ಹಾಗೂ ಹಲ್ಲುಗಳ ರಚನೆಯಲ್ಲಿ ತೊಂದರೆ...ಇವೆಲ್ಲವನ್ನು ಈ ಚಿಕಿತ್ಸೆಯ ಮೂಲಕ ಸರಿಪಡಿಸಬಹುದಾಗಿದೆ.

ಉಪಯೋಗಗಳು:
* ಮುಂದೆ ವರ್ಷಗಟ್ಟಲೆ ಹಲ್ಲುಗಳಿಗೆ ಕ್ಲಿಪ್ ಹಾಕಿಸುವ ಪ್ರಮೇಯ ಬಿಡುವುದಿಲ್ಲ.
* ಹಲ್ಲುಗಳನ್ನು ಜಾಗದ ಕೊರತೆಗೆ ಎಂದು ತೆಗೆಯುವ ಪ್ರಮೇಯವೇ ಬರುವುದಿಲ್ಲ.
* ಸುಂದರ ಮುಖ, ಹಲ್ಲುಗಳ ಆರೋಗ್ಯ ದೊರಕುತ್ತದೆ.
* ಹಲ್ಲುಗಳ ಸ್ವಚ್ಛಗೊಳಿಸುವಿಕೆ ಹಾಗೂ ವಸಡಿನ ತೊಂದರೆಗಳು ಶುರುವಿನಲ್ಲಿಯೇ ಸರಿಪಡಿಸಲಾಗುತ್ತದೆ.
* ಬಾಯಿಯಲ್ಲಿ ಮೂಡದೆ ಇರುವ ಮೂಳೆ ಒಳಗಿನ ಹಲ್ಲು ಗಳು ಮುಂದೆ ಹುಟ್ಟುವ ಸಾಧ್ಯತೆಯನ್ನು ಶುರುವಿನಲ್ಲಿಯೇ ಸರಿಪಡಿಸಲಾಗುತ್ತದೆ.
* ಹಲ್ಲುಗಳನ್ನು ನಮಗೆ ಬೇಕಾದ ದಿಕ್ಕಿಗೆ ಸರಿಯುವಂತೆ ಮಾಡುತ್ತದೆ.
* ರೋಗಿಗಳಿಗೆ ದೀರ್ಘಕಾಲಿನ ಚಿಕಿತ್ಸೆ ಹಾಗೂ ಅನಗತ್ಯ ಹಣ ಖರ್ಚು ಉಳಿತಾಯ ಆಗುತ್ತದೆ.
*

Advertisement
Tags :
bengaluruchitradurgahealthImproper TeethInfancysuddionesuddione newstreatmentUseful informationಅಸಮರ್ಪಕಆರೋಗ್ಯಉಪಯುಕ್ತ ಮಾಹಿತಿಚಿಕಿತ್ಸೆಚಿತ್ರದುರ್ಗಬಾಲ್ಯಾವಸ್ಥೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹಲ್ಲುಗಳು
Advertisement
Next Article