For the best experience, open
https://m.suddione.com
on your mobile browser.
Advertisement

ಹಲ್ಲಿಗೆ ಕ್ಲಿಪ್ : ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಸಂಪೂರ್ಣ ಮಾಹಿತಿ...!

06:13 AM Aug 07, 2024 IST | suddionenews
ಹಲ್ಲಿಗೆ ಕ್ಲಿಪ್   ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಸಂಪೂರ್ಣ ಮಾಹಿತಿ
Advertisement

Advertisement
Advertisement

ವಿಶೇಷ ಲೇಖನ : ಡಾ. ಕೆ. ವಿ. ಸಂತೋಷ್
ದಂತ ವೈದ್ಯರು, ಚಿತ್ರದುರ್ಗ
ಮೊ. ಸಂಖ್ಯೆ : 93424 66936

ಸುದ್ದಿಒನ್ : ಸಾಮಾನ್ಯವಾಗಿ ಹಲ್ಲುಗಳ ಕ್ಲಿಪ್ ಎಲ್ಲರೂ ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಇದರ ಚಿಕಿತ್ಸೆ ಯಾವಾಗ ಪಡೆದುಕೊಳ್ಳಬೇಕು. ಇದಕ್ಕೆ ಸೂಕ್ತ ಸಮಯ ಯಾವುದು?‌ ಕೇವಲ ಉಬ್ಬು ಹಲ್ಲು ಇದ್ದ ಮಾತ್ರಕ್ಕೆ ಕ್ಲಿಪ್ ಹಾಕಿಸಬೇಕೇ? ಅಥವಾ ಇತರ ಕಾರಣಗಳಿಗೂ ಹಾಕಿಸಬಹುದೇ?... ಎಂಬಲ್ಲ ಪ್ರಶ್ನೆಗಳಿಗೆ ಈ ಲೇಖನ ಉತ್ತರ ಕೊಡುತ್ತದೆ.

Advertisement


ದಂತ ವೈದ್ಯಕೀಯ ಕ್ಷೇತ್ರವು ಇಂದು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಹಾಗೂ ಚಿಕಿತ್ಸಾ ವಿಧಾನಗಳಿಂದ ಪ್ರತಿಯೊಬ್ಬರಿಗೂ ತಲುಪುತ್ತಿದೆ. ಹಿಂದೆಲ್ಲ ದಂತ ವೈದ್ಯಕೀಯ ಕ್ಷೇತ್ರವು ಕೇವಲ ನಗರ ಪ್ರದೇಶ ಹಾಗೂ ಶ್ರೀಮಂತ ವರ್ಗದವರಿಗೆ ಮಾತ್ರ ಎಂಬಂತೆ ಸೀಮಿತಗೊಳಿಸಲಾಗಿತ್ತು. ಆದರೆ ಇಂದು ಸಣ್ಣ ಪಟ್ಟಣಗಳಿಗೂ ದಂತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳು ಕೈಗೆಟುಕುವ ದರದಲ್ಲಿ ಸರ್ವರಿಗೂ ತಲುಪುತ್ತಿದೆ.

Advertisement

ಯಾವುದೇ ವ್ಯಕ್ತಿಯ ಬಾಹ್ಯ ಸೌಂದರ್ಯಕ್ಕೆ ಕುತ್ತು ಬರುವುದೇ ಉಬ್ಬು ಹಲ್ಲುಗಳಿಂದ. ಉಬ್ಬು ಹಲ್ಲುಗಳಿರಬಹುದು, ಉಬ್ಬಿದ ದವಡೆ ಮೂಳೆಗಳಿರಬಹುದು ಅಥವಾ ವಕ್ರವಾಗಿರುವ ಮೂಳೆ ಪಟ್ಟಿಕೆ ಇರಬಹುದು. ಹೀಗೆ ವ್ಯಕ್ತಿಯ ಸೌಂದರ್ಯಕ್ಕೆ ಘಾಸಿಯಾಗುವ ಮಟ್ಟದಲ್ಲಿರುವ ವಕ್ರದಂತ ಸಮಸ್ಯೆಯನ್ನು ಸುಲಭವಾಗಿ ಸರಳ ವಿಧಾನಗಳಿಂದ ಪರಿಹಾರ ಪಡೆಯಬಹುದು.

ಬಹಳಷ್ಟು ಜನರಿಗೆ ವಕ್ರದಂತ ಸಮಸ್ಯೆಯನ್ನು ಸರಿಪಡಿಸಲು ಬಳಸಲಾಗುವ ಹಲ್ಲಿನ ಕ್ಲಿಪ್ ನ ಬಗ್ಗೆ ಸಾಕಷ್ಟು ತಪ್ಪು ಭಾವನೆಗಳು, ತಪ್ಪು ಕಲ್ಪನೆಗಳು ಇರುತ್ತವೆ. ಇವೆಲ್ಲವನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.

ವಕ್ರದಂತ ಚಿಕಿತ್ಸೆಯ ಮಾಹಿತಿ :  ಹಲ್ಲಿನ ಕ್ಲಿಪ್ ಹಾಕಿಸಿಕೊಳ್ಳುವುದರಿಂದ ಹಲ್ಲುಗಳು ಸಡಿಲಗೊಳ್ಳುತ್ತವೆ ಎಂಬುದು ಸಂಪೂರ್ಣವಾಗಿ ತಪ್ಪು ಅಭಿಪ್ರಾಯವಾಗಿದೆ. ಹಲ್ಲಿನ ಚಿಕಿತ್ಸೆ ನಡೆಯುವಾಗ ಸಹಜವಾಗಿ ಹಲ್ಲುಗಳು  ಅಲ್ಪ ಮಟ್ಟಿಗೆ ಸ್ವಸ್ಥಾನದಲ್ಲಿ ಜರುಗಬೇಕಾದ ಅವಶ್ಯಕತೆ ಇರುವ ಕಾರಣಕ್ಕೆ ಅಲುಗಾಡುತ್ತವೆ. ಅದು ಕೇವಲ 10 ರಿಂದ 20 %ಮಾತ್ರ. ಇಷ್ಟು ಕಡಿಮೆ ಪ್ರಮಾಣದ ಹಲ್ಲುಗಳ ಅಲುಗಾಟದಿಂದ ಯಾವುದೇ ಶಾಶ್ವತ ಹಾನಿ ಸಂಭವಿಸುವುದಿಲ್ಲ. ಹಲ್ಲುಗಳ ಅಲುಗಾಟ ಚಿಕಿತ್ಸಾ ಸಮಯದಲ್ಲಿ ತಾತ್ಕಾಲಿಕ. ಚಿಕಿತ್ಸೆ ಸಂಪೂರ್ಣವಾದ ಆರರಿಂದ ಎಂಟು ತಿಂಗಳಿನ ನಂತರ ಮೂಳೆ ಮೊದಲಿನ ಬಿಗಿ ಸ್ಥಾನಕ್ಕೆ ಮರಳುತ್ತದೆ ಹಾಗೂ ಹಲ್ಲುಗಳು ಸಂಪೂರ್ಣವಾಗಿ ಬಿಗಿಗೊಳ್ಳುತ್ತವೆ.

ಉಬ್ಬು ಹಲ್ಲುಗಳು ಅದೃಷ್ಟ ಸೂಚಕವಾಗಿದ್ದು, ಅದನ್ನು ಚಿಕಿತ್ಸಾ ಸಮಯದಲ್ಲಿ ತೆಗೆದರೆ ನಮ್ಮ ಅದೃಷ್ಟವೇ ಹೊರಟು ಹೋಗುತ್ತದೆ ಎಂದುಕೊಂಡು ಬಹಳಷ್ಟು ಜನರು ಚಿಕಿತ್ಸೆಯಿಂದ ಹಿಂದೆ ಸರಿಯುತ್ತಾರೆ ಆದರೆ ಉಬ್ಬು ಹಲ್ಲುಗಳ ಕಾರಣಕ್ಕೆ ನಮಗೆ ಯಾವುದೇ ಅದೃಷ್ಟ ಒಲಿಯುವುದಿಲ್ಲ.ಜೊತೆಗೆ ಹಲ್ಲುಗಳಿಗೂ ನಮ್ಮ ಅದೃಷ್ಟಕ್ಕೂ ಯಾವುದೇ ಸಂಬಂಧ ಇರುವುದಿಲ್ಲ.ಇದೊಂದು ತಪ್ಪು ನಂಬಿಕೆ ಅಷ್ಟೇ.ಉಬ್ಬು ಹಲ್ಲುಗಳಿಂದ ಸಾಮಾಜಿಕವಾಗಿ ಇತರರ ಜೊತೆಗೆ ಮುಕ್ತವಾಗಿ ಬೆರೆಯಲು ಕಷ್ಟವಾಗುತ್ತದೆ ಕೀಳರಿಮೆ ಅನುಭವಿಸುತ್ತಾರೆ. ಉಬ್ಬು ಹಲ್ಲುಗಳಿಂದ ತೊಂದರೆಯೇ ಹೊರತು ಯಾವುದೇ ಉಪಯೋಗಗಳಿಲ್ಲ.

ಚಿಕಿತ್ಸೆಗೆ ಪೂರಕವಾಗಿ ಜಾಗ ಮಾಡಿಕೊಳ್ಳಲು ಹಲ್ಲುಗಳು ಕಿತ್ತರೆ ಕಣ್ಣು, ನರ, ತಲೆಗೆ ತೊಂದರೆಯಾಗುತ್ತದೆ ಎಂದು ಬಹಳಷ್ಟು ಜನರು ಚಿಕಿತ್ಸೆಯಿಂದ ಹಿಂದೆ ಸರಿಯುತ್ತಾರೆ. ಆದರೆ ಇದೊಂದು ತಪ್ಪು ಅಭಿಪ್ರಾಯವಾಗಿದೆ. ಯಾವುದೇ ಹಲ್ಲುಗಳನ್ನು ಕೀಳುವುದರಿಂದ ತಲೆಗೆ,ನರಗಳಿಗೆ ತೊಂದರೆ ಆಗುವುದಿಲ್ಲ.

ಹಲ್ಲುಗಳಿಗೆ ಕ್ಲಿಪ್ ಹಾಕಿಸಲು ಕನಿಷ್ಠ 14 ವರ್ಷ ಆಗಿರಲೇಬೇಕೆಂಬ ನಿಯಮ ಕೂಡ ಇರುವುದಿಲ್ಲ. ಕೆಲವರು ಉಬ್ಬು ಹಲ್ಲುಗಳಾಗಿದ್ದರೂ, ವಕ್ರದಂತ ಸಮಸ್ಯೆ ಇದ್ದರೂ ಕೂಡ 14 ವಯಸ್ಸಿನವರೆಗೆ ಕಾಯುತ್ತಾರೆ.ದವಡೆ ಮೂಳೆ ಮುಂದೆ ಚಾಚಿಕೊಂಡಾಗ ಹಲ್ಲು ಕೂಡ ವಕ್ರತೆ ಪಡೆಯುತ್ತದೆ.ಆ ಕಾರಣಕ್ಕೆ ಮೂಳೆಗಳ ಬೆಳವಣಿಗೆಗಳನ್ನು ವಯಸ್ಸಿಗೆ ಅನುಗುಣವಾಗಿ ಬೆಳವಣಿಗೆಯಾಗುವಂತೆ ಚಿಕಿತ್ಸೆ ನೀಡಿದಾಗ ಮುಂದೆ ಹಲ್ಲುಗಳಿಗೆ ಕ್ಲಿಪ್ ಹಾಕಿಸುವ  ಪ್ರಮೇಯವೇ ಬರುವುದಿಲ್ಲ. ಇದನ್ನು ಎಂಟನೇ ವಯಸ್ಸಿನಿಂದ ಪ್ರಾರಂಭಿಸಲಾಗುತ್ತದೆ. ಹಲ್ಲಿನ ಕ್ಲಿಪ್ ಚಿಕಿತ್ಸೆಗೆ ಯಾವುದೇ ವಯಸ್ಸಿನ ಹಂಗು ಇರುವುದಿಲ್ಲ. ಎಂಟನೇ ವಯಸ್ಸಿನಿಂದ ಪ್ರಾರಂಭಿಸಿ 45 ವಯಸ್ಸಿನ ತನಕವೂ ವಕ್ರದಂತ ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆಯನ್ನು ಸಣ್ಣ ವಯಸ್ಸಿನಲ್ಲಿ ಮಾಡಿದಷ್ಟು ಬಹಳಷ್ಟು ಅನುಕೂಲಕಾರಿಯಾಗುತ್ತದೆ.

ಹಲ್ಲಿನ ಬೆಳವಣಿಗೆ ಹಂತದಲ್ಲಿಯೇ ವಕ್ರದಂತ  ಚಿಕಿತ್ಸೆಯನ್ನು ಮಾಡಿದರೆ ತುಂಬಾ ಅನುಕೂಲಕರ.
ಕ್ಲಿಪ್ ಚಿಕಿತ್ಸೆ ಅತ್ಯಂತ ದೀರ್ಘಕಾಲಿನವಾಗಿದ್ದು ವರ್ಷಗಟ್ಟಲೆ ಸಮಯ ಹಿಡಿಯುತ್ತದೆ ಎಂಬ ತಪ್ಪು ಅಭಿಪ್ರಾಯವಿದೆ. ಆದರೆ ನಿಜವಾಗಿ ಹೇಳಬೇಕೆಂದರೆ ಮೂಳೆ ಸಾಂದ್ರತೆ ಆಧಾರ ಮೇಲೆ ವ್ಯಕ್ತಿಯಿಂದ ವ್ಯಕ್ತಿಗೆ ಚಿಕಿತ್ಸಾ ಸಮಯ ಬದಲಾವಣೆ ಆಗುತ್ತದೆ. ಎಂಟು ತಿಂಗಳಿನಿಂದ ಹಿಡಿದು ಮೂರು ವರ್ಷ ಚಿಕಿತ್ಸಾ ಸಮಯ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಜೀವನಪರ್ಯಂತ ಸುಂದರ ಮುಖಚರ್ಯೆ ಬೇಕಾಗಿದ್ದಲ್ಲಿ ಈ ಚಿಕಿತ್ಸಾ ಸಮಯಕ್ಕೆ ಹೊಂದಿಕೊಳ್ಳಬೇಕಾಗುತ್ತದೆ.

ಕ್ಲಿಪ್ ಹಾಕಿಸಿದರೆ ನಮಗೆ ಊಟ ತಿಂಡಿ ಮಾಡಲು ಅತ್ಯಂತ ಕಷ್ಟವಾಗುತ್ತದೆ ಎಂದು ಬಹಳಷ್ಟು ಜನರು ತಿಳಿದುಕೊಂಡಿದ್ದಾರೆ. ಆದರೆ ಈ ಹಲ್ಲಿನ ಕ್ಲಿಪ್ ಸಂಪೂರ್ಣವಾಗಿ ಮುಂಭಾಗದ ಹಲ್ಲುಗಳ ಬಾಚಿ ಹಲ್ಲುಗಳ ಕೇಂದ್ರೀಕೃತ ಆಗಿರುತ್ತದೆ ಜೊತೆಗೆ ದವಡೆ ಜಗೆಯುವ ಭಾಗಕ್ಕೆ ಕೃಷ್ಣ ಬಟನ್ಗಳನ್ನು ಹಾಕಿರುವುದಿಲ್ಲ.

ತಪ್ಪು ಅಭಿಪ್ರಾಯಗಳು : ಕ್ಲಿಪ್ ಹಾಕಿಸುವುದರಿಂದ ನಮಗೆ ಮಾತನಾಡಲು ಆಗುವುದಿಲ್ಲ. ಇದು ಅತ್ಯಂತ ನೋವುದಾಯಕ ಹಾಗೂ ಇದು ಮುಜುಗರ ತರಿಸುತ್ತದೆ.

ಉ: ಮೇಲೆ ತಿಳಿಸಿದಂತೆ ಯಾವುದೇ ಸಮಸ್ಯೆ ಇರುವುದಿಲ್ಲ. ಹಲ್ಲಿನ ಕ್ಲಿಪ್ ಹಾಕಿಸಿದಾಗ ನೋವು ಕೇವಲ ಎರಡು ಮೂರು ದಿನ ತಾತ್ಕಾಲಿಕವಾಗಿ ಇರುತ್ತದೆ. ನಂತರ ತಾನೇ ತಾನಾಗಿ ಸರಿಯಾಗುತ್ತದೆ. ಊಟ ಮಾಡಲು, ಮಾತನಾಡಲು, ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಹಲ್ಲಿನ ಕ್ಲಿಪ್ನಿಂದ ಯಾವುದೇ ತೊಂದರೆ ಆಗುವುದಿಲ್ಲ. ಪಾರದರ್ಶಕ ದಂತ ಪಟ್ಟಿಯಿಂದಲೂ ಕೂಡ ಚಿಕಿತ್ಸೆ ಈಗ ಲಭ್ಯವಿದೆ. ಮೇಲ್ಭಾಗದಿಂದ ದಂತ ಪಟ್ಟಿ ಹಾಕುವಂತೆ ಒಳಭಾಗದಿಂದಲೂ ಕೂಡ ಹಲ್ಲಿನ ದಂತಪಟ್ಟಿ ಅಳವಡಿಸಬಹುದು.

Tags :
Advertisement