ಮಹಿಳೆಯರಿಗೆ ಕಾಡುವ ಥೈರಾಯ್ಡ್ ಸಮಸ್ಯೆಗೆ ಮುದುಕದೆಲೆ ಬೆಸ್ಟ್..!
ಇತ್ತಿಚೆಗಂತು ಸಾಕಷ್ಟು ಹೆಣ್ಣು ಮಕ್ಕಳಲ್ಲಿ ಈ ಥೈರಾಯ್ಡ್ ಸಮಸ್ಯೆ ಕಾಣಿಸುತ್ತದೆ. ಥೈರಾಯ್ಡ್ ಅಂತಾನೇ ಅಲ್ಲ ಸಾಕಷ್ಟು ಕಾಯಿಲೆಗಳು ಮನುಷ್ಯನನ್ನ ಕಾಡೋದಕ್ಕೆ ಶುರು ಮಾಡಿದೆ. ಅದಕ್ಕೆಲ್ಲಾ ಕಾರಣ ನಾವೂ ಜೀವಿಸ್ತಾ ಇರೋ ಜೀವನ ಶೈಲಿ.
ಹೌದು ನಮ್ಮ ಆಹಾರ ಕ್ರಮ, ಕೆಲಸ, ಒತ್ತಡ, ವಿಶ್ರಾಂತಿ ಇಲ್ಲದೆ ಇರುವುದು ಇವೆಲ್ಲವೂ ನಮ್ಮ ದೇಹವನ್ನ ನಾವೇ ಅನಾರೋಗ್ಯಕ್ಕೆ ದೂಡುವಂತೆ ಮಾಡುತ್ತಿವೆ. ಅದರಿಂದಾಗಿನೇ ನಾನಾ ಕಾಯಿಲೆಗಳು. ಆದ್ರೆ ಕಾಯಿಲೆಗಳು ಬಂದಾಕ್ಷಣ ಬರೀ ಇಂಗ್ಲೀಷ್ ಮೆಡಿಸನ್ ಗೆ ಅಡಿಕ್ಟ್ ಆಗೋಗಿದ್ದೀವಿ.
ಕೆಲವೊಂದು ಕಾಯಿಲೆಗಳಿಗೆ ಮಾತ್ರೆ ಬಿಟ್ಟು ಔಷಧ ಸಿಗಲಿದೆ. ಹಳ್ಳಿಗಳಲ್ಲಿ ಬೆಳೆಯುವ ಗಿಡಗಳು, ಸಸಿಗಳು, ಮನೆಯ ಅಡುಗೆ ಮನೆಯಲ್ಲಿರುವ ಕೆಲವೊಂದು ಆಹಾರ ಪದಾರ್ಥದಿಂದ ನಾವೂ ಕಾಯಿಲೆಯಿಂದ ದೂರವಿರಬಹುದು.
ಅದರಲ್ಲೂ ಥೈರಾಯ್ಡ್ ಸಮಸ್ಯೆ ಇರುವವರು ಮುದುಕದೆಲೆಯನ್ನ ಉಪಯೋಗಿಸಿದ್ರೆ ಥೈರಾಯ್ಡ್ ನಿಂದ ಮುಕ್ತಿ ಪಡೆಯಬಹುದು. ಗ್ರಾಮೀಣ ಪ್ರದೇಶದಲ್ಲಿ ಈ ಮುದುಕದೆಲೆಯನ್ನ ಊಟ ಮಾಡೋದಕ್ಕೂ ಉಪಯೋಗಿಸ್ತಾರೆ.
ಮುದುಕದ ಗಿಡದ ಕಾಂಡದ ಭಾಗದಲ್ಲಿರುವ ಚಕ್ಕೆಯನ್ನು ಕುಟ್ಟಿ ಪುಡಿ ಮಾಡಿಕೊಂಡು ಅದನ್ನು ಚೂರ್ಣವಾಗಿ ತಯಾರಿಸಿಕೊಳ್ಳಬೇಕು ಹಾಗೆ ತಯಾರಿಸಿಕೊಂಡ 2 ಗ್ರಾಂ ಚೂರ್ಣವನ್ನು 300 ಎಂಎಲ್ ನೀರಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕು, ಹೀಗೆ ಮಿಶ್ರಣ ಮಾಡಿಕೊಂಡ ನೀರನ್ನು ಚೆನ್ನಾಗಿ ಕುದಿಸಬೇಕು ಹೇಗೆಂದರೆ 300 ಎಂ ಎಲ್ ಇರುವ ನೀರು 100 ಎಂ ಎಲ್ ಆಗುವವರೆಗೂ ಕುದಿಸಬೇಕು. ನಂತರ ಅದನ್ನು ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆಯ ಸಮಯಗಳಲ್ಲಿ ಮಾಡಿಕೊಂಡು ಕುಡಿಯುತ್ತಾ ಬಂದರೆ 6 ತಿಂಗಳುಗಳಲ್ಲಿ ನಿಮ್ಮ ಥೈರಾಯಿಡ್ ಸಂಪೂರ್ಣ ವಾಸಿಯಾಗುತ್ತೆ.
(ವಿ.ಸೂ: ಒಮ್ಮೆ ಹಿರಿಯರ ಸಲಹೆ ಪಡೆಯಿರಿ)