For the best experience, open
https://m.suddione.com
on your mobile browser.
Advertisement

Suddione Motivation | ಯಶಸ್ಸು ಒಂದು ಗಮ್ಯಸ್ಥಾನವಲ್ಲ, ಅದೊಂದು ನಿರಂತರ ಪ್ರಯಾಣ : ಪ್ರತಿ ಮೈಲಿಗಲ್ಲನ್ನು ಮೆಟ್ಟಿನಿಲ್ಲಬೇಕು...!

07:58 AM Jun 11, 2024 IST | suddionenews
suddione motivation   ಯಶಸ್ಸು ಒಂದು ಗಮ್ಯಸ್ಥಾನವಲ್ಲ  ಅದೊಂದು ನಿರಂತರ ಪ್ರಯಾಣ   ಪ್ರತಿ ಮೈಲಿಗಲ್ಲನ್ನು ಮೆಟ್ಟಿನಿಲ್ಲಬೇಕು
Advertisement

Advertisement

ಸುದ್ದಿಒನ್ : ಜೀವನದಲ್ಲಿ ಯಶಸ್ವಿಯಾಗಲು, ನಾವು ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಯೋಚಿಸಬೇಕು, ಭೂತಕಾಲದ ಬಗ್ಗೆ ಅಲ್ಲ.

Advertisement

ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳಲ್ಲಿ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು. ಉದಾಹರಣೆಗೆ, ಸತ್ಯ ನಾದೆಲ್ಲಾ ಮತ್ತು ಸುಂದರ್ ಪಿಚೈ. ಅತ್ಯಂತ ಸಾಮಾನ್ಯ ವ್ಯಕ್ತಿಗಳಾದ ಇವರು ಬಡಕುಟುಂಬದಿಂದ ಬಂದವರು. ಆದರೆ ಅವರು ಇಂದು ಯಾರೂ ಊಹಿಸದ ರೀತಿಯಲ್ಲಿ ವಿಶ್ವದ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

Advertisement

ಯಶಸ್ಸು ಒಂದು ಗಮ್ಯಸ್ಥಾನವಲ್ಲ ಆದರೆ ಒಂದು ಪ್ರಯಾಣ. ಬದುಕಿನ ಈ ನಿರಂತರ ಪ್ರಯಾಣದ ಮುಂದೆ ಸಾಗುತ್ತಲೇ ಇರಬೇಕು. ಒಂದರ ನಂತರ ಮುಂದೆ ಮತ್ತೊಂದು ಮೈಲಿಗಲ್ಲು ಕಾಣಿಸುವಂತೆ, ಜೀವನದಲ್ಲಿ ಒಂದರ ನಂತರ ಮತ್ತೊಂದು ಯಶಸ್ಸು ಸಾಧಿಸಬೇಕು. ಹಾಗಾಗಿ ಯಶಸ್ಸು ಎನ್ನುವುದು ಗಮ್ಯಸ್ಥಾನವಲ್ಲ. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಗೂ ಜೀವನದ ಪಾಠಗಳಿವೆ. ಇದು ಅವರ ಜೀವನವನ್ನು ಬದಲಾಯಿಸುತ್ತದೆ. ಯಶಸ್ಸಿಗೆ ಕಾರಣವಾಗುತ್ತದೆ. ಅವರು ವೈಫಲ್ಯಗಳು, ಸಂಕಷ್ಟಗಳು, ಪ್ರಯೋಗಗಳು ಸಾಕಷ್ಟು ಜೀವನ ಪಾಠ ಕಲಿಸಿರುತ್ತದೆ. ಹೀಗೆ ಕಲಿತ ಜೀವನ ಪಾಠವೇ  ಗುರಿ ಮುಟ್ಟಲು ಮತ್ತು ಕನಸುಗಳನ್ನು ಸಾಕಾರಮಾಡಿಕೊಳ್ಳಲು ಪ್ರೇರೇಪಿಸುತ್ತವೆ. ಇದೆಲ್ಲ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ.

Advertisement
Advertisement

ಸೋಲು ಯಶಸ್ಸಿಗೆ ತದ್ವಿರುದ್ಧ. ಆದರೆ ಸೋಲು ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಎನ್ನುವುದನ್ನು ಮಾತ್ರ ಮರೆಯಬಾರದು. ಎಲ್ಲಾ ಯಶಸ್ವಿ ಜನರು ವೈಫಲ್ಯವನ್ನು ತಮ್ಮ ಜೀವನ  ಪ್ರಯಾಣದಲ್ಲಿ ಅನಿವಾರ್ಯ ಅಭ್ಯಾಸವೆಂದುಕೊಂಡು‌ ಮೇಲಕ್ಕೆ ಏರುವ ಅವಕಾಶ ಎಂದು ಸವಾಲಾಗಿ ಸ್ವೀಕರಿಸಬೇಕು.

ಯಶಸ್ಸು ರಾತ್ರೋರಾತ್ರಿ ನಡೆಯುವ ಅದ್ಭುತವಲ್ಲ, ಪವಾಡವಲ್ಲ. ತಾಳ್ಮೆ, ದೃಢತೆ ಮತ್ತು ಬುದ್ಧಿವಂತಿಕೆ,  ದೊಡ್ಡ ಅಡೆತಡೆಗಳು ಹೀಗೆ ಇವೆಲ್ಲವುಗಳನ್ನು ದಾಟಿದ ನಂತರ ಸಿಗುವ ನಿಲ್ದಾಣ.

ಜೀವನದಲ್ಲಿ ಯಶಸ್ವಿ ವ್ಯಕ್ತಿಗಳು ಯಾವಾಗಲೂ ಸ್ಪಷ್ಟವಾದ ಗುರಿಗಳನ್ನು ಹೊಂದಿರುತ್ತಾರೆ. ಅವು ಸಾಧಿಸಲು ಕಷ್ಟಕರವಾದ ಗುರಿಗಳಾಗಿರುತ್ತವೆ. ಏನನ್ನು ಸಾಧಿಸಬೇಕೆಂಬುದರ ಸ್ಪಷ್ಟ ದೂರ ದೃಷ್ಟಿಯನ್ನು ಹೊಂದಿರುತ್ತಾರೆ. ಮತ್ತು ಆ ಗುರಿಯನ್ನು ತಲುಪಲು ಶಕ್ತಿ ಮತ್ತು ಪ್ರೇರಣೆಯನ್ನು ಹೊಂದಿರುತ್ತಾರೆ.

ಯಶಸ್ಸಿನ ಹಾದಿಯು ಅಪಾಯಗಳನ್ನೂ ಒಳಗೊಂಡಿರುತ್ತದೆ. ಎಲ್ಲಾ ಅಪಾಯಗಳು ಒಂದೇ ಆಗಿರುವುದಿಲ್ಲ. ಯಶಸ್ವಿ ಜನರು ಅಪಾಯಗಳನ್ನು ಆಹ್ವಾನಿಸುತ್ತಾರೆ ಮತ್ತು ಅವುಗಳನ್ನು ಅಧ್ಯಯನ ಮಾಡಿ ನಂತರ ಮುಂದುವರಿಯುತ್ತಾರೆ.

ನಮ್ಮ ಜೀವನದಲ್ಲಿನ ಯಶಸ್ಸು ಮತ್ತು ವೈಫಲ್ಯಗಳಲ್ಲಿ ನಮ್ಮ ಸುತ್ತಮುತ್ತಲಿನ ಜನರು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ . ಯಶಸ್ವಿ ಜನರು ಯಾವಾಗಲೂ ಧನಾತ್ಮಕವಾಗಿ ಮತ್ತು ನಮಗೆ ಸಹಕರಿಸುವ ಜನರೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಏಕೆಂದರೆ ಅವರು ಇವರನ್ನು ಪ್ರೋತ್ಸಾಹಿಸುತ್ತಾರೆ. ಅವರು ಸಂಪೂರ್ಣ ಸಾಮರ್ಥ್ಯವನ್ನು ಹೊರತರಲು ಪ್ರೇರೇಪಿಸುತ್ತಾರೆ.

ಈ ಬಿಡುವಿಲ್ಲದ ಜಗತ್ತಿನಲ್ಲಿ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಯಶಸ್ಸಿಗೆ ಅತ್ಯಗತ್ಯವಾದ ಗುಣಗಳಲ್ಲಿ ಒಂದಾಗಿದೆ. ಯಶಸ್ವಿ ಜನರು ಬದಲಾವಣೆಯಿಂದ ಹಿಂದೆ ಸರಿಯುವುದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನೀತಿಗಳನ್ನು  ಆಲೋಚನೆಗಳೊಂದಿಗೆ ಬದಲಾಯಿಸಿಕೊಳ್ಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಕಠಿಣ ಪರಿಶ್ರಮವೊಂದೇ ಸಾಕಾಗುವುದಿಲ್ಲ. ಜೊತೆಗೆ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು. ಬರೀ ಹಾರ್ಡ್ ವರ್ಕ್ ಅಷ್ಟೇ ಅಲ್ಲ, ಸ್ಮಾರ್ಟ್ ವರ್ಕ್ ಕೂಡ ಕಲಿಯಬೇಕು. ಯಶಸ್ಸಿನ ಗುಟ್ಟು ತಿಳಿದವರು ಮುಂದೆ ಮಾಡಬೇಕಾದ ಕಾರ್ಯಗಳಿಗೆ ಆದ್ಯತೆ ನೀಡುತ್ತಾರೆ. ಉತ್ತಮ ಫಲಿತಾಂಶಗಳನ್ನು ನೀಡುವ ಕಾರ್ಯಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ.

ಹಿನ್ನಡೆ, ಕೆಲವು ಪೆಟ್ಟುಗಳು ಮತ್ತು ಸವಾಲುಗಳನ್ನು ಎದುರಿಸದೆ ಯಶಸ್ಸು ಸಿಗುವುದಿಲ್ಲ. ಆದರೆ ಅಂತಹ ಕಾಲದಲ್ಲೂ ಸೋಲುಗಳಿಂದ ಪುಟಿದೇಳುವ ಧೈರ್ಯ ಮತ್ತು ಪರಿಶ್ರಮ ಇದ್ದವರು ಯಶಸ್ಸಿನ ಹಾದಿಯಲ್ಲಿ  ಸಾಗುತ್ತಾರೆ.  ಅದಕ್ಕಾಗಿಯೇ ಗಮ್ಯಸ್ಥಾನವನ್ನು ಹೋಗಿ ನಿಲ್ಲುವ ನಿಲ್ದಾಣದಂತೆ ಅಲ್ಲದೆ ನಿರಂತರವಾಗಿ ಸಾಗುವ ಪ್ರಯಾಣದಂತೆ ನೋಡಿ. ಆಗ ಮಾತ್ರ ಅನಿರೀಕ್ಷಿತ ಗುರಿ ನಿಮ್ಮದಾಗುತ್ತದೆ. ಕಠಿಣ ಪರಿಶ್ರಮದ ಮನೋಭಾವ ನಿಮ್ಮಲ್ಲಿದ್ದರೆ‌ ಯಾವುದೇ ಯಶಸ್ಸು ನಿಮ್ಮ ಕಾಲ ಕೆಳಗೆ ಬಂದು ಸೇರುತ್ತದೆ. ನಿಮಗೆ ಬೇಕಾಗಿರುವುದು ನಾವು ಸಾಗುವ ಮಾರ್ಗವನ್ನು ಅರ್ಥಮಾಡಿಕೊಳ್ಳುವುದು.

Advertisement
Tags :
Advertisement