Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

Snore Problem : ಗೊರಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ..! ಪರಿಹಾರಕ್ಕಾಗಿ ಹೀಗೆ ಮಾಡಿ...!

06:24 AM Oct 17, 2024 IST | suddionenews
Advertisement

 

Advertisement

ಸುದ್ದಿಒನ್ | ಕೆಲವರು ರಾತ್ರಿ ಮಲಗುವಾಗ ಗೊರಕೆ ಹೊಡೆಯುತ್ತಾರೆ. ಈಗ ಇದು ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಗೊರಕೆ ಹೊಡೆಯುವವರು ನಮ್ಮ ಸುತ್ತಮುತ್ತಲೂ ಇದ್ದಾರೆ. ಈ ಗೊರಕೆಯ ಸಮಸ್ಯೆ ಒಬ್ಬರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಆ ವ್ಯಕ್ತಿಯ ರೂಮಿನಲ್ಲಿ ಮಲಗುವ ಇಡೀ ಕುಟುಂಬದ ಸದಸ್ಯರನ್ನು ಕಾಡುತ್ತದೆ. ಮನೆಯಲ್ಲಿ ಯಾರಾದರೂ ಒಬ್ಬರು ರಾತ್ರಿಯಿಡೀ ಗೊರಕೆ ಹೊಡೆಯುತ್ತಿದ್ದರೆ ಮನೆಯಲ್ಲಿ ಇರುವ ಉಳಿದವರ ನಿದ್ದೆ ಕೆಡುತ್ತದೆ. ಈ ಗೊರಕೆಯ ಹಿಂದೆ ಹಲವು ಕಾರಣಗಳಿವೆ.

ಅನೇಕ ಜನರು ಗೊರಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಲ್ಲದೆ, ಈ ಗೊರಕೆ ಅವರ ಮನೆಯವರಿಗೂ ಸಮಸ್ಯೆಯಾಗುತ್ತದೆ. ನಿದ್ರೆಯ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಗೊರಕೆಯನ್ನು ಹೋಗಲಾಡಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆರೋಗ್ಯಕರ ಜೀವನಶೈಲಿ, ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಸೇವನೆಯು ಅನೇಕ ಬದಲಾವಣೆಗಳನ್ನು ತರಬಹುದು. ಆದರೆ ಇದಷ್ಟೇ ಅಲ್ಲ, ಗೊರಕೆಯನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳನ್ನೂ ಅನುಸರಿಸಬಹುದು.

Advertisement

ನೀರು-ಪುದೀನಾ: ಗೊರಕೆಯನ್ನು ಕಡಿಮೆ ಮಾಡಲು, ಒಂದು ಲೋಟ ನೀರಿನಲ್ಲಿ ಕೆಲವು ಪುದೀನ ಎಲೆಗಳನ್ನು ಕುದಿಸಿ ಮತ್ತು ತಣ್ಣಗಾದ ನಂತರ ನೀರನ್ನು ಕುಡಿಯಿರಿ. ಹೀಗೆ ಮಾಡುವುದರಿಂದ ಸಾಕಷ್ಟು ಉಪಶಮನ ಪಡೆಯಬಹುದು. ಹೆಚ್ಚಿನ ಜನರು ಈ ಪರಿಹಾರವನ್ನು ಅನುಸರಿಸುವ ಮೂಲಕ ಪರಿಹಾರವನ್ನು ಪಡೆಯುತ್ತಾರೆ.

ದಾಲ್ಚಿನ್ನಿ ಪುಡಿ: ದಾಲ್ಚಿನ್ನಿ ಪುಡಿ ಕೂಡ ಗೊರಕೆಗೆ ಅತ್ಯುತ್ತಮ ಔಷಧವಾಗಿದೆ. ಇದಕ್ಕಾಗಿ ಒಂದು ಲೋಟ ಬೆಚ್ಚಗಿನ ನೀರನ್ನು ಒಂದು ಚಮಚ ದಾಲ್ಚಿನ್ನಿ ಪುಡಿಯೊಂದಿಗೆ ಬೆರೆಸಿ ಕುಡಿಯಿರಿ. ಇದರ ಪರಿಣಾಮ ನಿದ್ರೆಯ ಸಮಯದಲ್ಲಿ ಗೊರಕೆಯನ್ನು ತಡೆಯುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿ ಕೂಡ ಈ ಸಮಸ್ಯೆಯನ್ನು ಕಡಿಮೆ ಮಾಡಲು ತುಂಬಾ ಸಹಕಾರಿ. ಅದಕ್ಕಾಗಿ ರಾತ್ರಿ ಮಲಗುವ ಮುನ್ನ ಒಂದು ಎಸಳು ಬೆಳ್ಳುಳ್ಳಿಯನ್ನು ಹುರಿದು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ. ಆದರೆ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ.. ಬೆಳ್ಳುಳ್ಳಿ ನೈಸರ್ಗಿಕವಾಗಿ ಉಷ್ಣ ಗುಣಗಳನ್ನು ಹೊಂದಿದೆ. ಹಾಗಾಗಿ ಬಿಸಿ ವಾತಾವರಣದಲ್ಲಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿಯನ್ನು ತಿನ್ನಬೇಡಿ. ಅಲ್ಲದೆ, ಬಿಸಿ ಪದಾರ್ಥಗಳಿಗೆ ಅಲರ್ಜಿ ಇರುವವರು ಇದನ್ನು ತೆಗೆದುಕೊಳ್ಳಬೇಡಿ.

ಆಲಿವ್ ಎಣ್ಣೆ: ಆಲಿವ್ ಎಣ್ಣೆಯನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಗೊರಕೆಯ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿಯೂ ಈ ಎಣ್ಣೆ ಉಪಯುಕ್ತವಾಗಿದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಕೆಲವು ಹನಿ ಆಲಿವ್ ಎಣ್ಣೆಯನ್ನು ಮೂಗಿನಲ್ಲಿ ಸ್ವಲ್ಪ ಬಿಟ್ಟುಕೊಳ್ಳಿ.

ದೇಸಿ ತುಪ್ಪ: ಗೊರಕೆಯ ಸಮಸ್ಯೆಯನ್ನು ಕಡಿಮೆ ಮಾಡಲು ದೇಸಿ ತುಪ್ಪವನ್ನು ಸಹ ಬಳಸಬಹುದು. ಇದಕ್ಕಾಗಿ ದೇಸಿ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಒಂದು ಹನಿ ತುಪ್ಪವನ್ನು ಹೊಕ್ಕಳಿಗೆ ಹಾಕಿ. ಆದರೆ ತುಪ್ಪ ತುಂಬಾ ಬಿಸಿಯಾಗಿರಬಾರದು ಎಂಬುದು ನೆನಪಿಡಿ.

 

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ಇದು ಕೇವಲ ಪ್ರಾಥಮಿಕ ಮಾಹಿತಿಯಾಗಿದ್ದು, ಇಲ್ಲಿ ಒದಗಿಸಲಾದ ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Advertisement
Tags :
bengaluruchitradurgaproblemSimple tipsSnoreSnore Problemsolutionsuddionesuddione newssufferingಆರೋಗ್ಯ Healthಗೊರಕೆಚಿತ್ರದುರ್ಗಬೆಂಗಳೂರುಸಮಸ್ಯೆಸಲಹೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article