ಥೈರಾಯ್ಡ್ ಇರುವವರು.. ಕಡಿಮೆ ತೂಕ ಇರುವವರು ಹೂಕೋಸು ತಿನ್ನಬೇಡಿ..!
ಕೆಲವೊಂದು ಆಹಾರ ಪದಾರ್ಥಗಳನ್ನು ಕೆಲವೊಬ್ಬರು ತಿನ್ನಬಾರದು. ಆ ಪದಾರ್ಥಗಳಿಂದ ಅನಾರೋಗ್ಯ ಹೆಚ್ಚಾವುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಕೋಲ್ಡ್ ದೇಹ ಹೊಂದಿರುವವರು ಕೋಲ್ಡ್ ಪದಾರ್ಥಗಳಿಂದ ದೂರವೇ ಉಳಿಯಬೇಕಾಗುತ್ತದೆ. ಕೆಲವೊಮ್ಮೆ ನಾಲಿಗೆಯ ರುಚಿಯಿಂದ ದೇಹದ ವಾತಾವರಣಕ್ಕೆ ಮೀರಿಯೂ ತಿಂದು ಬಿಡುತ್ತೇವೆ. ಅದೇ ನಮ್ಮ ದೇಹಕ್ಕೆ ಒಂದಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಈ ರೀತಿಯ ಆಹಾರ ಕ್ರಮದಲ್ಲಿ ಹೂ ಕೋಸ್ ಕೂಡ ಒಂದಾಗಿದೆ. ಹೂ ಕೋಸು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅದರಿಂದ ಮಾಡಿರುವ ಮಂಚೂರಿಯನ್, ಅದರಿಂದ ಮಾಡುವ ಕುರ್ಮಾ, ಅದರಿಂದ ಮಾಡುವ ಸಾಗು ಅಬ್ಬಬ್ಬಾ ಒಂದಾ ಎರಡಾ, ಹಲವು ಬಗೆಯ ಆಹಾರ ಪದಾರ್ಥಗಳನ್ನು ಹೂಕೋಸಿನಿಂದ ಮಾಡಬಹುದು. ಜೊತೆಗೆ ಅಷ್ಟೇ ರುಚಿಕಟ್ಟಾಗಿರುತ್ತದೆ. ಹೀಗಾಗಿ ನಾಲಿಗೆ ಅದನ್ನು ಕರೆಯುತ್ತಲೆ ಇರುತ್ತದೆ.
ಆದರೆ ಇದರಲ್ಲಿ ರಾಫಿನೋಸ್ ಎಂಬ ಹಾನಿಕಾರಕ ವಸ್ತುವನ್ನು ಅಡಗಿಸಿಕೊಂಡಿರುತ್ತದೆ. ಇದು ಒಂದು ರೀತಿಯ ಕಾಬ್ರೋಹೈಡ್ರೇಡ್ ಆಗಿರುತ್ತದೆ. ಈ ರೀತಿಯ ತರಕಾರಿಯನ್ನು ಪ್ರತಿ ಬಾರಿ ಸೇವಿಸಿದಾಗ ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಹಾದು ಹೋಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಕೂಡ ತುಂಬಬಹುದಾಗಿದೆ.
ಇನ್ನು ಥೈರಾಯ್ಡ್ ಇರುವಂತವರು ಈ ಹೂಕೋಸನ್ನು ಹೆಚ್ಚಿಗೆ ತಿನ್ನ ಬಾರದು. ಈ ಹೂಕೋಸಿನ ಸೇವನೆ T-3 & T-4 ಹೆಚ್ಚು ಮಾಡುವ ಸಾಧ್ಯತೆ ಇದೆ ಹೀಗಾಗಿ ಹೂಕೋಸಿನಿಂದ ದೂರವಿರಬೇಕಾಗುತ್ತದೆ.
ಹಾಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವವರು ಹೂಕೋಸು ತಿನ್ನದೆ ಇರುವುದೇ ಉತ್ತಮ. ಇದನ್ನು ತಿನ್ನುವುದರಿಂದ ಹಸಿವನ್ನು ತಡೆದು ತೂಕ ಹೆಚ್ಚಾಗುವಂತೆ ಮಾಡುತ್ತದೆ. ಹೀಗಾಗಿ ತೂಕ ಇಳಿಕೆ ಮಾಡಬೇಕು ಎಂದುಕೊಂಡವರಿಗೆ ಈ ಆಹಾರ ಅಷ್ಟೇನು ಸೂಕ್ತವಲ್ಲ.