ನೀವೂ ಕಾಫಿ ಪ್ರಿಯರಾ..? ಒಮ್ಮೆ ಸಕ್ಕರೆ ಇಲ್ಲದೆ ಕಾಫಿ ಕುಡಿದು ನೋಡಿ ಏನೆಲ್ಲಾ ಲಾಭ ಸಿಗುತ್ತೆ ಗೊತ್ತಾಗುತ್ತೆ..!
ಸುದ್ದಿಒನ್ | ಕಾಫಿ-ಟೀ ಕುಡಿಯದೆ ಇರುವವರು ಈ ಪ್ರಪಂಚದಲ್ಲಿ ಸಿಗುವುದು ಬಹಳ ವಿರಳ. ದಿನಕ್ಕೆ ಹತ್ತನ್ನೆರಡು ಟೈಮ್ ಕುಡಿಯುವವರೂ ಇದ್ದಾರೆ. ಎರಡು ಟೈಮ್ ಆದ್ರೂ ಕುಡಿಯಲೇಬೇಕು ಎನ್ನುವವರು ಇದ್ದಾರೆ. ಇನ್ನು ಕೆಲವರಿಗೆ ಟೀ-ಕಾಫಿ ಕುಡಿಯದೆ ಕೆಲಸ ಮಾಡಲು ತಲೆಯೇ ಓಡುವುದಿಲ್ಲ. ಹೀಗಿರುವಾಗ ಆರೋಗ್ಯದ ಕಡೆಗೂ ಗಮನ ಕೊಡಬೇಕಾದ ಅನಿವಾರ್ಯತೆ ಇರುತ್ತೆ. ಟೀ-ಕಾಫಿಯೇ ಡೇಂಜರ್ ಅಂತಾರೆ. ಅದರ ಜೊತೆಗೆ ಸಕ್ಕರೆ ಬೇರೆ ಮಿಕ್ಸ್ ಆಗುತ್ತೆ. ನೀವೂ ಟೀ ಕಾಫಿ ಕುಡಿಯಲೇಬೇಕೆಂದುಕೊಂಡರೆ ಸಕ್ಕರೆ ಇಲ್ಲದೆ ಅಭ್ಯಾಸ ಮಾಡಿಕೊಂಡು ನೋಡಿ ಎಷ್ಟೆಲ್ಲಾ ಲಾಭಗಳು ಇರುತ್ತವೆ ಎಂಬುದು ನಿಮಗೆ ಗೊತ್ತಾಗುತ್ತೆ.
* ಕಾಫಿಯನ್ನು ಅಧಿಕವಾಗಿ ಕುಡಿಯವುದು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ ಕೊಂಚ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಕ್ಕರೆ ಇಲ್ಲದೆ ಟೀ - ಕಾಫಿ ಕುಡಿಯಿರಿ.
* ಸಕ್ಕರೆ ಇಲ್ಲದೆ ಟೀ -ಕಾಫಿ ಕುಡಿಯುವುದರಿಂದ ಮಧುಮೇಹವನ್ನು ಕಂಟ್ರೋಲ್ ನಲ್ಲಿ ಇಡಬಹುದಾಗಿದೆ. ಶೇಕಡ 8ರಷ್ಟು ಅಪಾಯವನ್ನು ತಪ್ಪಿಸುತ್ತದೆ.
* ಹೃದಯ ರಕ್ತನಾಳ ಕಾಯಿಲೆಯಿಂದ ಪ್ರಪಂಚದಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಸಕ್ಕರೆ ಇಲ್ಲದೆ ಕಾಫಿ ಕುಡಿದಾಗ ಕೆಫಿನ್ ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ.
* ಕೆಲವೊಬ್ಬರಿಗೆ ಕಾಫಿ ಕುಡಿದಾಗ ನೆನಪಿನ ಶಕ್ತಿ ಮರುಕಳುಹಿಸುತ್ತೆ, ಉತ್ಸಾಹ ಚಿಮ್ಮುತ್ತದೆ. ಕೆಲವೊಂದು ಅಧ್ಯಯನವೂ ಅದನ್ನೇ ಹೇಳಿದೆ.
* ನಿಮ್ಮ ತೂಕ ನಷ್ಟ ಆಹಾರದಲ್ಲಿ ಸಕ್ಕರೆ ಅಥವಾ ಹಾಲು ಇಲ್ಲದ ಕಾಫಿಯನ್ನು ಸೇವಿಸಬೇಕು. ಜರ್ನಲ್ ಫುಡ್ ಸೈನ್ಸ್ ಅಂಡ್ ನ್ಯೂಟ್ರಿಷನ್ ರಿವ್ಯೂಸ್‌ನಲ್ಲಿ ಪ್ರಕಟವಾದ ಅಧ್ಯಯನವು ಕೆಫೀನ್ ಸೇವನೆಯು ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಮತ್ತು ಒಟ್ಟು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ. ಕೆಫೀನ್ ಸೇವನೆಯು ಥರ್ಮೋಜೆನೆಸಿಸ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)