Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹೆಸರು ಬೇಳೆ ನಮ್ಮ ದೇಹಕ್ಕೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ..?

07:26 AM Oct 03, 2021 IST | suddionenews
Advertisement

ಅಡುಗೆ ಮನೆ ಪದಾರ್ಥವೇ ನಮ್ಮ ದೇಹಕ್ಕೆ ಔಷಧಿ, ಮದ್ದು. ಅದರಲ್ಲಿ ಹೆಸರು ಬೇಳೆ ಕೂಡ ಒಂದು. ಯಾವಾಗಲಾದರೊಮ್ಮೆ ಕೋಸಂಬರಿ‌ ಮಾಡಿಕೊಂಡು ತಿನ್ನುವ ಈ ಬೇಳೆಯಲ್ಲಿ ಅನೇಕ ಉಪಯೋಗಗಳಿವೆ.

Advertisement

ಅತೀ ಉಷ್ಣ ವಾಗಿದ್ದರೆ, ಉಷ್ಣದಿಂದ ಬಾಯಿ ಹುಣ್ಣಾಗಿದ್ದರೆ ಹೆಸರುಬೇಳೆ ಪಾಯಸ ಮಾಡಿ ತಿಂದರೆ ಉಷ್ಣ ಕಮ್ಮಿಯಾಗುತ್ತದೆ.

ವಾರಕ್ಕೆ ಒಮ್ಮೆಯಾದರೂ ಹೆಸರುಬೇಳೆಯನ್ನು ಹೆಚ್ಚು ಉಪಯೋಗಿಸುವುದು ಒಳ್ಳೆಯದು. ಹೆಸರುಬೇಳೆ ಜೊತೆಗೆ ಸ್ವಲ್ಪ ಮೆಂತ್ಯ, ಸ್ವಲ್ಪ ನೆಲ್ಲಿ ಚೆಟ್ಟು ಹಾಕಿ ರಾತ್ರಿ ನೆನೆಸಿ, ಬೆಳಗ್ಗೆ ನುಣುಪಾಗಿ ಅರೆದು ತಲೆಗೆ ಹಚ್ಚಿ ಸ್ನಾನ ಮಾಡಿದರೂ ಕೂಡ ತಂಪಾಗುತ್ತದೆ.

Advertisement

ಹೆಸರುಬೇಳೆ ಮತ್ತು ಕಡಲೆ ಬೇಳೆಯನ್ನು ಪುಡಿ ಮಾಡಿಸಿ, ಆ ಹಿಟ್ಟಿನಿಂದ ಮಕ್ಕಳಿಗೆ ಸ್ನಾನ ಮಾಡಿಸಿದರೆ, ಚಳಿಗಾಲದಲ್ಲಿ ಚರ್ಮ ಬಿರುಕು ಬಿಡುವುದನ್ನು ತಪ್ಪಿಸಬಹುದು. ಅದಕ್ಕೆ ಸ್ವಲ್ಪ ಮೆಂತ್ಯವನ್ನು ಕೂಡ ಪುಡಿ ಮಾಡಿಸಬಹುದು.

Advertisement
Tags :
featuredhealth tipshealth tips kannadakannada health tipsmoong dalಆರೋಗ್ಯ ಮಾಹಿತಿಆರೋಗ್ಯ ಸಲಹೆ
Advertisement
Next Article