ಮಕ್ಕಳಲ್ಲೇ ಮದ್ರಾಸ್ ಐ ಹೆಚ್ಚಾಗ್ತಾ ಇದೆ : ಎಚ್ಚರ ಪೋಷಕರೇ.. ಕೈಗಳ ಸ್ವಚ್ಛತೆ ಕಾಪಾಡಿ
ಸದ್ಯ ಈಗ ಎಲ್ಲೆಡೆ ಮದ್ರಾಸ್ ಐ ಸಮಸ್ಯೆಯೇ ಕಾಡುತ್ತಿದೆ. ಅದರಲ್ಲೂ ಮಕ್ಕಳನ್ನೇ ಟಾರ್ಗೆಟ್ ಮಾಡ್ತಾ ಇದೆ. ಕಣ್ಣಿನಲ್ಲಿ ಸಾಮಾನ್ಯವಾಗಿ ಕಣ್ಣು ಕೆಂಪಾಗಿ, ಬಿಳಿ ಪದರಗಳು ಕಾಣಿಸಿಕೊಂಡು, ತುರಿಕೆಯೊಂದಿಗೆ ನೀರು ಸುರಿಯುವುದನ್ನು ಮದ್ರಾಸ್ ಐ ಆಗಿದೆ ಎಂಬುದನ್ನು ಸೂಚಿಸುತ್ತಿದೆ. ಮಿಂಟೋ ಆಸ್ಪತ್ರೆಗೆ ಪ್ರತಿನಿತ್ಯ 400 ರಿಂದ 600 ಹೊರರೋಗಿಗಳು ಭೇಟಿ ನೀಡುತ್ತಿದ್ದಾರೆ. ಇದರಲ್ಲಿ 90 ರಿಂದ 100 ರೋಗಿಗಳಲ್ಲಿ ಈ ಸಮಸ್ಯೆ ದೃಢವಾಗಿದೆ. ಇನ್ನು ನಾರಾಯಣ ನೇತ್ರಾಲಯದಲ್ಲಿ ಪ್ರತಿನಿತ್ಯ ಸರಾಸರಿ 20 ಪ್ರಕರಣಗಳು ವರದಿಯಾಗುತ್ತಿದೆ. ಹೀಗಾಗಿ, ಜನ ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕಿದೆ.
ಮದ್ರಾಸ್ ಐ ಬ್ಯಾಕ್ಟೀರಿಯಾ ಅಥವಾ ವೈರಸ್‌ನಿಂದ ಉಂಟಾಗುತ್ತದೆ. ಇದು ಕಂಡು ಬಂದರೆ ಮುಂದೆ ಇರುವವರಿಗೂ ಬಹಳ ವೇಗವಾಗಿ ಹರಡುತ್ತದೆ. ಇದು ಕಣ್ಣಿನಿಂದ ಮೂಲಕ ಹರಡುತ್ತದೆ. ಈ ವೈರಸ್ ಸಂಪರ್ಕಕ್ಕೆ ಬರುವ ಇನ್ನೊಬ್ಬ ವ್ಯಕ್ತಿ ಬೇಗ ಹರಡುವಂತ ಸಾಂಕ್ರಾಮಿಕ ವೈರಸ್ ಆಗಿದೆ.
ಆದಷ್ಟು ಇದರಿಂದ ಮುಕ್ತವಾಗುವುದಕ್ಕೆ ಸ್ವಚ್ಚತೆ ತುಂಬಾ ಮುಖ್ಯವಾಗುತ್ತದೆ. ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ತೊಳೆಯಿರಿ, ನಿಮ್ಮ ಕಣ್ಣುಗಳನ್ನು ಸ್ಪರ್ಶಿಸಿದ ನಂತರ, ಕಾಂಜಂಕ್ಟಿವಿಟಿಸ್ ಹೊಂದಿರುವ ಯಾರೊಂದಿಗಾದರೂ ಸಂಪರ್ಕಕ್ಕೆ ಬಂದ ನಂತರ ಕೈ ಸ್ವಚ್ಛವಾಗಿರಲಿ. ಜೊತೆಗೆ ನಿಮ್ಮ ಕಣ್ಣುಗಳನ್ನು ಉಜ್ಜಲು ಪ್ರಯತ್ನಿಸಬೇಡಿ. ಏಕೆಂದರೆ ಇದು ನಿಮ್ಮ ಕೈಗಳಿಂದ ಸೂಕ್ಷ್ಮಜೀವಿಗಳನ್ನು ನಿಮ್ಮ ಕಣ್ಣುಗಳಿಗೆ ವರ್ಗಾಯಿಸುತ್ತದೆ ಮತ್ತು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.