ಮಹಿಳೆಯರೇ ಹೊಳೆಯುವ ಕೂದಲು ಬೇಕೆಂದರೆ ಬಾಳೆ ಹಣ್ಣು ತಿನ್ನಿ..!
ಮಹಿಳೆಯರಿಗಾಗಲಿ, ಪುರಿಷರಿಗಾಗಲಿ ಕೂದಲಿನ ದಟ್ಟತೆ, ಆರೋಗ್ಯ ಬಹಳ ಮುಖ್ಯ. ಸೌಂದರ್ಯವನ್ನು ಹೆಚ್ಚಿನದಾಗಿ ಕಾಣುವಂತೆ ಮಾಡುವುದೇ ಕೂದಲು. ಆದರೆ ಇತ್ತಿಚಿನ ದಿನಗಳಲ್ಲಿ ಒತ್ತಡ, ನೀರಿನ ವ್ಯತ್ಯಾಸ, ಸರಿಯಾದ ಹಾರೈಕೆ ಇಲ್ಲದೆ ಇರುವುದುಕೂದಲಿನ ಅನಾರೋಗ್ಯಕ್ಕೆ ಕಾರಣವಾಗಿದೆ. ಹೊಳೆಯುವ ಕೂದಲು ಬೇಕೆಂದರೆ ತುಂಬಾ ಸಿಂಪಲ್ ಬಾಳೆಹಣ್ಣು ಬಳಕೆ ಮಾಡುವುದು.
ಊಟ ಆದ ಮೇಲೆ ಬಾಳೆ ಹಣ್ಣು ತಿನ್ನುವ ಅಭ್ಯಾಸ ಸಾಕಷ್ಟು ಜನರಿಗೆ ಇರುತ್ತದೆ. ಪಳ ಪಳ ಅಂತ ಹೊಳೆಯುವ ಕೂದಲು ಬೇಕು ಎಂದು ಬಯಸುವವರು ಬಾಳೆಹಣ್ಣನ್ನು ತಿನ್ನುವುದು ಉತ್ತಮ. ಯಾಕಂದ್ರೆ ಇದರಲ್ಲಿ ಎ, ಸಿ, ಬಿಯಂತಹ ವಿಟಮಿನ್ ದಟ್ಟವಾಗಿದೆ. ಇದು ಕೂದಲನ್ನು ಬಲಪಡಿಸುವುದಲ್ಲದೆ ಆರೋಗ್ಯಕರ ನೆತ್ತಿಯನ್ನು ಕಾಪಾಡುತ್ತದೆ. ಹೀಗಾಗಿ ಕೂದಲು ಚೆನ್ನಾಗಿ ಬರಬೇಕೆಂದರೆ ಬಾಳೆಹಣ್ಣನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.
ಅವಕಾಡೊ ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್ ಮಾಡಿ ಹಾಕಿಕೊಳ್ಳುವುದರಿಂದಾನೂ ಕೂದಲು ಚೆನ್ನಾಗಿ ಬರುತ್ತದೆ. ಮಾಗಿದ ಬಾಳೆಹಣ್ಣು ಮತ್ತು ಆವಕಾಡೊವನ್ನು ಸಮಪ್ರಮಾಣದಲ್ಲಿ ಮ್ಯಾಶ್ ಮಾಡಿ ಮತ್ತು ಅದನ್ನು ನೆತ್ತಿಯ ಮೇಲೆ ಹಚ್ಚಿ. ಅದನ್ನು 20 ರಿಂದ 30 ನಿಮಿಷಗಳ ಕಾಲ ಬಿಟ್ಟು ನಂತರ ಕೂದಲು ತೊಳೆಯಿರಿ. ಇದನ್ನು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಹಚ್ಚಿಕೊಳ್ಳಿ.
ಅದರಂತೆ ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು 2 ಚಮಚ ತೆಂಗಿನೆಣ್ಣೆಯೊಂದಿಗೆ ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. ಇದು ಸುಮಾರು 30 ರಿಂದ 40 ನಿಮಿಷಗಳ ಕಾಲ ಹಾಗೆಯೇ ಇರಲಿ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಈ ಮೂಲಕವೂ ಕೂದಲಿನ ಆರೋಗ್ಯವನ್ನು ಕಾಪಾಡಬಹುದಾಗಿದೆ. ಹೊಳೆಯುವ, ಆರೋಗ್ಯಕರ ಕೂದಲಿಗಾಗಿ ಅದನ್ನು ಕಾಪಾಡುವುದು ಬಹಳ ಮುಖ್ಯ.
(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)