Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಿಡ್ನಿ ಸ್ಟೋನ್ ಗೆ ಒಂದಷ್ಟು‌ ಮನೆ ಮದ್ದು ಇಲ್ಲಿವೆ..!

06:30 AM Nov 19, 2021 IST | suddionenews
Advertisement

ಇತ್ತೀಚೆಗೆ ಕಿಡ್ನಿ ಸ್ಟೋನ್ ಅನ್ನೋದು ಸಹಜವಾಗಿ ಬಿಟ್ಟಿದೆ. ಕೆಲಸದ ಒತ್ತಡ, ಸಮಯದ ಅಭಾವ ಹೀಗೆ ನಾನಾ ಕಾರಣಗಳಿಂದ ನಮ್ಮ ದೇಹದಲ್ಲಿ ಅನಾರೋಗ್ಯ ಕಾಡೋದಕ್ಕೆ ಶುರುವಾಗುತ್ತೆ. ಅದರಲ್ಲಿ ಈ ಕಿಡ್ನಿ ಸ್ಟೋನ್ ಕೂಡ ಒಂದು. ಅದಕ್ಕೆ ಒಮ್ಮೆ ವೈದ್ಯರನ್ನ ಸಂಪರ್ಕಿಸುವುದು ಉತ್ತಮ. ಅದರ ಜೊತೆಗೆ ಒಂದಿಷ್ಟು ಮನೆ ಮದ್ದು ಇಲ್ಲಿವೆ.

Advertisement

* 5 ಕಾಡು ಬಸಳೆ ಹಾಗೂ ಜೀರಿಗೆ 1 ಚಮಚ ಜ್ಯೂಸ್ ಮಾಡಿ 7 ದಿವಸ ಕುಡಿಯಿರಿ.

* ಕಿಡ್ನಿ ಸ್ಟೋನ್ ಆಗಿದ್ದರೆ ಕಾಡು ಬಸಳೆಸೊಪ್ಪು, ಮೂಲಂಗಿ, ಕಪ್ಪುಬೆಲ್ಲ, ಬಾಳೆದಿಂಡಿನರಸ ಇಷ್ಟನ್ನೂ ಸೇರಿಸಿ ಜ್ಯೂಸ್ ಮಾಡಿ ಮೂರು ದಿನ ಕುಡಿಯಿರಿ ಸಂಪೂರ್ಣ ಕರಗಿಸುತ್ತೆ.

Advertisement

* ಬಾಳೆ ದಿಂಡಿನ ರಸ, ದಿಂಡಿನ ಪಲ್ಯ, ಕ್ಯಾಸಿವೆ ದಂಟಿನ ಮೋಸಪ್ಪು, ಸೂರ್ಯನ ಗೆಡ್ಡೆ ಚಂಟ್ನಿ ಉಪಯೋಗಿಸಿ ಒಂದು ವಾರ ಮೊದಲು ಹಾಸ್ಪಿಟಲ್ ಹೋಗಿ ನೋವಿಗೆ ಚುಚ್ಚು ಮದ್ದು ಮಾಡಿಸಿ ನಂತರ ಈ ಪ್ರಯೋಗ ಮಾಡಿ.

* ಕೊತ್ತಂಬರಿ ಸೊಪ್ಪಿನ ಜೂಸ್ ದಿನ 1 ಲೀಟರ್ ಕುಡಿಯಿರಿ.

* ನೆಲ ನೆಲ್ಲಿ ಮತ್ತು ನೆಗ್ಗಿನ ಮುಳ್ಳು ಕಷಾಯ ಮಾಡಿ ದಿನಕ್ಕೆ ಎರಡು ಬಾರಿ ಸೇವಿಸಿ

* ಹುರುಳಿ ಕಟ್ಟು, ಪಾಲಕ್, ಬಸಳೆ,ಯೇಥೇಚ್ಛವಾಗಿ ಸೇವಿಸಿ, ಎಳನೀರು, ಬಾರ್ಲಿ ನೀರು ಕುಡಿಯಿರಿ. ಶೀತ ಇದ್ದವರು ವೈದ್ಯರ ಸಲಹೆಯನ್ನು ಪಡೆಯಿರಿ. ಹಸಿ ಈರುಳ್ಳಿ, ಟೋಮೇಟೊ ದಯವಿಟ್ಟು ಹಸಿಯಾಗಿ ತಿನ್ನಬೇಡಿ. ಬೆಚ್ಚಗಿನ ನೀರು ಧಾರಾಳವಾಗಿ ಕುಡಿಯಿರಿ.

* ಮೂಲಂಗಿ ಹಸಿದು ತಿನ್ನಿ, ಹೆಚ್ಚು ನೀರು ಕುಡಿಯಿರಿ, ಎಳ ನೀರು ಕುಡಿಯಿರಿ, ಮಜ್ಜಿಗೆ ಜಾಸ್ತಿ ಕುಡಿಯಿರಿ.

Advertisement
Tags :
featuredhealth tipshealth tips kannadakannada health tipsKidney stonesಆರೋಗ್ಯ ಮಾಹಿತಿಆರೋಗ್ಯ ಸಲಹೆ
Advertisement
Next Article