For the best experience, open
https://m.suddione.com
on your mobile browser.
Advertisement

ಸಿಕ್ಕಾಪಟ್ಟೆ ಮೈಗ್ರೇ‌ನ್ ಕಾಡ್ತಾ ಇದ್ಯಾ..? ಹಾಗಾದ್ರೆ ಹೀಗೆ ಮಾಡಿ..

07:01 AM Jul 20, 2023 IST | suddionenews
ಸಿಕ್ಕಾಪಟ್ಟೆ ಮೈಗ್ರೇ‌ನ್ ಕಾಡ್ತಾ ಇದ್ಯಾ    ಹಾಗಾದ್ರೆ ಹೀಗೆ ಮಾಡಿ
Advertisement

Advertisement

ಇತ್ತಿಚಿನ ದಿನಗಳಲ್ಲಿ ಕೆಲವೊಂದಿಷ್ಟು ಕಾಯಿಲೆಗಳು ಕಾಮನ್ ಆಗಿ ಹೋಗಿದೆ. ಜೀವನ ಶೈಲಿ ಅಂತದ್ದು. ಹೆಚ್ಚಿನ ಸಮಯ ನಿದ್ದೆ ಮಾಡದೆ ಇರುವುದು, ಕೆಲಸದ ಒತ್ತಡ ಹೀಗೆ ನಾನಾ ಕಾರಣಗಳಿಂದ ಮೈಗ್ರೇನ್ ಬರುತ್ತದೆ. ಮೈಗ್ರೇನ್ ಕಾಡುವುದಕ್ಕೆ ಶುರು ಮಾಡಿದರೆ, ಆ ತಲೆನೋವನ್ನು ಸಹಿಸಿಕೊಳ್ಳುವ ಶಕ್ತಿ ಹೆಚ್ಚಾಗಿರಬೇಕಾಗುತ್ತದೆ. ಅದಕ್ಕೂ ಮುನ್ನ ತಲೆ ನೋವು ಬರದಂತೆ ನೋಡಿಕೊಳ್ಳಲು ಒಂದಷ್ಟು ಟಿಪ್ಸ್ ಇಲ್ಲಿದೆ.

Advertisement

* ಮುಖ್ಯವಾಗಿ ಜೀವನದ ಒತ್ತಡದಿಂದಾಗಿ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿದಿನ ಆದಷ್ಟು 20 ನಿಮಿಷವಾದರೂ ಯೋಗಭ್ಯಾಸ ಮಾಡಿ. ಬಳಿಕ ಮೈಗ್ರೇನ್ ಕಡಿಮೆಯಾಗುತ್ತ ಬರುತ್ತದೆ.

* ಕೆಲವೊಬ್ಬರಿಗೆ ಹವಮಾನ ಬದಲಾವಣೆಯಿಂದಾಗಿಯೂ ಮೈಗ್ರೇನ್ ಸಮಸ್ಯೆ ಕಾಡುತ್ತದೆ. ಹೀಗಾಗಿ ಹೊರಗಡೆ ಓಡಾಡುವುದನ್ನು ಕಡಿಮೆ ಮಾಡಿ

* ಮೊದಲನೆಯದಾಗಿ ಒತ್ತಡದಿಂದಾನೇ ನಮ್ಮ ದೇಹಕ್ಕೆ ಹಲವು ಕಾಯಿಲೆಗಳು ಅಂಟುವುದು. ಆದಷ್ಟು ಒತ್ತಡದಿಂದ ದೂರವಿದ್ದು, ಜೀವನವನ್ನು ಖುಷಿಯಾಗಿ ಜೀವಿಸಿ. ಆಗ ಮೈಗ್ರೇನ್ ತನ್ನಿಂತಾನೇ ದೂರಾಗುತ್ತದೆ.

* ಪ್ರತಿ ದಿನ ಉತ್ತಮವಾದ ನಿದ್ದೆ ಮಾಡಿ. ಕಣ್ಣಿಗೆ, ದೇಹಕ್ಕೆ ಆರಾಮು ನೀಡಿದರೆ ಮೈಗ್ರೇನ್ ಸಮಸ್ಯೆಗೊಂದು ಪರಿಹಾರ ಸಿಗುತ್ತದೆ.

Tags :
Advertisement