Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಜೀರ್ಣ : ಲಿವರ್ ಕ್ಯಾನ್ಸರ್ ಗೆ ಕಾರಣವಾಗಬಹುದು : ರೋಗ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ...!

05:46 AM Jul 21, 2023 IST | suddionenews
Advertisement

 

Advertisement

ಕೆಲವೊಮ್ಮೆ ದೇಹದಲ್ಲಾಗುವ ಬದಲಾವಣೆಗಳನ್ನು ನಾವೂ ನಿರ್ಲಕ್ಷ್ಯ ಮಾಡ್ತೇವೆ. ಆದ್ರೆ ಆ ನಿರ್ಲಕ್ಷ್ಯ ಮತ್ತೆ ಇನ್ಯಾವುದೋ ಕಾಯಿಲೆಗೆ ತಿರುಗಿಕೊಳ್ಳುತ್ತೆ. ಹೀಗಾಗಿ ರೋಗ ಲಕ್ಷಣಗಳನ್ನು ಮೊದಲೇ ಅರಿತುಕೊಳ್ಳುವುದು ಉತ್ತಮ. ಕೆಲವೊಂದು ಸಲ ಗ್ಯಾಸ್ಟ್ರಿಕ್‌ ಅಂತ ನೆಗ್ಲೆಕ್ಟ್ ಮಾಡುವುದರಿಂದ ದೇಹದ ಮೇಲೆ ಇನ್ಯಾವುದೋ ಪರಿಣಾಮ ಬೀರುತ್ತದೆ.

* ಮೊದಲಿಗೆ ನಾವೆಲ್ಲ ತಿಳಿದುಕೊಳ್ಳಬೇಕಾಗಿರುವುದು ನಾವೂ ಯಾವುದನ್ನು ನಿರ್ಲಕ್ಷ್ಯ ಮಾಡಬಾರದು. ಅದರಲ್ಲೂ ಊಟವಾದ ಮೇಲೆ ಜೀರ್ಣವಾಗದೆ ಇರುವುದನ್ನು ನಿರ್ಲಕ್ಷ್ಯ ಮಾಡಬಾರದು. ಜೀರ್ಣಶಕ್ತಿ ಆಗದೆ ಇದ್ದಲ್ಲಿ ಬೇರೆ ಬೇರೆ ಕಾಯಿಲೆಗಳು ಕಾಣಿಸಿಕೊಳ್ಳುವುದಕ್ಕೆ ಆರಂಭಿಸುತ್ತದೆ. ಲಿವರ್ ಕ್ಯಾನ್ಸರ್ ಗೂ ಕಾರಣವಾಗುತ್ತದೆ.

Advertisement

* ಲಿವರ್ ಕ್ಯಾನ್ಸರ್ ನ ರೋಗ ಲಕ್ಷಣಗಳು ಅಜೀರ್ಣತೆಯ ಸಮಸ್ಯೆ ಕಂಡಂತೆ ಕಾಣುತ್ತವೆ. ಹೀಗಾಗಿ ನಿರ್ಲಕ್ಷ್ಯ ಮಾಡುವುದು ಬೇಡ. ಆಹಾರ ಸೇವನೆ ಮಾಡಿದ ಕೂಡಲೇ ವಾಕರಿಕೆ ಬರುವುದು, ವಾಂತಿಯಾಗುವುದು ಈ ರೋಗ ಲಕ್ಷಣವಾಗಿರುತ್ತದೆ. ಈ ರೀತಿಯೆಲ್ಲಾ ಆಗುತ್ತಿದ್ದರೆ ಮೊದಲು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ.

* ಇದ್ದಕ್ಕಿದ್ದಂತೆ ದೇಹದ ತೂಕ ಕಡಿಮೆಯಾಗುವುದು, ಹೊಟ್ಟೆ ಹಸಿವು ಇಲ್ಲದೇ ಇರುವುದು, ಲಿವರ್ ದೊಡ್ಡ ದಾಗುವುದು, ಹೊಟ್ಟೆಯ ಭಾಗದಲ್ಲಿ ನೋವು ಕಂಡುಬರುವುದು, ಜಾಂಡಿಸ್ ಸಮಸ್ಯೆ ಎದುರಾಗುವುದು, ಚರ್ಮದ ಭಾಗ ದಲ್ಲಿ ಕೆರೆತ ಕಾಣಿಸುವುದು ಇನ್ನಿತರ ರೋಗ ಲಕ್ಷಣಗಳನ್ನು ಕಾಣಬಹುದು.

Advertisement
Tags :
bengaluruCancerCausefeaturedIndigestionLiversuddionesymptomsಅಜೀರ್ಣಕಾರಣಕ್ಯಾನ್ಸರ್ಬೆಂಗಳೂರುರೋಗ ಲಕ್ಷಣಗಳುಲಿವರ್ಸುದ್ದಿಒನ್
Advertisement
Next Article