For the best experience, open
https://m.suddione.com
on your mobile browser.
Advertisement

ರಾತ್ರಿ ಪಾಳಯದಲ್ಲಿ ಕೆಲಸ ಮಾಡಿದ್ರೆ ಆಯಸ್ಸು ಕಡಿಮೆಯಾಗುತ್ತಾ ?

06:24 AM Aug 12, 2024 IST | suddionenews
ರಾತ್ರಿ ಪಾಳಯದಲ್ಲಿ ಕೆಲಸ ಮಾಡಿದ್ರೆ ಆಯಸ್ಸು ಕಡಿಮೆಯಾಗುತ್ತಾ
Advertisement

Advertisement
Advertisement

ಸುದ್ದಿಒನ್ : ಮನುಷ್ಯ ಕೆಲವು ವರ್ಷಗಳಿಂದ ಜೀವನಕ್ಕಿಂತ ಹೆಚ್ಚಾಗಿ ದುಡಿಮೆ ಕಡೆಗೆ ಒತ್ತು ಕೊಡುವುದನ್ನು ರೂಢಿಸಿಕೊಂಡಿದ್ದಾನೆ. ಅದರಿಂದ ಉಂಟಾಗುವ ಸಮಸ್ಯೆಗಳು ಒಂದೆರಡಲ್ಲ. ಒತ್ತಡದ ಜೀವನ ಶೈಲಿಯಿಂದ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಅದರಲ್ಲೂ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಅನೇಕರಿಗೆ ಆರೋಗ್ಯ ಸಮಸ್ಯೆಯ ಜೊತೆಗೆ ಆಯಸ್ಸು ಕಡಿಮೆಯಾಗುತ್ತಾ ಬರುತ್ತದೆ. ಆಯುರ್ವೇದದ ವೈದ್ಯರೇ ಈ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಅತಿಯಾದ ರಾತ್ರಿ ಪಾಳಯದ ಕೆಲಸ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ. ಹಾಗಾದ್ರೆ ಹೇಗೆಲ್ಲಾ ಆರೋಗ್ಯದ‌ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣಾ.

* ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರಿಗೆ ಡ್ರೈನೆಸ್ ಸಮಸ್ಯೆ ಕಾಡುತ್ತದೆ. ಇದರಿಂದ ದೇಹದ ಒಳಗಡೆ ಒಣಗುವುದು, ಹೃದಯದಲ್ಲಿ ಡ್ರೈ ಆಗುವುದು, ಮೂತ್ರಕೋಶದಲ್ಲಿ ಡ್ರೈ ಆಗುವುದು, ಜಠರದಲ್ಲಿ ಡ್ರೈನೆಸ್, ತಲೆಯಲ್ಲಿ ಡ್ರೈನೆಸ್ ಹೀಗೆ ದೇಹದ ಮೂಲೆ ಮೂಲೆಯಲ್ಲೂ ಡ್ರೈನೆಸ್ ಕಾಣಿಸುತ್ತದೆ.

Advertisement

* ಹೆಚ್ಚು ಜಾಗರಣೆ ಮಾಡುವುದು, ರಾತ್ರಿ ಪಾಳಯದಲ್ಲಿ ಕೆಲಸ ಮಾಡುವುದರಿಂದ ವಾತ ಜಾಸ್ತಿಯಾಗುತ್ತದೆ. ದೇಹದಲ್ಲಿ ಡ್ರೈನೆಸ್ ಜಾಸ್ತಿಯಾದಾಗ ದೇಹ ಬಲ ಕಳೆದುಕೊಳ್ಳುತ್ತದೆ. ಸುಸ್ತು ಜಾಸ್ತಿಯಾಗುತ್ತದೆ. ಯಾವುದೇ ಕೆಲಸ ಮಾಡುವುದಕ್ಕೂ ಚಟುವಟಿಕೆಯಿಂದ ಇರುವುದಕ್ಕೆ ಆಗುವುದಿಲ್ಲ. ಆಲಸ್ಯ ಜಾಸ್ತಿಯಾಗುತ್ತದೆ.

Advertisement

* ಚರ್ಮದ ಆರೋಗ್ಯ ಬಹಳ ಮುಖ್ಯ. ಆದರೆ ಹೀಗೆ ರಾತ್ರಿಯೆಲ್ಲ ಎದ್ದಿದ್ದರೆ ದೇಹ ನಿರ್ಜಲೀಕರಣಗೊಂಡು ಚರ್ಮದ ಸಮಸ್ಯೆಯನ್ನು ಉಂಟು ಮಾಡುತ್ತದೆ. ಚರ್ಮ ಒಣಗುವುದಕ್ಕೆ ಶುರು ಮಾಡುತ್ತದೆ.

* ಹೆಚ್ಚೆಚ್ಚು ರಾತ್ರಿ ನಿದ್ದೆಗೆಟ್ಟರೆ ಆಯಸ್ಸು ಕಡಿಮೆಯಾಗುತ್ತದೆ. ಆರೋಗ್ಯ ಚೆನ್ನಾಗಿ ಇದ್ದರೆ ಆಯಸ್ಸು ವೃದ್ದಿಯಾಗುತ್ತದೆ, ಜೀವನವೂ ಚೆನ್ನಾಗಿ ಇರುತ್ತದೆ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Tags :
Advertisement