For the best experience, open
https://m.suddione.com
on your mobile browser.
Advertisement

ಈ ಪದಾರ್ಥಗಳನ್ನ ತಿಂದ್ರೆ ರಾತ್ರಿ ಬೇಗ ನಿದ್ದೆ ಬರುತ್ತೆ : ಒಮ್ಮೆ ಟ್ರೈ ಮಾಡಿ...!

07:14 AM Aug 20, 2023 IST | suddionenews
ಈ ಪದಾರ್ಥಗಳನ್ನ ತಿಂದ್ರೆ ರಾತ್ರಿ ಬೇಗ ನಿದ್ದೆ ಬರುತ್ತೆ   ಒಮ್ಮೆ ಟ್ರೈ ಮಾಡಿ
Advertisement

Advertisement
Advertisement

ಕೆಲವೊಂದಿಷ್ಟು ಮಂದಿಗೆ ರಾತ್ರಿ ಎಷ್ಟೇ ಸಮಯವಾದರೂ ನಿದ್ದೆ ಬರುವುದಿಲ್ಲ. ಒದ್ದಾಡಿ ಒದ್ದಾಡಿ ಯಾವಾಗ್ಲೋ ನಿದ್ದೆ ಬರುತ್ತದೆ. ಅದರ ಜೊತೆಗೆ ಇತ್ತಿಚಿನ ದಿನಗಳಲ್ಲಿ ಮೊಬೈಲ್ ನಲ್ಲಿ ಅಡಿಕ್ಷನ್ ಆದವರು ಹೆಚ್ಚಾಗಿದ್ದಾರೆ. ರೀಲ್ಸ್ ಗಳನ್ನ ನೋಡಿಕೊಂಡು, ಯೂಟ್ಯೂಬ್ ನೋಡಿಕೊಂಡು ಮಲಗುವಷ್ಟರಲ್ಲಿ ಮಧ್ಯರಾತ್ರಿ ಆಗಿ ಬಿಡುತ್ತದೆ. ಇಂಥವರು ನಿದ್ದೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಂದು ಸಲಹೆ, ಪರಿಹಾರ ಇಲ್ಲಿದೆ.

ಓಟ್ಸ್ ಬಗ್ಗೆ ಕೇಳಿಯೇ ಇರ್ತೀರ. ಡಯೆಟ್ ಮಾಡುವವರು ಈ ಓಟ್ಸ್ ಅನ್ನ ಬಳಸುತ್ತಾರೆ. ಈಗ ತುಂಬಾ ಬೇಗ ನಿದ್ದೆ ಬರಬೇಕು ಎಂದವರು ಕೂಡ ಈ ಓಟ್ಸ್ ಬಳಸಬಹುದು. ಓಟ್ಸ್ ನಲ್ಲಿ ವಿಟಮಿನ್ ಗಳು, ಖನಿಜಾಂಶಗಳು ಹೆಚ್ಚಾಗಿರುವ ಕಾರಣ ಮನಸ್ಸು ಶಾಂತವಾಗಿ ನಿದ್ದೆ ಬೇಗ ಬರುತ್ತೆ.

Advertisement
Advertisement

ಈಗಾಗಲೇ ಅನೇಕ‌ ಸಂಶೋಧನೆಗಳು ಬಾಳೆ ಹಣ್ಣಿನ ಬಗ್ಗೆ ಹೇಳಿದೆ. ಅದರ ಪ್ರಕಾರ, ಬಾಳೆಹಣ್ಣು ತಿನ್ನುವುದರಿಂದ ನಿದ್ದೆ ಬಹಳ ಬೇಗ ಬರುತ್ತದೆ. ಇದರಲ್ಲಿ ಮೆಗ್ನಿಶಿಯಮ್, ಸಿರೋಟೋನಿನ್, ಮೆಲಟೋನಿನ್ ಅಂಶಗಳನ್ನು ಒಳಗೊಂಡಿರುವ ಕಾರಣ, ಉತ್ತಮ ನಿದ್ರೆಗೆ ಹೆಚ್ಚಿನ ಸಹಾಯ ಮಾಡುತ್ತದೆ.

Advertisement

ಗಾಢ-ಹಸಿರು ಮತ್ತು ಸಿಹಿ-ಹುಳಿ ಸುವಾಸನೆಯ ಕಿವಿ ಹಣ್ಣು ನೀವು ನಿರೀಕ್ಷಿಸದ ರೀತಿಯಲ್ಲಿ ವಿಟಮಿನ್ ಸಿ ಯಿಂದ ತುಂಬಿರುತ್ತದೆ. ಕಿವಿ ಹಣ್ಣಿನ ಒಂದು ಸ್ಲೈಸ್ 273 ಮಿಗ್ರಾಂ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ವಿಟಮಿನ್ ಸಿ ಜೊತೆಗೆ, ಕಿವಿ ಹಣ್ಣಿನಲ್ಲಿ ವಿಟಮಿನ್ ಎ, ಫೈಬರ್ ಮತ್ತು ಕ್ಯಾಲ್ಸಿಯಂ ಕೂಡ ಇದೆ. ಸಿರೊಟೋನಿನ್ ಹೊಂದಿರುವ ಕಿವಿ ಹಣ್ಣುಗಳನ್ನು ತಿನ್ನುವುದು ನಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.

Tags :
Advertisement