For the best experience, open
https://m.suddione.com
on your mobile browser.
Advertisement

ಪ್ರತಿನಿತ್ಯ ಬೆಳಗ್ಗೆ ಹೀಗೆ ಮಾಡಿದರೆ  ಕೊಲೆಸ್ಟ್ರಾಲ್ ಕರಗುತ್ತದೆ...!

07:18 AM Aug 18, 2024 IST | suddionenews
ಪ್ರತಿನಿತ್ಯ ಬೆಳಗ್ಗೆ ಹೀಗೆ ಮಾಡಿದರೆ  ಕೊಲೆಸ್ಟ್ರಾಲ್ ಕರಗುತ್ತದೆ
Advertisement

Advertisement

ಸುದ್ದಿಒನ್ : ಕೊಲೆಸ್ಟ್ರಾಲ್ ತುಂಬಾ ಅಪಾಯಕಾರಿಯಾಗುತ್ತಿದೆ. ಆರೋಗ್ಯವನ್ನು ಹಾಳು ಮಾಡುವುದಲ್ಲದೇ ಅಪಾಯಕಾರಿ ಕಾಯಿಲೆಗಳಿಗೆ ಈಡಾಗುವಂತೆ ಮಾಡುತ್ತದೆ‌. ಅದಕ್ಕಾಗಿಯೇ ಜೀವನಶೈಲಿಯನ್ನು ಬದಲಾಯಿಸುವುದು ತುಂಬಾ ಒಳ್ಳೆಯದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.  ಕೊಲೆಸ್ಟರಾಲ್ ಒಂದು ಕೊಬ್ಬಿನ, ಎಣ್ಣೆಯುಕ್ತ ಸ್ಟೆರಾಯ್ಡ್ ಆಗಿದ್ದು, ಇದು ರಕ್ತನಾಳಗಳಲ್ಲಿ ಪದರಕ್ಕೆ ಕಾರಣವಾಗುತ್ತದೆ. ಇದು ಮುಂದೆ ಅಧಿಕ ರಕ್ತದೊತ್ತಡ, ಹೃದಯಾಘಾತ, ಬ್ರೈನ್ ಸ್ಟ್ರೋಕ್ ಗೆ ಕಾರಣವಾಗುತ್ತದೆ. ವಾಸ್ತವವಾಗಿ ಇದರಲ್ಲಿ ಎರಡು ವಿಧದ ಕೊಲೆಸ್ಟ್ರಾಲ್ಗಳಿವೆ. ಅಧಿಕ ಸಾಂದ್ರತೆ ಇರುವ ಲಿಪೋಪ್ರೋಟಿನ್ (HDP) ಅಂದರೆ ಒಳ್ಳೆಯ ಕೊಲೆಸ್ಟರಾಲ್‌ ಮತ್ತು ಕಡಿಮೆ ಸಾಂದ್ರತೆ ಇರುವ ಲಿಪೋಪ್ರೋಟಿನ್ (LDP) ಅಂದರೆ ಕೆಟ್ಟ ಕೊಲೆಸ್ಟರಾಲ್‌ ಎಂದು ಪರಿಗಣಿಸಲಾಗುತ್ತದೆ.

ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಯಾವಾಗಲೂ
50 mg/dl ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಅದರಂತೆಯೇ ಕೆಟ್ಟ ಕೊಲೆಸ್ಟರಾಲ್‌ ಯಾವಾಗಲೂ
100 mg/dL ಗಿಂತ ಕಡಿಮೆಯಿರಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಾಗಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Advertisement

ಅಧಿಕ ಕೊಲೆಸ್ಟ್ರಾಲ್‌ನಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳಲ್ಲದೆ ಇನ್ನೂ ಅನೇಕ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ನೈಸರ್ಗಿಕವಾಗಿ ಕೆಟ್ಟ ಕೊಲೆಸ್ಟ್ರಾಲ್‌ನ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಹಾರಗಳನ್ನು ದೈನಂದಿನ ಉಪಹಾರದಲ್ಲಿ ಸೇವಿಸುವುದು ಉತ್ತಮ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ದೇಹದಲ್ಲಿ ನಿಯಂತ್ರಿಸಬಹುದು.

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಬೆಳಿಗ್ಗೆ ಯಾವ ಆಹಾರವನ್ನು ಸೇವಿಸಬೇಕು :

ವಾಲ್‌ನಟ್ಸ್ ಸೇವಿಸಿ: ಪ್ರತಿದಿನ ಬೆಳಗಿನ ಸ್ವಲ್ಪ ವಾಲ್‌ನಟ್‌ಗಳನ್ನು ಸೇವಿಸಿ. ಇದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆಯಾಗುತ್ತದೆ. ಇದು ಹೃದ್ರೋಗದ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಬಾದಾಮಿ: ಬಾದಾಮಿಯು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬಾದಾಮಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ..

ಆಲಿವ್ ಎಣ್ಣೆಯಿಂದ ಆಹಾರವನ್ನು ತಯಾರಿಸಿ: ಆಲಿವ್ ಎಣ್ಣೆಯಿಂದ ಅಡುಗೆ ಮಾಡುವುದು ತುಂಬಾ ಒಳ್ಳೆಯದು. ಈ ಎಣ್ಣೆಯು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಆಲಿವ್ ಎಣ್ಣೆಯಿಂದ ಉಪಹಾರ ಮಾಡಿ ತಿನ್ನಿ.

ಅಗಸೆ ಬೀಜಗಳನ್ನು ಸೇವಿಸಿ: ಅಗಸೆಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಇವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ. ಅಗಸೆಬೀಜದ ಪುಡಿಯನ್ನು ಸತತ 3 ತಿಂಗಳ ಕಾಲ ಬೆಳಿಗ್ಗೆ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು.

ಬೆಳಗಿನ ನಡಿಗೆ: ಬೆಳಗಿನ ವಾಕ್ ರಕ್ತದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ನಿಯಮಿತ ಏರೋಬಿಕ್ ವ್ಯಾಯಾಮವು ರಕ್ತದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು 5 ಪ್ರತಿಶತದಷ್ಟು ಹೆಚ್ಚಿಸುತ್ತದೆ.

ಕಿತ್ತಳೆ ರಸ: ಬೆಳಿಗ್ಗೆ ಒಂದು ಲೋಟ ಕಿತ್ತಳೆ ಹಣ್ಣಿನ ರಸವನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಕಿತ್ತಳೆ ಹಣ್ಣಿನಲ್ಲಿ ಫ್ಲೇವನಾಯ್ಡ್‌ಗಳಿವೆ, ಅದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. 4 ವಾರಗಳ ಕಾಲ ನಿರಂತರವಾಗಿ ಬೆಳಿಗ್ಗೆ 750 ಮಿಲಿ ಕಿತ್ತಳೆ ಹಣ್ಣಿನ ರಸವನ್ನು ಕುಡಿಯುವುದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಒಂದು ತಿಂಗಳ ಕಾಲ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಅಧಿಕ ತೂಕದ ಸಮಸ್ಯೆಯೂ ನಿಯಂತ್ರಣದಲ್ಲಿರುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Tags :
Advertisement