Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹೊಟ್ಟೆಯ ಮೇಲ್ಭಾಗದಲ್ಲಿ ನೋವು, ಸುಸ್ತು ಇದ್ದರೆ ಕಡೆಗಣಿಸಬೇಡಿ : ಲಿವರ್ ಡ್ಯಾಮೇಜ್ ಆಗಿರಬಹುದು

05:54 AM Apr 07, 2024 IST | suddionenews
Advertisement

 

Advertisement

ನಮ್ಮ ದೇಹದಲ್ಲಿ ಯಕೃತ್ ಬಹಳ ಮುಖ್ಯ. ಇದನ್ನು ಹಾಳಾಗದಂತೆ ನೋಡಿಕೊಳ್ಳಬೇಕು. ಆದರೆ ಈ ಯಕೃತ್ ಒಂದು ಕಡೆ ಹಾಳಾದರೂ ಮತ್ತೊಂದು ಕಡೆ ಕೆಲಸ ಮಾಡುತ್ತಾ ನಮ್ಮ ದೇಹವನ್ನು ಸಮತೋಲನವಾಗಿಟ್ಟಿರುತ್ತದೆ. ಅದರ ಜೊತೆ ಜೊತೆಗೇನೆ ಒಂದಷ್ಟು ರೋಗ ಲಕ್ಷಣಗಳು ಕಾಣಿಸುತ್ತವೆ ಆಗಲೇ ನೀವೂ ಎಚ್ಚರಗೊಳ್ಳಬೇಕು. ಜೀವರಾಸಾಯನಿಕ ಕ್ರಿಯೆಯನ್ನು ನಿಯಂತ್ರಿಸುವುದು, ದೇಹದಿಂದ ಕಲ್ಮಶಗಳನ್ನು ನಿವಾರಿಸುವುದು ಮತ್ತು ಜೀರ್ಣಕ್ರಿಯೆಯನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಹಾಗಾದ್ರೆ ಯಕೃತ್ ಸಮಸ್ಯೆಯಾದರೆ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ ಎಂಬ ಮಾಹಿತಿ ಹೀಗಿದೆ‌.

 

Advertisement

* ರೋಗಿಯ ಕಣ್ಣುಗಳು ಮತ್ತು ಚರ್ಮದಲ್ಲಿ ಹಳದಿ ಬಣ್ಣ ಕಾಣಿಸಿ ಕೊಳ್ಳುತ್ತದೆ.

* ಹೊಟ್ಟೆಯ ಬಲಭಾಗದ ಕೊಂಚ ಮೇಲೆ, ಪಕ್ಕೆಲುಬುಗಳು ಮುಗಿಯವ ಭಾಗದಲ್ಲಿ ತೀಕ್ಷ್ಣ ನೋವು ಕಾಣಿಸಿ ಕೊಳ್ಳುತ್ತದೆ. ಜೊತೆಗೇ ಈ ಭಾಗದಲ್ಲಿ ಊದಿಕೊಂಡಿರುತ್ತದೆ.

* ಸತತವಾದ ಬಳಲಿಕೆ ಮತ್ತು ನಿಃಶಕ್ತಿಯನ್ನು ಉಂಟು ಮಾಡುತ್ತದೆ. ಇದರಿಂದ ದಿನನಿತ್ಯದ ಕೆಲಸಗಳು ಸಾಧ್ಯವಾಗುವುದಿಲ್ಲ ಮತ್ತು ಉತ್ಪಾದನೆಯೂ ಕಡಿಮೆಯಾಗುತ್ತದೆ.

* ರೋಗಿಗಳ ದೇಹದ ತೂಕ ಶೀಘ್ರವಾಗಿ ಇಳಿಮುಖವಾಗುತ್ತಾ ಸಾಗುತ್ತದೆ ಹಾಗೂ ಇವರಿಗೆ ಹಸಿವೂ ಕಡಿಮೆ ಯಾಗುತ್ತದೆ. ಏನನ್ನು ತಿಂದರೂ ಶಕ್ತಿ ಸಿಗದೇ ಹೋಗುತ್ತದೆ.

* ಸತತವಾಗಿ ವಾಕರಿಕೆ ಮತ್ತು ವಾಂತಿಗೆ ಕಾರಣವಾಗುತ್ತದೆ. ಇದು ಆಹಾರ ಸೇವನೆ ಸಾಧ್ಯವಾಗದಂತೆ ಹಾಗೂ ಸೇವಿಸಿದರೂ ಇದರ ಪೋಷಕಾಂಶಗಳು ಪೂರ್ಣವಾಗಿ ದೊರಕದಂತೆ ಮಾಡುತ್ತದೆ.

* ಮೈ ಇಡೀ ತುರಿಕೆಗೆ ಒಳಗಾಗುತ್ತದೆ ಹಾಗೂ ಚಡಪಡಿಕೆಯನ್ನು ಉಂಟುಮಾಡುತ್ತದೆ. ಇಡಿಯ ದಿನ ತುರಿಸುತ್ತಾ ರೋಗಿಯ ಜೀವನ ಬಲುವಾಗಿಯೇ ಬಾಧೆಗೊಳಗಾಗುತ್ತದೆ.

* ಮಲ ಮೂತ್ರಗಳ ಬಣ್ಣಗಳು ಬದಲಾಗುತ್ತವೆ. ಮೂತ್ರದ ಬಣ್ಣ ಅತಿ ಗಾಢವಾಗುವುದು ಮತ್ತು ಮಲದ ಬಣ್ಣ ಪೇಲವವಾಗುವುದು. ಇವು ಯಕೃತ್‌ನ ಹಾನಿಯನ್ನು ಸ್ಪಷ್ಟವಾಗಿ ಪ್ರಕಟಿಸುತ್ತವೆ.

Advertisement
Tags :
featuredhealth tipshealth tips kannadakannada health tipsಆರೋಗ್ಯ ಮಾಹಿತಿಆರೋಗ್ಯ ಸಲಹೆಕಡೆಗಣಿಸಬೇಡಿಮೇಲ್ಭಾಗದಲ್ಲಿ ನೋವುಲಿವರ್ ಡ್ಯಾಮೇಜ್ಸುಸ್ತುಹೊಟ್ಟೆ
Advertisement
Next Article