Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೊಲೆಸ್ಟ್ರಾಲ್ ಜಾಸ್ತಿ ಆದ್ರೆ ಪುರುಷರಲ್ಲಿ ರಾತ್ರಿ ವೇಳೆ ಈ ಲಕ್ಷಣಗಳು ಕಾಣಿಸುತ್ತವೆ ಎಚ್ಚರ..!

06:32 AM Mar 13, 2024 IST | suddionenews
Advertisement

 

Advertisement

ಇತ್ತೀಚಿನ ದಿನಗಳಲ್ಲಿ ತಿನ್ನುವ ಆಹಾರ, ಒತ್ತಡದ ಕೆಲಸದಿಂದಾಗಿ ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರಹವಾಗುತ್ತಿದೆ. ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಪುರುಷರು ಕೂಡ ಆರೋಗ್ಯದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಕೊಲೆಸ್ಟ್ರಾಲ್ ಜಾಸ್ತಿ ಇದ್ದರೆ ಅದನ್ನು ಎಚ್ಚರಿಸುವ ಕೆಲವೊಂದು ಲಕ್ಷಣಗಳು ಕಂಡು ಬರುತ್ತವೆ. ಅವುಗಳು ಈ ಕೆಳಕಂಡಂತೆ ಇವೆ.

* ಅಧಿಕ ಕೊಲೆಸ್ಟ್ರಾಲ್ ಮಟ್ಟವು ಪುರುಷರಲ್ಲಿ ಹೆಚ್ಚಾಗಿ ಸಮಸ್ಯೆಗೆ ಕಾರಣವಾಗುತ್ತಲಿದೆ. ಎದೆನೋವು ಅಥವಾ ಉಸಿರಾಟದ ತೊಂದರೆಯು ಇದರ ಸಾಮಾನ್ಯ ಲಕ್ಷಣಗಳು. ಆದರೆ ಕೆಲವೊಂದು ಲಕ್ಷಣಗಳು ರಾತ್ರಿ ವೇಳೆ ಕಾಲು ಮತ್ತು ಪಾದಗಳಲ್ಲಿ ಕಂಡುಬರಬಹುದು.

Advertisement

* ರಾತ್ರಿ ವೇಳೆ ಕಾಲುಗಳಲ್ಲಿ ಸೆಳೆತ ಕಂಡುಬರುವುದು ಮತ್ತು ಇದು ನಿದ್ರೆಗೆ ತೊಂದರೆ ಉಂಟು ಮಾಡುವುದು. ಹೀಗಾಗಿ ದೇಹಕ್ಕೆ ವಿಶ್ರಾಂತಿ ಸಿಗದೇ ಇರಬಹುದು. ಪದೇ ಪದೇ ಸೆಳೆತ ಕಂಡುಬರುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

* ಕೊಲೆಸ್ಟ್ರಾಲ್ ಜಮೆ ಆಗಿ ರಕ್ತ ಸಂಚಾರಕ್ಕೆ ತೊಂದರೆ ಆಗುವ ಕಾರಣ ಪಾದಗಳು ತಣ್ಣಗಾಗುವುದು. ಆರೋಗ್ಯಕಾರಿ ಆಹಾರ ಕ್ರಮ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಒಳ್ಳೆಯದು.

* ಕೊಲೆಸ್ಟ್ರಾಲ್ ಹೆಚ್ಚಾದ ಸಂದರ್ಭದಲ್ಲಿ ಸರಿಯಾಗಿ ರಕ್ತ ಸರಬರಾಜು ಆಗದೆ, ಅಲ್ಲಿ ದ್ರವಾಂಶ ಶೇಖರಣೆ ಆಗುವುದು ಮತ್ತು ಇದರಿಂದ ಹಿಮ್ಮಡಿ ಊದಿಕೊಳ್ಳುವುದು. ಹೀಗೆ ಹಲವು ರೋಗ ಲಕ್ಷಣಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಿಳಿಸುತ್ತವೆ. ಹೀಗಾಗಿ ಆರೋಗ್ಯವಂತರಾಗಿರಲು ಎಚ್ಚರದಿಂದ ಇರಿ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

 

Advertisement
Tags :
AppearbengaluruBewarechitradurgacholesterolhealth tipshighmennightsuddionesuddione newssymptomsಆರೋಗ್ಯ ಮಾಹಿತಿಎಚ್ಚರಕೊಲೆಸ್ಟ್ರಾಲ್ಚಿತ್ರದುರ್ಗಜಾಸ್ತಿಪುರುಷರುಬೆಂಗಳೂರುರಾತ್ರಿ ವೇಳೆಲಕ್ಷಣಗಳುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article