For the best experience, open
https://m.suddione.com
on your mobile browser.
Advertisement

ಕೊಲೆಸ್ಟ್ರಾಲ್ ಜಾಸ್ತಿ ಆದ್ರೆ ಪುರುಷರಲ್ಲಿ ರಾತ್ರಿ ವೇಳೆ ಈ ಲಕ್ಷಣಗಳು ಕಾಣಿಸುತ್ತವೆ ಎಚ್ಚರ..!

06:32 AM Mar 13, 2024 IST | suddionenews
ಕೊಲೆಸ್ಟ್ರಾಲ್ ಜಾಸ್ತಿ ಆದ್ರೆ ಪುರುಷರಲ್ಲಿ ರಾತ್ರಿ ವೇಳೆ ಈ ಲಕ್ಷಣಗಳು ಕಾಣಿಸುತ್ತವೆ ಎಚ್ಚರ
Advertisement

Advertisement

ಇತ್ತೀಚಿನ ದಿನಗಳಲ್ಲಿ ತಿನ್ನುವ ಆಹಾರ, ಒತ್ತಡದ ಕೆಲಸದಿಂದಾಗಿ ಕೊಲೆಸ್ಟ್ರಾಲ್ ದೇಹದಲ್ಲಿ ಸಂಗ್ರಹವಾಗುತ್ತಿದೆ. ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಪುರುಷರು ಕೂಡ ಆರೋಗ್ಯದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಕೊಲೆಸ್ಟ್ರಾಲ್ ಜಾಸ್ತಿ ಇದ್ದರೆ ಅದನ್ನು ಎಚ್ಚರಿಸುವ ಕೆಲವೊಂದು ಲಕ್ಷಣಗಳು ಕಂಡು ಬರುತ್ತವೆ. ಅವುಗಳು ಈ ಕೆಳಕಂಡಂತೆ ಇವೆ.

* ಅಧಿಕ ಕೊಲೆಸ್ಟ್ರಾಲ್ ಮಟ್ಟವು ಪುರುಷರಲ್ಲಿ ಹೆಚ್ಚಾಗಿ ಸಮಸ್ಯೆಗೆ ಕಾರಣವಾಗುತ್ತಲಿದೆ. ಎದೆನೋವು ಅಥವಾ ಉಸಿರಾಟದ ತೊಂದರೆಯು ಇದರ ಸಾಮಾನ್ಯ ಲಕ್ಷಣಗಳು. ಆದರೆ ಕೆಲವೊಂದು ಲಕ್ಷಣಗಳು ರಾತ್ರಿ ವೇಳೆ ಕಾಲು ಮತ್ತು ಪಾದಗಳಲ್ಲಿ ಕಂಡುಬರಬಹುದು.

Advertisement

* ರಾತ್ರಿ ವೇಳೆ ಕಾಲುಗಳಲ್ಲಿ ಸೆಳೆತ ಕಂಡುಬರುವುದು ಮತ್ತು ಇದು ನಿದ್ರೆಗೆ ತೊಂದರೆ ಉಂಟು ಮಾಡುವುದು. ಹೀಗಾಗಿ ದೇಹಕ್ಕೆ ವಿಶ್ರಾಂತಿ ಸಿಗದೇ ಇರಬಹುದು. ಪದೇ ಪದೇ ಸೆಳೆತ ಕಂಡುಬರುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

* ಕೊಲೆಸ್ಟ್ರಾಲ್ ಜಮೆ ಆಗಿ ರಕ್ತ ಸಂಚಾರಕ್ಕೆ ತೊಂದರೆ ಆಗುವ ಕಾರಣ ಪಾದಗಳು ತಣ್ಣಗಾಗುವುದು. ಆರೋಗ್ಯಕಾರಿ ಆಹಾರ ಕ್ರಮ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಒಳ್ಳೆಯದು.

* ಕೊಲೆಸ್ಟ್ರಾಲ್ ಹೆಚ್ಚಾದ ಸಂದರ್ಭದಲ್ಲಿ ಸರಿಯಾಗಿ ರಕ್ತ ಸರಬರಾಜು ಆಗದೆ, ಅಲ್ಲಿ ದ್ರವಾಂಶ ಶೇಖರಣೆ ಆಗುವುದು ಮತ್ತು ಇದರಿಂದ ಹಿಮ್ಮಡಿ ಊದಿಕೊಳ್ಳುವುದು. ಹೀಗೆ ಹಲವು ರೋಗ ಲಕ್ಷಣಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಿಳಿಸುತ್ತವೆ. ಹೀಗಾಗಿ ಆರೋಗ್ಯವಂತರಾಗಿರಲು ಎಚ್ಚರದಿಂದ ಇರಿ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Advertisement
Tags :
Advertisement