ಮನೆ ಮದ್ದು : ಮನೆಯಿಂದ ಸೊಳ್ಳೆ ಓಡಿಸಲು ಹೀಗೆ ಮಾಡಿ...!
ಬೇಸಿಗೆ ಕಾಲ, ಮಳೆಗಾಲ ಬಂತು ಅಂದ್ರೆ ಸೊಳ್ಳೆಗಳ ಕಾಟ ಜಾಸ್ತಿ. ಮಲಗುವುದಕ್ಕೂ ಬಿಡದೆ ಕಿವಿಯ ಬಳಿ ಗುಯ್ ಅನ್ನೋದು ಅಲ್ಲದೆ, ಕಚ್ಚಿ ನೂರಾರು ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಕಾಯಿಲೆಗಳಿಗೆ ತುತ್ತಾಗಬಾರದು ಎಂದಾದರೇ ಸೊಳ್ಳೆಗಳು ಸುಳಿಯದಂತೆ ನೋಡಿಕೊಳ್ಳಬೇಕಾಗುತ್ತದೆ. ಸೊಳ್ಳೆ ಬತ್ತಿ ಹಚ್ಚಿದರೆ ಕೆಲವರಿಗೆ ಆಗುವುದಿಲ್ಲ. ಇನ್ಯಾವುದೋ ಕೆಮಿಕಲ್ ಬಳಕೆ ಮಾಡುವಂತೆಯೂ ಇಲ್ಲ. ಅದೆಲ್ಲವನ್ನು ಬಿಟ್ಟು ಅಡುಗೆ ಮನೆಯಲ್ಲಿರುವ ಪದಾರ್ಥಗಳ ಮೂಲಕವೇ ಸೊಳ್ಳೆ ಓಡಿಸಬಹುದು. ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಸೊಳ್ಳೆ ಓಡಿಸಲು ನಿಮ್ಮ ಮನೆಯಲ್ಲಿ ಒಂದು ನಿಂಬೆ ಹಣ್ಣು, ಎರಡು ಲವಂಗ ಇದ್ದರೆ ಸಾಕು. ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ, ಅದಕ್ಕೆ ಲವಂಗ ಸಿಕ್ಕಿಸಿ ಇಡಿ. ಆ ವಾಸನೆಗೆ ಸೊಳ್ಳೆಗಳು ಓಡಿ ಹೋಗುತ್ತವೆ.
ಇದರ ಜೊತೆಗೆ ಬೆಳ್ಳುಳ್ಳಿಯನ್ನು ಟ್ರೈ ಮಾಡಬಹುದು. ಎಸಳುಗಳನ್ನು ಚೆನ್ನಾಗಿ ಜಜ್ಜಿ. ಬಳಿಕ ಬಿಸಿ ನೀರಿನಲ್ಲಿ ಹಾಕಿ ಕುದಿಸಿ. ಆ ನೀರನ್ನು ತಂದು ಮನೆಯ ಮಧ್ಯ ಭಾಗದಲ್ಲಿ ಇಡಿ. ಆ ಬೆಳ್ಳುಳ್ಳಿಯ ವಾಸನೆಗೂ ಸೊಳ್ಳೆಗಳಿಗೂ ಆಗುವುದಿಲ್ಲ. ಆ ವಾಸನೆಗೆ ತಲೆ ಸುತ್ತಿ ಮನೆಯಿಂದ ಓಡಿ ಹೋಗುತ್ತವೆ.
ಯಾವುದಾದರೊಂದು ಸೋಪನ್ನು ನೀರಿನಲ್ಲಿ ಕದಡಿ. ನೀರಿರುವ ಬಕೆಟ್ ಅನ್ನು ಮನೆಯ ಮಧ್ಯ ಭಾಗದಲ್ಲಿ ಇಡಿ. ಆ ವಾಸನೆಗೆ ಸೊಳ್ಳೆಗಳು ಸುಳಿಯುವುದೇ ಇಲ್ಲ
ಕರ್ಪೂರದಿಂದಾನೂ ಸೊಳ್ಳೆಗಳನ್ನು ಓಡಿಸಬಹುದು. ದೇವರ ಕೋಣೆಯಲ್ಲಿರುವ ಕರ್ಪೂರವನ್ನು ಮನೆಯ ಮಧ್ಯ ಭಾಗದಲ್ಲಿ ಜಚ್ಚಿ. ಆ ವೇಳೆ ಮನೆಯ ಎಲ್ಲಾ ಕಿಟಕಿಗಳನ್ನು ಬಂದ್ ಮಾಡಿ. ಆಗ ಕರ್ಪೂರದ ಹೊಗೆ ಮನೆಯಲ್ಲಿಯೇ ಆವರಿಅಉವಂತೆ ಮಾಡಿ. ಅದಕ್ಕೂ ಸೊಳ್ಳೆಗಳು ಇರುವುದಿಲ್ಲ.