For the best experience, open
https://m.suddione.com
on your mobile browser.
Advertisement

ಗೋರಿ ಕಾಯಿಯಲ್ಲಿದೆ ದೇಹಕ್ಕೆ ಪೂರ್ತಿಯಾಗೋ ವಿಟಮಿನ್ಸ್..!

08:26 AM Oct 12, 2021 IST | suddionenews
ಗೋರಿ ಕಾಯಿಯಲ್ಲಿದೆ ದೇಹಕ್ಕೆ ಪೂರ್ತಿಯಾಗೋ ವಿಟಮಿನ್ಸ್
Advertisement

ತರಕಾರಿಗಳಲ್ಲಿ ಕೆಲವರಿಗೆ ಇಷ್ಟ ಆಗದೆ ಇರೋದು ಅಂದ್ರೆ ಗೋರಿ ಕಾಯಿ ಅಥವಾ ಚವಳಿಕಾಯಿ.. ಉತ್ತರ ಕರ್ನಾಟಕ ಭಾಗದಲ್ಲಿ ಇದನ್ನ ಚವಳಿ ಕಾಯಿ ಅಂತಾನೆ ಕರೆಯುತ್ತಾರೆ. ಜೋಳದ ರೊಟ್ಟಿ ಜೊತೆಗೆ ಗೋರಿಕಾಯಿ ಪ್ಲಯ ಮಾಡಿಕೊಂಡು ತಿಂತಾ ಇದ್ರೆ ಆಹಾ ಎಂಥ ಘಮ ಘಮ ಎನಿಸುತ್ತೆ.

Advertisement

ಇದರಲ್ಲಿ ದೇಹಕ್ಕೆ ಸಾಕಾಗೋ.. ಬೇಕಾಗೋ ಎಲ್ಲಾ ವಿಟಮಿನ್ ಗಳು ಒಟ್ಟೊಟ್ಟಿಗೆ ಸಿಗುತ್ತೆ.. ಎ ವಿಟಮಿನ್ ಜೊತೆಗೆ ಒಂದಷ್ಟು ಕ್ಯಾಲ್ಸಿಯಂ ಕೂಡ ಸಿಗುತ್ತೆ..

ಗೋರಿ‌ಕಾಯಿ ತಿನ್ನೋದ್ರಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅತ್ಯಧಿಕ ನಾರಿನಂಶ ಇರೋ ಕಾರಣ ಮಲಬದ್ಧತೆಯನ್ನು ದೂರವಿಡುತ್ತೆ.

Advertisement

ಮಧುಮೇಹಿಗಳು ಯಾವುದೇ ಭಯವಿಲ್ಲದೇ ಈ ಆಹಾರವನ್ನ ಸೇವಿಸಬಹುದು. ಯಾಕಂದ್ರೆ ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದೆ.

ಕಣ್ಣಿನ ಆರೋಗ್ಯ ಕಾಪಾಡುವಲ್ಲಿಯೂ ಈ ತರಕಾರಿ ಉತ್ತಮ. ಯಾಕಂದ್ರೆ ಇದರಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿದೆ.

ಅಷ್ಟೇ ಅಲ್ಲ ಬೊಜ್ಜಿನ ಸಮಸ್ಯೆಯಿಂದ ಏನಪ್ಪ ಮಾಡೋದು ಅನ್ನುವವರು ಬೊಜ್ಜು ಕರಗಿಸಲು ಈ ತರಕಾರಿ ತಿನ್ನಬಹುದು.

Tags :
Advertisement