For the best experience, open
https://m.suddione.com
on your mobile browser.
Advertisement

ರಸ್ತೆಯಲ್ಲೆಲ್ಲಾ ಕಾಣುವ ಈ ಕದಂಬ ಮರದಿಂದ ನೋವು ನಿವಾರಿಸೋ ಶಕ್ತಿ ಇದೆ..!

07:29 AM Nov 27, 2021 IST | suddionenews
ರಸ್ತೆಯಲ್ಲೆಲ್ಲಾ ಕಾಣುವ ಈ ಕದಂಬ ಮರದಿಂದ ನೋವು ನಿವಾರಿಸೋ ಶಕ್ತಿ ಇದೆ
Advertisement

ಕದಂಬ ಮರ..‌ಇದರ ಹೆಸರು ನಿಮ್ಗೆ ಗೊತ್ತಾಗದೇ ಇರಬಹುದು. ಆದ್ರೆ ಮರದ ಚಿತ್ರ ನೋಡಿದ್ರೆ ನಿಮ್ಗೆ ಗೊತ್ತಾಗಿಯೇ ಗೊತ್ತಾಗಿರುತ್ತೆ. ಈ ಮರಗಳು ಗ್ರಾಮೀಣ ಅಷ್ಟೇ ಅಲ್ಲ ನಗರ ಪ್ರದೇಶದಲ್ಲೂ ಕಾಣ ಸಿಗುತ್ತವೆ. ಎಷ್ಟೋ ಕಡೆ ರಸ್ತೆಯಲ್ಲೆಲ್ಲಾ ಇದರ ಕಾಯಿ ಬಿದ್ದಿರುತ್ತೆ. ಅದು ಒಳ್ಳೆ ಆಟವಾಡುವ ಬಾಲ್ ಥರ ಇರುತ್ತೆ. ಆದ್ರೆ ಇದ್ರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?

Advertisement
Advertisement

Advertisement

* ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಅನೇಕ ಅಧ್ಯಯನಗಳ ಪ್ರಕಾರ ಕದಂಬ ಮರದ ಎಲೆಗಳು, ತೊಗಟೆ ಮತ್ತು ಬೇರುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪರಿಣಾಮಕಾರಿ. ಈ ಮರದ ಎಲೆಗಳು ಮೆಥನಾಲಿಕ್ ಸಾರವನ್ನು ಹೊಂದಿವೆ.

Advertisement
Advertisement

* ಕದಂಬ ಮರಗಳ ಎಲೆಗಳು ದೇಹದಲ್ಲಿ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರ ಎಲೆಗಳನ್ನು ಬಟ್ಟೆಯಲ್ಲಿ ಸುತ್ತಿ ದೇಹದಲ್ಲಿ ನೋವು ಇರುವ ಪ್ರದೇಶಕ್ಕೆ ಬಿಗಿಯಾಗಿ ಕಟ್ಟಿದರೆ ನೋವು ಕಡಿಮೆ ಮಾಡಬಹುದು. ಈ ಮರದ ಎಲೆಗಳು ಮತ್ತು ತೊಗಟೆ ನೋವು ನಿವಾರಕ ಮತ್ತು ಉರಿಯೂತದ ಗುಣಗಳನ್ನು ದೂರ ಮಾಡುವ ಗುಣ ಹೊಂದಿದೆ.

* ಆ್ಯಂಟಿ ಮೈಕ್ರೊಬಿಯಲ್ ಅಂಶ ಹೊಂದಿದೆ
ಪ್ರಾಚೀನ ಕಾಲದಲ್ಲಿ ಇದನ್ನು ಚರ್ಮ ರೋಗಗಳಿಗೆ ಚಿಕಿತ್ಸೆ ನೀಡಲು ಆಂಟಿಮೈಕ್ರೊಬಿಯಲ್ ತಂತ್ರವಾಗಿ ಬಳಸಲಾಗುತ್ತಿತ್ತು. ಈ ಮರದ ಸಾರವನ್ನು ಬಳಸಿ ಪೇಸ್ಟ್ ತಯಾರಿಸಲಾಗುತ್ತದೆ. ಇದರ ಸಾರವು ಬ್ಯಾಕ್ಟೀರಿಯಾ ವಿರುದ್ಧ ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಆಗಿ ಕಾರ್ಯನಿರ್ವಹಿಸುತ್ತದೆ.

* ಕದಂಬ ಮರದಲ್ಲಿ ಕ್ಲೋರೊಜೆನಿಕ್ ಆಮ್ಲವಿದೆ. ಇದು ಒಂದು ರೀತಿಯ ಆಂಟಿಹೆಪಟೊಟಾಕ್ಸಿಕ್ ಆಗಿದೆ. ಅನೇಕ ಅಧ್ಯಯನಗಳ ಪ್ರಕಾರ ಯಕೃತ್ತಿನ ಅಥವಾ ಪಿತ್ತಜನಕಾಂಗದ ಆರೋಗ್ಯವನ್ನು ಸುಧಾರಿಸಲು ಕದಂಬ ಮರದ ಅಂಶವು ಪ್ರಯೋಜನಕಾರಿಯಾಗಿದೆ.

* ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಕದಂಬ ಮರದ ಬೇರಿನ ರಸವು ಬೊಜ್ಜು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Advertisement
Tags :
Advertisement