ಈ ಮಳೆಯಲ್ಲಿ ನೆನೆದಾಗ ತಲೆ ತುರಿಕೆ ಆಗುತ್ತಾ..? ಇಲ್ಲಿದೆ ಪರಿಹಾರ
ಮುಂಗಾರು ಮಳೆ ಜೋರಾಗಿದೆ. ಹೊರಗೆ ಹೋದ ಮಹಿಳೆಯರು ಕೆಲವೊಮ್ಮೆ ಮಳೆಯಲ್ಲಿ ನೆನೆಯುವಂತಾಗುತ್ತದೆ. ಇನ್ನು ಕೆಲವೊಮ್ಮೆ ಇಷ್ಟಪಟ್ಟು ಬೇಕಂತಾನೆ ಮಳೆಯಲ್ಲಿ ನೆನೆಯುತ್ತಾರೆ. ಕೆಲವರಿಗೆ ಈ ಮಳೆಯ ಹನಿ ಆಗುವುದಿಲ್ಲ. ತಲೆ ತುರಿಕೆಯಾಗುವ ಸಾಧ್ಯತೆ ಇರುತ್ತದೆ. ಅಂತವರಿಗೆ ಇಲ್ಲೊಂದಿಷ್ಟು ಪರಿಹಾರವಿದೆ.
* ನಿಂಬೆಯನ್ನು ಬಳಸುವುದರಿಂದ ತುರಿಕೆ ಕಡಿಮೆಯಾಗುತ್ತದೆ. ಒಂದು ಕಪ್ ನಲ್ಲಿ ನೀರಿನಲ್ಲಿ ನಿಂಬೆ ರಸ ಬೆರೆಸಿ ನೆತ್ತಿಗೆ ಬೆರೆಸಿ, ನೆತ್ತಿಗೆ ಹಚ್ಚಿದರೆ, ತುರಿಕೆ ಕಡಿಮೆಯಾಗುತ್ತದೆ.
* 2 ಚಮಚ ಮೆಂತ್ಯವನ್ನು ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಅದರಲ್ಲಿ 1 ಚಮಚ ಜೇನುತುಪ್ಪ ಮತ್ತು 1 ಚಮಚ ಅಲೋವೆರಾ ಜೆಲ್ ಅನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿ. ನಂತರ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಇರಿಸಿ. ಅದರ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.
* 1 ಕಪ್ ಆಪಲ್ ಸೈಡರ್ ವಿನೆಗರ್ ಅನ್ನು 1 ಕಪ್‌ನಲ್ಲಿ ನೀರಿನಲ್ಲಿ ಮಿಕ್ಸ್ ಮಾಡಿ. ಈಗ ಈ ನೀರನ್ನು ಕೂದಲಿಗೆ ಹಚ್ಚಿ 10 ನಿಮಿಷಗಳ ಕಾಲ ಇರಿಸಿ. ನಂತರ ಕೂದಲನ್ನು ಶಾಂಪೂ ಮಾಡಿ ತೊಳೆಯಿರಿ.